Karnataka news paper

ಗ್ಯಾಂಗ್‌ ಕಟ್ಟಿಕೊಂಡು ಬರುತ್ತಿದ್ದಾರೆ ಗೋಲ್ಡನ್‌ ಸ್ಟಾರ್‌


ಗೋಲ್ಡನ್‌ ಸ್ಟಾರ್‌ ಗಣೇಶ್‌ ಈಗ ಗ್ಯಾಂಗ್‌ ಕಟ್ಟಿಕೊಂಡು ಹೊಸ ಅವತಾರದಲ್ಲಿ ಕಿರುತೆರೆ ಮೇಲೆ ಬರುತ್ತಿದ್ದಾರೆ. ‘ಗೋಲ್ಡನ್‌ ಗ್ಯಾಂಗ್’ ಹೊಸ ಗೇಮ್‌ ಷೋದ ಹೆಸರು. 

ಗ್ಯಾಂಗ್‌ಗಳೊಂದಿಗೆ ಬಾಲ್ಯ, ಯೌವನದ ತುಂಟತನ, ಕುಚೇಷ್ಟೆಗಳ ಸವಿನೆನಪುಗಳನ್ನು ಮೆಲುಕು ಹಾಕುತ್ತ ನೆನಪಿನಲ್ಲಿ ಉಳಿಯುವ ಆಟಗಳನ್ನು ಆಡಿಸುವ ರಿಯಾಲಿಟಿ ಶೋ ಕಾರ್ಯಕ್ರಮವಿದು. ಕಾರ್ಯಕ್ರಮದ ಪ್ರೋಮೋ ಸಾಕಷ್ಟು ಕುತೂಹಲ ಕೆರಳಿಸಿದೆ. ಅಂದಹಾಗೆ ಈ ಗ್ಯಾಂಗ್‌ನಲ್ಲಿರುವವರು ಕಿರುತೆರೆ ಕಲಾವಿದರೇ. 

ಗಣೇಶ್‌ ಅವರಿಗೆ ಕಿರುತೆರೆ ಹೊಸದಲ್ಲ. ಗಾಯಕ, ನಿರ್ದೇಶಕ ಮತ್ತು ನಿರೂಪಕರಾಗಿ ಮಿಂಚಿದವರು. ಈಗ ಹಿರಿತೆರೆಯ ಜೊತೆಗೇ ಕಿರುತೆರೆಗೆ ಬರುತ್ತಿದ್ದಾರೆ ಎಂದು ಝೀ ವಾಹಿನಿ ಹೇಳಿದೆ.

‘ಸಣ್ಣವರಿದ್ದಾಗ ನಮ್ಮ ಗ್ಯಾಂಗ್‌ಗೆ ಚಡ್ಡಿ ಗ್ಯಾಂಗ್, ತರ್ಲೆ ಗ್ಯಾಂಗ್, ಪೋಲಿ ಗ್ಯಾಂಗ್‌ ಅಂತ ಕರೀತಿದ್ರು ಅದಾದ ನಂತರ ಕಾಲೇಜಿಗೆ ಹೋಗ್ಬೇಕಾದ್ರೆ ಬಂಕ್ ಗ್ಯಾಂಗ್, ಲಾಸ್ಟ್ ಬೆಂಚ್ ಗ್ಯಾಂಗ್ ಹೀಗೆ ಹಲವಾರು ರೀತಿಯ ಹೆಸರಿನಿಂದ ನಮ್ಮ ಗ್ಯಾಂಗನ್ನು ಗುರುತಿಸಿಕೊಂಡಿದ್ದೇವೆ. ಈಗ ನಮ್ಮ ನಿಮ್ಮ ನೆಚ್ಚಿನ ಕಲಾವಿದರ ಗ್ಯಾಂಗ್ ಹೇಗಿದೆ ಅವರ ತರಲೆ ದಿನಗಳು ಹೇಗಿವೆ ಎಂದು ನೋಡಿ ಎಂಜಾಯ್ ಮಾಡುವ ಸಮಯ ಶುರುವಾಗಿದೆ’ ಎಂದು ಈ ಕಾರ್ಯಕ್ರಮದ ಪ್ರೋಮೋದಲ್ಲಿ ಗಣೇಶ್‌ ಹೇಳಿದ್ದಾರೆ.

ಕಾರ್ಯಕ್ರಮದ ಪ್ರಸಾರ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. 



Read More…Source link