Karnataka news paper

ಬಸ್‌ನಲ್ಲೇ ಹೃದಯಾಘಾತ: ಕರ್ತವ್ಯನಿರತ KSRTC ಕಂಡಕ್ಟರ್ ಸಾವು


ಚಿಕ್ಕಮಗಳೂರು: ಕರ್ತವ್ಯದಲ್ಲಿದ್ದಾಗಲೇ ಬಸ್‌ನಲ್ಲಿ ಹೃದಯಾಘಾತವಾಗಿ ಕೆಎಸ್‌ಆರ್‌ಟಿಸಿ ನಿರ್ವಾಹಕ ವಿಜಯ ಕುಮಾರ್ (42) ಮೃತಪಟ್ಟಿದ್ದಾರೆ.

ವಿಜಯಕುಮಾರ್ ಅವರು ಸಖರಾಯಪಟ್ಟಣ ಬಳಿ ಕುನ್ನಾಳು ಗ್ರಾಮದವರು.

ಚಿಕ್ಕಮಗಳೂರು ನಗರ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಉಡುಪಿಗೆ ಬಸ್ ಹೊರಟಿತ್ತು. ಕೊಟ್ಟಿಗೆಹಾರ ಬಳಿ ಸಾಗುವಾಗ ನಿರ್ವಾಹಕ ವಿಜಯ ಕುಮಾರ್ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಚಾಲಕ ಮತ್ತು ಕೊಟ್ಟಿಗೆಹಾರ ನಿಲ್ದಾಣ ನಿರೀಕ್ಷಕ ಬಣಕಲ್  ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಮೂಡಿಗೆರೆ ಆಸ್ಪತ್ರೆಗೆ ಒಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಅಲ್ಲಿ ಅವರು ಮೃತಪಟ್ಟಿದ್ದಾರೆ’ ಎಂದು ಚಿಕ್ಕಮಗಳೂರು ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ಟಿ. ವೀರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.



Read more from source