Karnataka news paper

ಗುದನಾಳದಲ್ಲಿ 26 ಲಕ್ಷದ ಚಿನ್ನ ತುಂಬಿದ ಕ್ಯಾಪ್ಸೂಲ್‌ ಸಾಗಿಸುತ್ತಿದ್ದ ಮಹಿಳೆ ಬೆಂಗಳೂರಿನಲ್ಲಿ ಸೆರೆ


ಹೈಲೈಟ್ಸ್‌:

  • ಡ್ರಗ್ಸ್ ಸಾಗಿಸುತ್ತಿದ್ದ ಖತರ್ನಾಕ್ ಲೇಡಿ ಬಂಧನ
  • ಆಕೆಯ ಗುದನಾಳದಲ್ಲಿ 26 ಲಕ್ಷದ ಸಿಕ್ತು ಚಿನ್ನ
  • ಖತರ್ನಾಕ್ ಲೇಡಿ ಸಿಕ್ಕಿಬಿದ್ದಿದ್ದು ಹೇಗೆ?

ಬೆಂಗಳೂರು : ಗುದನಾಳದಲ್ಲಿ ಚಿನ್ನ ತುಂಬಿರುವ ಕ್ಯಾಪ್ಸೂಲ್‌ಗಳನ್ನು ಇಟ್ಟುಕೊಂಡು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಆಕೆಯಿಂದ 26.11 ಲಕ್ಷ ಮೌಲ್ಯದ 535 ಗ್ರಾಂ. ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಸುಡಾನ್‌ ದೇಶದ ಮಹಿಳೆ ಬಂಧಿತ ಆರೋಪಿ. ಈಕೆ ಸುಡಾನ್‌ ದೇಶದ ಪಾಸ್‌ಪೋರ್ಟ್‌ ಪಡೆದು ವೈದ್ಯಕೀಯ ವೀಸಾದಡಿ ದೇಶಕ್ಕೆ ಬಂದಿದ್ದಳು. ಶಾರ್ಜಾದಿಂದ ಏರ್‌ ಅರೇಬಿಯಾ ಜಿ 9- 498 ವಿಮಾನದಲ್ಲಿ ಮಂಗಳವಾರ ರಾತ್ರಿ 9.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಆಕೆಯನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಿದ್ದರು. ಪರಿಶೀಲನೆ ವೇಳೆ ಆಕೆ ತನ್ನ ಗುದನಾಳದಲ್ಲಿಕ್ಯಾಪ್ಸೂಲ್ ಗಳನ್ನು ಅಡಗಿಸಿಕೊಂಡು ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದೆ.

1.50 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ!

ಬೆಂಗಳೂರು : ಬೆಂಗಳೂರು ಮತ್ತು ಚೆನ್ನೈ ಮಾದಕ ವಸ್ತು ನಿಗ್ರಹ ದಳ ವಲಯದ ಬೆಂಗಳೂರು ಕೇಂದ್ರ ಅಧಿಕಾರಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾದ ಬೆಂಜಮಿನ್‌ ಸಂಡೆ ಅಲಿಯಾಸ್‌ ಆಂಟೋನಿ ಬಂಧಿತ ಆರೋಪಿ. ಈತನಿಂದ 1.50 ಕೋಟಿ ರೂ. ಮೌಲ್ಯದ 968 ಗ್ರಾಂ ಆಂಫೆತ್‌ಮೈನ್‌ ಎಂಬ ಮಾದಕ ವಸ್ತು ಹಾಗೂ 2.9 ಕೆ.ಜಿ ತೂಕದ ಎಫೆಡ್ರಿನ್‌-ಮಾದಕ ವಸ್ತು ತಯಾರಿಸುವ ಕಚ್ಚಾವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಕೊರಿಯರ್‌ ಮೂಲಕ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದ. ಈತ ಚೆನ್ನೈ ಮೂಲದ ಯುವತಿಯನ್ನು ಮದುವೆಯಾಗಿ ಭಾರತದಲ್ಲೇ ನೆಲೆಸಿದ್ದ. ಮಾದಕ ವಸ್ತು ತಯಾರಿಕೆ ಹಾಗೂ ಮಾರಾಟದಲ್ಲಿಭಾಗಿಯಾಗಿದ್ದ. ಈತನ ವಿರುದ್ಧ ಚೆನ್ನೈ ಹಾಗೂ ಆಸ್ಪ್ರೇಲಿಯಾದಲ್ಲಿತಲಾ ಎರಡು ಪ್ರಕರಣ ದಾಖಲಾಗಿವೆ. ಚೆನ್ನೈ ವಲಯದ ಎನ್‌ಸಿಬಿ ಅಧಿಕಾರಿಗಳು 2018 ಸೆಪ್ಟಂಬರ್‌ನಲ್ಲಿ ಬೆಂಜಮಿನ್‌ ವಿರುದ್ಧ ಎರಡು ಪ್ರಕರಣ ದಾಖಲಿಸಿಕೊಂಡಿದ್ದರು. ಇನ್ನು ಆಸ್ಪ್ರೇಲಿಯಾದಲ್ಲಿ2021ರ ನವೆಂಬರ್‌ನಲ್ಲಿ ಎರಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಬರೋಬ್ಬರಿ 5 ಕೋಟಿ ಮೌಲ್ಯದ ಡ್ರಗ್ಸ್ ವಶ : ಇಬ್ಬರ ಬಂಧನ

ಬೆಂಜಮಿನ್‌ ನಾನಾ ದೇಶಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಅಲ್ಲದೇ, ಅಲ್ಲಿಂದ ಸಿಂಥೆಟಿಕ್‌ ಆಮದು ಮಾಡಿಕೊಳ್ಳುತ್ತಿದ್ದ. ಈ ರೀತಿ ಆಮದು ಮಾಡಿಕೊಂಡ ಮಾದಕ ವಸ್ತುವನ್ನು ಮುಂಬಯಿನಲ್ಲಿ ಶೇಖರಿಸಿಡುತ್ತಿದ್ದ. ಬೆಂಗಳೂರಿನಿಂದ ಮುಂಬಯಿಗೆ ಬಸ್‌ನಲ್ಲಿ ಗುರುವಾರ(ಡಿ.23) ಬೆಂಜಿಮಿನ್‌ ಹೋಗುವಾಗ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿಹಲವು ದೇಶಗಳಿಗೆ ಮಾದಕ ವಸ್ತು ಪೂರೈಸಲು ಸಿದ್ಧತೆ ಮಾಡಿಕೊಂಡಿದ್ದ ಎಂದು ಎನ್‌ಸಿಬಿ ಬೆಂಗಳೂರು ವಲಯ ನಿರ್ದೇಶಕ ಅಮಿನ್‌ ಘಾವಾಟೆ



Read more