Karnataka news paper

ಮತ್ತೆ ವಿಜಯನಗರದಲ್ಲಿ 10 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ!


ಹೈಲೈಟ್ಸ್‌:

  • ಮತ್ತೆ ವಿಜಯನಗರದಲ್ಲಿ 10 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ
  • ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಪೊಲೀಸರಿಂದ ದಾಳಿ
  • ಆರು ಮಂದಿ ಆರೋಪಿಗಳು ಪೊಲೀಸ್ ವಶಕ್ಕೆ

ವಿಜಯನಗರ : ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 10 ಕೋಟಿ ಮೌಲ್ಯದ ನಿಷೇಧಿತ ತಿಮಿಂಗಲ ವಾಂತಿ ( ಅಂಬರ್ ಗ್ರೀಸ್ ) ಯನ್ನು ಹೊಸಪೇಟೆ ಪಟ್ಟಣ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ವಾರ 6 ಜನರನ್ನು ಬಂಧಿಸಿ ಒಂದೂವರೆ ಕೋಟಿ ಮೌಲ್ಯದ ತಿಮಂಗಲ ವಾಂತಿ( ಅಂಬರ್ ಗ್ರೀಸ್ ) ವಶಪಡಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, ಅಂದಾಜು 10 ಕೋಟಿ ಮೌಲ್ಯದ 10 ಕೆಜಿ ಆ್ಯಂಬರ್ ಗ್ರೀಸ್ ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಕೊಪ್ಪಳದ ವೆಂಕಟೇಶ್ ನಾಯ್ಕ್ ಅಬ್ದುಲ್ ವಹಾಬ್, ಭಟ್ಕಳದ ಗಣಪತಿ, ಹುಬ್ಬಳ್ಳಿಯ ಪುಂಡಲೀಕ, ಮಹೇಶ್ ಮತ್ತು ವಿಜಯಪುರದ ಶ್ರೀಧರ್ ಬಂಧಿತ ಆರೋಪಿಗಳು. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿಮಿಂಗಿಲ ವಾಂತಿ ಮೇಲೆ ಕಾಕದೃಷ್ಟಿ; ರಾಜ್ಯದಲ್ಲಿ ಮೊದಲ ಕಳ್ಳಸಾಗಾಟ ಪ್ರಕರಣ ದಾಖಲು!

ಕುದುರೆ ಏರಿ ಠಾಣೆಗೆ ಬಂದ ಬಳ್ಳಾರಿ ಸಿಪಿಐ
ಬಳ್ಳಾರಿ: ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಹತ್ತಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ವೈರಲ್ ಆದ ವಿಡಿಯೋಗಳು ಅಸಹಜವಾಗಿರುತ್ತವೆ. ಇಂತಹದೊಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಳ್ಳಾರಿ ನರದದಲ್ಲಿ ಸಿಪಿಐ ಒಬ್ಬರು ಕುದುರೆ ಸವಾರಿ ಮಾಡಿದ್ದಾರೆ.

ಬಳ್ಳಾರಿ ಕೌಲ್ ಬಜಾರ್ ಠಾಣೆಯ ಸಿಪಿಐ ಕುದುರೆ ಸವಾರಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಪಿಐ ಸುಭಾಷ್ ಎಂಬುವವರು ನಗರದಲ್ಲಿ ಕುದುರೆ ಸವಾರಿ ಮಾಡಿದ್ದಾರೆ. ಕುದುರೆ ಸವಾರಿ ಕ್ರೇಜ್ ಇರುವ ಕಾರಣಕ್ಕೆ ಸವಾರಿ ಮಾಡಿದೆ ಅಂತ ಸಿಪಿಐ ಹೇಳಿದ್ದಾರೆ. ನಿನ್ನೆ ರಾತ್ರಿ ಖಾಕಿ ಡ್ರೆಸ್ ಮೇಲೆ ಕುದುರೆ ಸವಾರಿ ಮಾಡಿ, ಕುದುರೆ ಮೇಲೆಯೇ ಕೌಲ್ ಬಜಾರ್ ಸ್ಟೇಷನ್ಗೆ ಆಗಮಿಸಿದ್ದಾರೆ.



Read more