Karnataka news paper

ಭಾರತದಲ್ಲಿ ವಿವೋ V23 5G ಸ್ಮಾರ್ಟ್‌ಫೋನ್‌ ಸರಣಿ ಲಾಂಚ್‌ ಡೇಟ್‌ ಫಿಕ್ಸ್‌!


ವಿವೋ V23 5G ಸರಣಿ

ಹೌದು, ವಿವೋ ಕಂಪೆನಿ ಹೊಸ ವಿವೋ V23 5G ಸರಣಿಯ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದೆ. ಈ ಸ್ಮಾರ್ಟ್‌ಫೋನ್‌ ಬಿಡುಗಡೆ ದಿನಾಂಕ ಈಗ ಅಧಿಕೃತ ವೆಬ್‌ಸೈಟ್‌ನಲ್ಲಿ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದೆ. ಇನ್ನು ಈ ಸರಣಿಯಲ್ಲಿ ವಿವೋ ಯಾವ ಸ್ಮಾರ್ಟ್‌ಫೋನ್‌ಗಳನ್ನು ಪ್ರಾರಂಭಿಸುತ್ತದೆ ಎಂಬುದನ್ನು ದೃಢಪಡಿಸಿಲ್ಲ. ಆದರೆ ಈ ಸರಣಿಯಲ್ಲಿ ವಿವೋ V23 5G ಶ್ರೇಣಿಯು ಎರಡು ಮಾದರಿಗಳನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಹಾಗಾದ್ರೆ ವಿವೋ V23 5G ಸರಣಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋ V23 5G ಡಿಸ್‌ಪ್ಲೇ

ವಿವೋ V23 5G ಡಿಸ್‌ಪ್ಲೇ

ವಿವೋ V23 5G ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.44 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಜೊತೆಗೆ ಈ ಡಿಸ್‌ಪ್ಲೇ 87.98% ಸ್ಕ್ರೀನ್‌ ಟು ಬಾಡಿ ಅನುಪಾತವನ್ನು ಪಡೆದಿದೆ.

ವಿವೋ V23 5G ಪ್ರೊಸೆಸರ್‌

ವಿವೋ V23 5G ಪ್ರೊಸೆಸರ್‌

ವಿವೋ V23 5G ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 1200 5G SoC ಪ್ರೊಸೆಸರ್‌ ಬಲವನ್ನು ಹೊಂದಿರಲಿದೆ ಎಂದು ಮೈಕ್ರೋಸೈಟ್ ಉಲ್ಲೇಖಿಸಿದೆ. ಇದು ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಬಲವನ್ನು ಪಡೆದುಕೊಂಡಿದೆ.

ವಿವೋ V23 5G ಕ್ಯಾಮೆರಾ

ವಿವೋ V23 5G ಕ್ಯಾಮೆರಾ

ವಿವೋ V23 5G ಸರಣಿಯ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಇತರ ಲೆನ್ಸ್‌ಗಳು ಸೂಪರ್-ವೈಡ್-ಆಂಗಲ್ ಸೆನ್ಸಾರ್‌ ಮತ್ತು ಮ್ಯಾಕ್ರೋ ಸೆನ್ಸಾರ್‌ ಅನ್ನು ಒಳಗೊಂಡಿವೆ. ಇದಲ್ಲದೆ ಮುಂಭಾಗದಲ್ಲಿ, 50-ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಡ್ಯುಯಲ್ ಸೆಲ್ಫಿ ಕ್ಯಾಮೆರಾಗಳನ್ನು ಸಹ ಹೊಂದಿದೆ. ಇವುಗಳು ನೈಟ್‌ ಮೋಡ್ ಬೆಂಬಲದೊಂದಿಗೆ ಸೂಪರ್-ವೈಡ್-ಆಂಗಲ್ ಸೆನ್ಸಾರ್‌ ಅನ್ನು ಸಹ ಪಡೆಯುತ್ತವೆ.

ವಿವೋ V23 5G ಬ್ಯಾಟರಿ

ವಿವೋ V23 5G ಬ್ಯಾಟರಿ

ವಿವೋ V23 5G ಸ್ಮಾರ್ಟ್‌ಫೋನ್‌ 4200 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು ಈ ಬ್ಯಾಟರಿ ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಯುಎಸ್‌ಬಿ ಪೋರ್ಟ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬೆಲೆ ಹೇಗಿರಲಿದೆ ಅನ್ನೊದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಸ್ಮಾರ್ಟ್‌ಫೋನ್‌ ಸನ್‌ಶೈನ್ ಗೋಲ್ಡ್ ಬಣ್ಣ ಆಯ್ಕೆಗೆ ಬಣ್ಣ ಬದಲಾಯಿಸುವ ಸಾಮರ್ಥ್ಯ ಸೀಮಿತವಾಗಿದೆ ಎಂದು ಚೈನೀಸ್ ಬ್ರ್ಯಾಂಡ್ ಮೈಕ್ರೋಸೈಟ್‌ನಲ್ಲಿ ಉಲ್ಲೇಖಿಸಿದೆ.



Read more…