Karnataka news paper

ರಾಮನಗರದಲ್ಲಿ ರೈತರಿಗೆ ಕಾಳು ಒಕ್ಕಣೆಗೆ ರಸ್ತೆಯೇ ಕಣ; ವಾಹನ ಸವಾರರಿಗೆ ಅಪಾಯ!


ಮಾಗಡಿ ಗ್ರಾಮಾಂತರ: ಎರಡು ತಿಂಗಳಿಂದ ಮಳೆಯಲ್ಲಿ ನೆಂದು ತೆಪ್ಪೆಯಾಗಿದ್ದ ಜಿಲ್ಲೆಯ ರಸ್ತೆಗಳೀಗ ಧಾನ್ಯ ಒಕ್ಕಣೆಯ ಕಣಗಳಾಗಿವೆ. ಜಿಲ್ಲೆಯ ಎಲ್ಲಾ ರಸ್ತೆಗಳಲ್ಲೂ ಧಾನ್ಯದ ರಾಶಿಗಳು ರಾರಾಜಿಸುತ್ತಿವೆ.

ಮೂಡಿದ ಬಿಸಿಲು
ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲು ಮೂಡಿದೆ. ನಿರಂತರವಾಗಿ ಹೊಯ್ದ ಮಳೆಯಿಂದ ಕಟಾವು ಮಾಡಿದ್ದ ಬೆಳೆಗಳನ್ನು ಒಣಗಿಸಲಾಗದೇ ಪರದಾಡುತ್ತಿದ್ದ ರೈತರು ಈಗ ಎಲ್ಲೆಡೆ ರಸ್ತೆಯನ್ನೇ ಕಣವಾಗಿಸಿಕೊಂಡಿದ್ದಾರೆ. ಮಳೆ ನೀರಿಗೆ ಸಿಲುಕಿದ್ದ ಬೆಳೆಯನ್ನು ಒಣಗಿಸಲು ಹರಸಾಹಸ ಪಡುತ್ತಿದ್ದಾರೆ.

ಚಂಡಮಾರುತದಿಂದ ಹಾನಿಗೊಳಗಾಗಿದ್ದ ರಾಗಿ, ಹುರುಳಿ, ತೊಗರಿ ಬೆಳೆಗಳನ್ನು ದೊಡ್ಡ ರೈತರು ಯಂತ್ರದ ಮೂಲಕ ಒಕ್ಕಣೆ ಮಾಡಿಕೊಂಡರೆ, ಮಾಗಡಿ ತಾಲೂಕಿನಲ್ಲಿ ಸಣ್ಣ, ಅತಿ ಸಣ್ಣ ರೈತರು ರಸ್ತೆ ಕಣದಲ್ಲಿ ಕಟಾವು ಮಾಡಿರುವ ರಾಗಿಯನ್ನು ಒಕ್ಕಣೆ ಮಾಡಿಕೊಳ್ಳುತ್ತಿದ್ದಾರೆ.

ರೈತನ ಮುಖದಲ್ಲಿ ನೆಮ್ಮದಿ
ಜಿಲ್ಲೆಯಲ್ಲಿ ಬಿಸಿಲು ಮನೆ ಮಾಡಿರುವುದು ರೈತರಿಗೆ ಕಾಳುಕಡಿಗಳನ್ನು ಒಣಗಿಸಲು ಅನುಕೂಲಕರ ವಾತಾವರಣ ಕಲ್ಪಿಸಿದೆ. ಆದರೆ, ರೈತರು ರಸ್ತೆಯನ್ನೇ ಕಣವನ್ನಾಗಿ ಮಾಡಿಕೊಂಡಿರುವುದರಿಂದ ವಾಹನ ಸವಾರರಿಗೆ ದೊಡ್ಡ ಸಮಸ್ಯೆಯಾಗುತ್ತಿದೆ.
ಜಲ ಸಮೃದ್ಧಿಗೆ ಮಾಯಕೊಂಡದಲ್ಲಿ ಹಿಗ್ಗುತ್ತಿದೆ ಅಡಿಕೆ ವ್ಯಾಪ್ತಿ..! ಸಾಂಪ್ರದಾಯಿಕ ಬೆಳೆ ನಾಸ್ತಿ..!
ಕಣವಾಗಿವೆ ಗ್ರಾಮೀಣ ರಸ್ತೆಗಳು

ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆಯುತ್ತಾರೆ. ನವಂಬರ್‌ನಲ್ಲಿ ಬಿದ್ದ ಮಳೆಯಿಂದ ಲಕ್ಷಾಂತರ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಒಣ ಬೇಸಾಯದ ಜಮೀನುಗಳಲ್ಲಿದ್ದ ಬೆಳೆ ಉಳಿದುಕೊಂಡಿದ್ದವು. ಈಗ ಅವುಗಳ ಕಟಾವು ನಡೆದಿದೆ.
ಬೆಳೆ ವಿಮೆಗೆ ಮುಂದಾಗಲಿ ರೈತರು: ಅತಿವೃಷ್ಟಿ, ಅನಾವೃಷ್ಟಿಗೆ ಇದೇ ಪರಿಹಾರ!
ಕಟಾವು ಮಾಡಿದ ತೆನೆಯನ್ನು ರಸ್ತೆ ಮಧ್ಯೆಯೇ ರಾಶಿ ಹಾಕಿಡಲಾಗುತ್ತಿದೆ. ತೆನೆಯಿಂದ ಕಾಳು ಬಿಡಿಸಿ ರಸ್ತೆ ಪೂರ್ತಿ ಹರಡಿ ಒಣಗಿಸಲಾಗುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ರಸ್ತೆಗಳಂತೂ ವಾಹನ ಸಂಚಾರ ಮಾಡಲು ಜಾಗವಿಲ್ಲದಂತೆ ಬೆಳೆ ಒಣಗಿಸಲಾಗುತ್ತಿದೆ. ಒಂದೊಂದು ಕಡೆ ಅರ್ಧ ಕಿಮೀ ಉದ್ದದವರೆಗೂ ರಾಗಿ ಒಣಗಿಸಲಾಗುತ್ತಿದೆ. ಕೆಲವು ಕಡೆ ದ್ವಿಚಕ್ರ ವಾಹನ ಹೋಗುವಷ್ಟು ಜಾಗ ಬಿಟ್ಟು ಬೆಳೆ ಒಣಗಿಸಲಾಗುತ್ತಿದೆ.
ಗದಗ: ಮೆಕ್ಕೆಜೋಳ ದರ ಕುಸಿತ, ಕಂಗಾಲಾದ ರೈತ
ಕಣವಾಗಿರುವ ರಸ್ತೆಗಳಿವು
ತುಮಕೂರು- ಮಾಗಡಿ ರಸ್ತೆ, ರಾಮನಗರ-ಮಾಗಡಿ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯ ಸವೀರ್ಸ್ ರಸ್ತೆ, ಮಾಗಡಿ- ಕುಣಿಗಲ್‌ ರಸ್ತೆ, ಮಾಗಡಿ- ನೆಲಮಂಗಲ ರಸ್ತೆ ಸೇರಿದಂತೆ ಹಳ್ಳಿಗಳನ್ನು ಸಂಪರ್ಕಿಸುವ ಬಹುತೇಕ ಎಲ್ಲ ರಸ್ತೆಗಳೂ ಬೆಳೆ ಕಟಾವು ಆರಂಭವಾಗುತ್ತಿದ್ದಂತೆ ರೈತರ ಒಕ್ಕಣೆ ಕಣಗಳಾಗಿ ಮಾರ್ಪಡುತ್ತಿವೆ.



Read more