Karnataka news paper

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರನ್ನು ಬಲಿ ಪಡೆದ ಹೆಲಿಕಾಪ್ಟರ್ ಅವಘಡಕ್ಕೆ ಹವಾಮಾನ ಕಾರಣ: ಮಾಜಿ ಯುದ್ಧವಿಮಾನ ಚಾಲಕ ಶಂಕೆ 


Source : The New Indian Express

ಚೆನ್ನೈ: ಸೂಲೂರಿನಿಂದ ವೆಲ್ಲಿಂಗ್ಟನ್ ಗೆ ಹೆಲಿಕಾಪ್ಟರಿನಲ್ಲಿ 20 ನಿಮಿಷಗಳ ಪಯಣ. ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ Mi-17V-5 ಹೆಲಿಕಾಪ್ಟರ್ ಜಗತ್ತಿನಲ್ಲೇ ಸುರಕ್ಷಿತ ಹೆಲಿಕಾಪ್ಟರ್ ಎನ್ನುವ ಹೆಸರಿಗೆ ಪಾತ್ರವಾದುದು. ಪ್ರಧಾನಿ, ಅಧ್ಯಕ್ಷರು ಸೇರಿದಂತೆ ವಿವಿಐಪಿಗಳು ಈ ಹೆಲಿಕಾಪ್ಟರನ್ನು ಬಳಸುತ್ತಾರೆ. 

ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಸೇರಿ 13 ಮಂದಿ ಸಾವು

Mi-17V-5 ಹೆಲಿಕಾಪ್ಟರ್ ಅನ್ನು ರಷ್ಯಾದ ಕಜನ್ ಸಂಸ್ಥೆಯ ಅಂಗಸಂಸ್ಥೆ ನಿರ್ಮಾಣ ಮಾಡಿದೆ. ತುರ್ತು ಭೂಸ್ಪರ್ಶ ಮಾಡಬೇಕಾದ ಸನ್ನಿವೇಶಗಳು ಈ ಹೆಲಿಕಾಪ್ಟರಿನಲ್ಲಿ ಬರುವುದು ತುಂಬಾ ಅಪರೂಪ ಎನ್ನುವುದು ಚೆನ್ನೈ ಮೂಲದ ಮಾಜಿ ವಾಯುಪಡೆ ಚಾಲಕರ ಅಭಿಪ್ರಾಯ. 

ಇದನ್ನೂ ಓದಿ: ಹೆಲಿಕಾಪ್ಟರ್ ಪತನ: ಸಿಡಿಎಸ್ ಬಿಪಿನ್ ರಾವತ್ ನಿವಾಸಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

ಕಳೆದ 30- 40 ವರ್ಷಗಳಲ್ಲಿ Mi-17V-5 ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಬೇಕಾದ ಎಮರ್ಜೆನ್ಸಿ ಸನ್ನಿವೇಶಗಳು ಒಂದೆರಡು ಬಾರಿ ಬಂದಿರಬಹುದು ಅಷ್ಟೇ ಎನ್ನುತ್ತಾರೆ ಮಾಜಿ ಪೈಲಟ್.

ಇದನ್ನೂ ಓದಿ:  ಹೆಲಿಕಾಪ್ಟರ್ ದುರಂತದಲ್ಲಿ ಜ. ಬಿಪಿನ್ ರಾವತ್ ಸಾವು: ರಾಷ್ಟ್ರಪತಿ, ಪ್ರಧಾನಿ ಮೋದಿ, ರಾಜ್ಯಪಾಲರು ಸೇರಿ ಹಲವು ಗಣ್ಯರ ಸಂತಾಪ

ಹೀಗಾಗಿ ಸಹಜವಾಗಿ ಅವರೂ ಪ್ರತಿಕೂಲ ಹವಾಮಾನವೇ ಅಪಘಾತಕ್ಕೆ ಕಾರಣ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ಊಟಿ ಬಳಿಯ ಕೂನೂರಿನಲ್ಲಿ ಮಂಜು ಮುಸಿಕಿದ ವಾತಾವರಣವಿದೆ. ದಟ್ಟವಾದ ಮಂಜಿನ ಕಾರಣದಿಂದ ಹೆಲಿಕಾಪ್ಟರ್ ಪೈಲಟ್ ಗೆ ತಾನು ಪರ್ವತದತ್ತ ಧಾವಿಸುತ್ತಿರುವುದು ಗೊತ್ತಾಗಿಲ್ಲ ಎಂದು ಅವರು ಊಹಿಸಿದ್ದಾರೆ.

ಇದನ್ನೂ ಓದಿ: ಭೂಸೇನೆ, ವಾಯು ಮತ್ತು ನೇವಿ ಮೂರು ಶಕ್ತಿಗಳ ನಡುವೆ ಸಮನ್ವಯ ತರಲು ರಾವತ್ ಶ್ರಮಿಸಿದ್ದರು: ಮಾಜಿ ಸೇನಾ ಮುಖ್ಯಸ್ಥರ ಪ್ರಶಂಸೆ



Read more

Leave a Reply

Your email address will not be published. Required fields are marked *