ಹೈಲೈಟ್ಸ್:
- ಎಸ್‌ಬಿಐ ಗ್ರಾಹಕರಿಗೆ ಡಿಸೆಂಬರ್ 11 ಮತ್ತು 12ರಂದು ಇಂಟರ್‌ನೆಟ್ ಸೇವೆ ಸ್ಥಗಿತ
- ನಿರ್ದಿಷ್ಟ ಅವಧಿವರೆಗೆ ಯೋನೋ , ಯೋನೋ ಲೈಟ್, ಯುಪಿಐ ಸೇವೆಗಳು ಸ್ಥಗಿತ
- ತಂತ್ರಜ್ಞಾನವನ್ನು ಅಪ್‌ಗ್ರೇಡ್ ಮಾಡುತ್ತಿರುವ ಕಾರಣ ತಿಳಿಸಿದ ಎಸ್ಬಿಐ
ನಿಗದಿತ ನಿರ್ವಹಣೆ ಚಟುವಟಿಕೆಗಳಿಂದಾಗಿ ಶನಿವಾರ ಮತ್ತು ಭಾನುವಾರದಂದು ಎಸ್ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳ ಬಳಕೆದಾರರು ಒಟ್ಟು 300 ನಿಮಿಷಗಳ ಕಾಲ ಇಂಟರ್ನೆಟ್ ಬ್ಯಾಂಕಿಂಗ್, ಯೋನೋ (YONO), ಯೋನೋ ಲೈಟ್ (YONO lite), ಯುಪಿಐನಂತಹ ವಿವಿಧ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಎಸ್‌ಬಿಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿದೆ.
“ನಾವು ಡಿಸೆಂಬರ್11ರಾತ್ರಿ 11:30ರಿಂದ ಡಿಸೆಮಬರ್ 12ರಂದು ಮುಂಜಾನೆ 4.30ರ ವರೆಗೆ (300 ನಿಮಿಷಗಳು) ತಂತ್ರಜ್ಞಾನವನ್ನು ಅಪ್‌ಗ್ರೇಡ್ ಮಾಡಲಿದ್ದೇವೆ. ಈ ಅವಧಿಯಲ್ಲಿ, INB/ Yono / Yono Lite / Yono Business / UPI ಲಭ್ಯ ಇರುವುದಿಲ್ಲ. ಅನನುಕೂಲತೆಗೆ ನಾವು ವಿಷಾಧಿಸುತ್ತೇವೆ ಮತ್ತು ನಮ್ಮೊಂದಿಗೆ ಸಹಿಸಿಕೊಳ್ಳುವಂತೆ ವಿನಂತಿಸುತ್ತೇವೆ.” ಎಂದು ಟ್ವೀಟ್‌ನಲ್ಲಿ ತಿಳಿಸಿದೆ.
”ನಾವು ಉತ್ತಮ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ಪ್ರಯತ್ನಿಸುತ್ತಿರುವಾಗ ಗೌರವಾನ್ವಿತ ಗ್ರಾಹಕರು ನಮ್ಮೊಂದಿಗೆ ಇರುವಂತೆ ವಿನಂತಿಸುತ್ತೇವೆ,” ಎಂದು ಅದು ಹೇಳಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ದೇಶದಾದ್ಯಂತ 22,000ಕ್ಕೂ ಹೆಚ್ಚು ಶಾಖೆಗಳನ್ನು ಮತ್ತು 57,889ಕ್ಕೂ ಹೆಚ್ಚು ಎಟಿಎಂಗಳೊಂದಿಗೆ ದೊಡ್ಡ ಜಾಲವನ್ನು ಹೊಂದಿದೆ.
ಈ ಮಧ್ಯೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇತ್ತೀಚಿನ ಡಿಜಿಟಲ್ ವಹಿವಾಟಿನ ಸಾಲಿಗೆ ಪ್ರತಿಕ್ರಿಯಿಸಿದ ಬ್ಯಾಂಕ್, ಮೂಲ ಉಳಿತಾಯ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಗ್ರಾಹಕರಿಂದ, (UPI) ಮತ್ತು RuPay ಡೆಬಿಟ್ ಕಾರ್ಡ್‌ಗಳ ಡಿಜಿಟಲ್ ವಹಿವಾಟುಗಳಿಗಾಗಿ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಮಾಧ್ಯಮ ವರದಿಯ ಪ್ರಕಾರ, ಐಐಟಿ ಅಧ್ಯಯನದಲ್ಲಿ, ಎಸ್‌ಬಿಐ 2017 ಮತ್ತು ಸೆಪ್ಟೆಂಬರ್ 2020ರ ನಡುವೆ ಜನ್ ಧನ್ ಖಾತೆದಾರರಿಂದ 164 ಕೋಟಿ ರೂಪಾಯಿ ಕಡಿತಗೊಳಿಸಿದೆ ಎಂದು ತಿಳಿದುಬಂದಿದೆ. 164 ಕೋಟಿ ರೂಪಾಯಿಯಲ್ಲಿ UPI ಮತ್ತು ರುಪೇ ಕಾರ್ಡ್‌ಗಳ ಮೂಲಕ ವಹಿವಾಟು ನಡೆಸುವವರಿಗೆ ಬ್ಯಾಂಕ್ ಕೇವಲ 90 ಕೋಟಿ ರೂಪಾಯಿಯನ್ನು ಹಿಂದಿರುಗಿಸಿದೆ. ಖಾತೆದಾರರಿಂದ ಈ ಅವಧಿಯಲ್ಲಿ ತಲಾ ರೂ. 17.70 ಸಂಗ್ರಹಿಸಿತ್ತು.