The New Indian Express
ರಾಂಚಿ: ಬಿರ್ಲಾ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಸಂಗ್ರಹವಾಗಿ ತೊಟ್ಟಿ ಸೇರುತ್ತಿದ್ದ ಆಹಾರ ತ್ಯಾಜ್ಯದಿಂದ ಅಡುಗೆ ಅನಿಲವಾಗಿ ಬಳಸಬಹುದಾದ ಬಯೋ ಗ್ಯಾಸ್ ಅನ್ನು ಆವಿಷ್ಕರಿಸಿದ್ದಾರೆ.
ಇದನ್ನೂ ಓದಿ: ಯಾವ ಜೀವವೂ ಪುಟ್ಟದಲ್ಲ: ಲಿಫ್ಟ್ ಸಂಧಿಯಲ್ಲಿ ಸಿಲುಕಿಕೊಂಡ ಹಕ್ಕಿ ಮರಿ; ಅಗ್ನಿಶಾಮಕ ದಳ ಕಾರ್ಯಾಚರಣೆ
ಒಂದು ವರ್ಷದ ಹಿಂದೆಯೇ ಈ ಪ್ರಾಜೆಕ್ಟ್ ಪ್ರಾರಂಭಗೊಂಡಿತ್ತು. ಇದೀಗ ಈ ಬಯೊ ಗ್ಯಾಸ್ ಪ್ಲ್ಯಾಂಟ್ ಕಾರ್ಯಾರಂಭಗೊಂಡಿದ್ದು ದಿನಕ್ಕೆ 100 ಕೆ.ಜಿ ಆಹಾರ ತ್ಯಾಜ್ಯವನ್ನು 8 ಕೆ.ಜಿ ಅಡುಗೆ ಅನಿಲವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: 6.6 ಕೋಟಿ ವರ್ಷ ಹಳೆಯ ಡೈನೋಸಾರ್ ಭ್ರೂಣ ಸಂರಕ್ಷಿತ ಸ್ಥಿತಿಯಲ್ಲಿ ಪತ್ತೆ
ಮುಂದಿನ ದಿನಗಳಲ್ಲಿ ಇದೇ ಮಾದರಿಯ ಬಯೊ ಗ್ಯಾಸ್ ಪ್ಲ್ಯಾಂಟುಗಳನ್ನು ಇತರೆ ಕಾಲೇಜುಗಳ ಹಾಸ್ಟೆಲ್ಲುಗಳಲ್ಲಿಯೂ ಸ್ಥಾಪಿಸುವ ಇರಾದೆಯನ್ನು ವಿದ್ಯಾರ್ಥಿಗಳ ತಂಡ ಹೊಂದಿದೆ.
ಇದನ್ನೂ ಓದಿ: ಹೇಗಿದ್ಳು ಹೇಗಾದ್ಳು ಗೊತ್ತಾ?: 1 ಕೋಟಿ ರೂ. ಬಹುಮಾನದ ಜಾಗತಿಕ ಮಟ್ಟದ ಫಿಟ್ನೆಸ್ ಚಾಲೆಂಜ್ ಗೆದ್ದ ಜೈಪುರದ ಮಹಿಳೆ
ಅಲ್ಲದೆ ಈ ಪ್ರಾಜೆಕ್ಟ್ ಅನ್ನು ಕಾಲೇಜುಗಳಿಗೆ ಮಾತ್ರ ಸೀಮಿತಗೊಳಿಸದೆ ನವೀಕೃತ ಇಂಧನ ಕ್ಷೇತ್ರಕ್ಕೂ ಪರಿಚಯಿಸುವುದಾಗಿ ಬಿರ್ಲಾ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ದೇವರ ನಾಡಲ್ಲಿ ಗಜರಾಜನಿಗೆ ಪುನರ್ವಸತಿ ಕೇಂದ್ರ: ಆನೆಗಳಿಗೆ ಮಾರ್ನಿಂಗ್ ವಾಕ್ ಮತ್ತು ಉತ್ಕೃಷ್ಟ ಆಹಾರ