Karnataka news paper

ಭಾರತ ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ಸಮಸ್ಯೆ ಇದೆ ಎಂದ ಚೋಪ್ರಾ!


ಹೈಲೈಟ್ಸ್‌:

  • ಟೀಮ್‌ ಇಂಡಿಯಾ ಬ್ಯಾಟಿಂಗ್‌ ವಿಭಾಗದಲ್ಲಿ ಸಮಸ್ಯೆ ಇದೆ ಎಂದ ಚೋಪ್ರಾ.
  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ.
  • ಡಿ.26 ಭಾನುವಾರದಿಂದ ಸೆಂಚೂರಿಯನ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌.

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ನಿಮಿತ್ತ ಭಾರತ ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ದೊಡ್ಡ ಸಮಸ್ಯೆ ಇದೆ ಎಂದು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಕೆಲ ಸರಣಿಗಳಿಂದ ಟೀಮ್‌ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಚೇತೇಶ್ವರ್ ಪೂಜಾರ, ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಫಾರ್ಮ್‌ಗೆ ಮರಳಲು ಪರದಾಡುತ್ತಿದ್ದಾರೆ. ಇದರ ನಡುವೆ ಇನ್‌ ಫಾರ್ಮ್‌ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಟೆಸ್ಟ್‌ ಸರಣಿಯಿಂದ ಹೊರ ಬಿದಿದ್ದಾರೆ. ಇದು ಪ್ರವಾಸಿ ತಂಡಕ್ಕೆ ಭಾರಿ ಹಿನ್ನಡೆಯನ್ನು ತಂದೊಡ್ಡಿದೆ.

ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಆಕಾಶ್‌ ಚೋಪ್ರಾ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಬಗ್ಗೆ ಚರ್ಚೆ ನಡೆಸಿದರು ಹಾಗೂ ಕೊಹ್ಲಿ ಪಡೆಯ ಬ್ಯಾಟಿಂಗ್‌ ಲೈನ್‌ ಅಪ್‌ ಬಗ್ಗೆ ಬೆಳಕು ಚೆಲ್ಲಿದರು.

IND vs SA: ಬಾಕ್ಸಿಂಗ್ ಡೇ ಟೆಸ್ಟ್‌ಗೆ ತಂಡಗಳ ಸಂಭಾವ್ಯ ಪ್ಲೇಯಿಂಗ್ XI ಇಂತಿದೆ..

“ಮೊಹಮ್ಮದ್‌ ಶಮಿ ಹಾಗೂ ಜಸ್‌ಪ್ರಿತ್‌ ಬುಮ್ರಾ ಸೇರಿದಂತೆ ಕೊನೆಯ ಬಾರಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಕೀ ಆಟಗಾರರು ಇದೀಗ ತಂಡದಲ್ಲಿದ್ದಾರೆ. ಈಗ ಮೊಹಮ್ಮದ್‌ ಸಿರಾಜ್‌ ಸೇರ್ಪಡೆಯಾಗಿದ್ದಾರೆ. ಆದರೆ ತಂಡದ ಬ್ಯಾಟಿಂಗ್‌ ಲೈನ್‌ ಅಪ್‌ನಲ್ಲಿ ಸಮಸ್ಯೆ ಇರುವುದು ನನಗೆ ಕಾಣುತ್ತಿದೆ. ಸದ್ಯದ ಸನ್ನಿವೇಶದಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ಎಡವುತ್ತಿರುವುದು ನನ್ನನ್ನು ಚಿಂತೆಗೀಡು ಮಾಡಿದೆ,” ಎಂದರು.

“ರೋಹಿತ್‌ ಶರ್ಮಾ, ರವೀಂದ್ರ ಜಡೇಜಾ ಹಾಗೂ ಅಕ್ಷರ್‌ ಪಟೇಲ್‌ ತಂಡದಲ್ಲಿ ಇಲ್ಲ. ಹಾಗಾಗಿ ಬ್ಯಾಟಿಂಗ್‌ ವಿಭಾಗ ಸ್ವಲ್ಪ ದುರ್ಬಲವಾಗಿ ಕಾಣುತ್ತಿದೆ. ಒಂದು ಕಡೆ ತಂಡದ ಬ್ಯಾಟಿಂಗ್‌ ಆಧಾರ ಸ್ಥಂಭಗಳಾದ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್‌ ಪೂಜಾರ ಫಾರ್ಮ್‌ನಲ್ಲಿ ಇಲ್ಲ. ಇದು ತಂಡದಲ್ಲಿನ ಸಮಸ್ಯೆಯನ್ನು ಹುಟ್ಟು ಹಾಕಿದೆ,” ಎಂದು ಬೇಸರ ವ್ಯಕ್ತಪಡಿಸಿದರು.

ವಿಹಾರಿ ಔಟ್‌, ಅಯ್ಯರ್‌ ಇನ್‌! ಮೊದಲನೇ ಟೆಸ್ಟ್‌ಗೆ ಭಾರತ ಪ್ಲೇಯಿಂಗ್‌ XI ಆರಿಸಿದ ಜಾಫರ್‌!

ಭಾನುವಾರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ ಹೆಚ್ಚಿನ ಬ್ಯಾಟಿಂಗ್‌ ಡೆಪ್ತ್‌ನೊಂದಿಗೆ ಕಣಕ್ಕೆ ಇಳಿಯಬೇಕೆಂದು ಆಕಾಶ್‌ ಚೋಪ್ರಾ ಇದೇ ವೇಳೆ ಸಲಹೆ ನೀಡಿದ್ದಾರೆ.

“ಭಾರತ ತಂಡ ಆರು ಮಂದಿ ಬ್ಯಾಟ್ಸ್‌ಮನ್‌ಗಳೊಂದಿಗೆ ಕಣಕ್ಕೆ ಇಳಿಯುವಂತೆ ನಾನು ಹೇಳುತ್ತೇನೆ ಹಾಗೂ ರಿಷಭ್‌ ಪಂತ್‌ 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕು. ಪಂದ್ಯಕ್ಕೆ ಇಷ್ಟು ಸಾಕು. ನೀವು ವಿಕೆಟ್‌ಗಳನ್ನು ಪಡೆಯಲು ಎದುರು ನೋಡುತ್ತಿದ್ದೀರಿ ನಿಜ. ಆದರೆ ಎದುರಾಳಿ ತಂಡದ ಬ್ಯಾಟಿಂಗ್‌ ವಿಭಾಗ ದುರ್ಬಲವಾಗಿದೆ. ಹಾಗಾಗಿ ಐವರು ಬೌಲರ್‌ಗಳೊಂದಿಗೆ ಕಣಕ್ಕೆ ಇಳಿಯುವ ಅಗತ್ಯವಿಲ್ಲ,” ಎಂದು ಚೋಪ್ರಾ ಹೇಳಿದರು.

‘ಇದು ಅತ್ಯಂತ ಕಠಿಣ ನಿರ್ಧಾರ’ 5ನೇ ಕ್ರಮಾಂಕದ ಬಗ್ಗೆ ರಾಹುಲ್‌ ಮಾತು!“ಒಬ್ಬರು ಸ್ಪಿನ್ನರ್ ಹಾಗೂ ಮೂವರು ವೇಗಿಗಳೊಂದಿಗೆ ಆಡಿ. ಏಕೆಂದರೆ ತಂಡದಲ್ಲಿ ಆಲ್‌ರೌಂಡರ್‌ಗಳಿಲ್ಲ. ರವೀಂದ್ರ ಜಡೇಜಾ ಬೇರೆ ತಂಡದಲ್ಲಿಲ್ಲ. ಶಾರ್ದುಲ್‌ ಠಾಕೂರ್‌ ನಾಲ್ಕನೇ ವೇಗಿಯಾಗಿದ್ದು, 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬಲ್ಲರು. ಆದರೆ 4ನೇ ವೇಗಿಗೆ ಅವಕಾಶ ಇಲ್ಲದೇ ಇರುವುದರಿಂದ ಶಾರ್ದುಲ್‌ ಹೊರಗಡೆ ಉಳಿಯಬೇಕಾಗುತ್ತದೆ,”ಎಂದು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.



Read more