Karnataka news paper

ಚಿತ್ರೀಕರಣ ಮುಗಿಸಿದ ‘ಕಾಕ್ಟೈಲ್’


ವಿಜಯಲಕ್ಷೀ ಕಂಬೈನ್ಸ್ ಬ್ಯಾನರ್‌ನಲ್ಲಿ ಡಾ. ಶಿವಪ್ಪ ನಿರ್ಮಾಣದ ಸಸ್ಪೆನ್ಸ್, ಥ್ರಿಲ್ಲರ್ ಕಥಾ ಹಂದರವುಳ್ಳ ವಿನೂತನ ಅವಿಷ್ಕಾರದ ‘ಕಾಕ್ಟೈಲ್’ ಸಿನಿಮಾದ ಚಿತ್ರೀಕರಣವು ಬೆಂಗಳೂರು ಸುತ್ತಮುತ್ತ ಎರಡು ಹಂತಗಳಲ್ಲಿ ಮುಗಿಸಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ.

ಶ್ರೀರಾಮ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹೊಸ ಪ್ರತಿಭೆಗಳಾದ ವಿರೇನ್ ಕೇಶವ್ ಹಾಗೂ ಚರೀಷ್ಮಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಶೋಭರಾಜ್, ಮಹಾಂತೇಶ್, ಶಿವಮಣಿ, ಚಂದ್ರಕಲಾಮೋಹನ್, ಕರಿಸುಬ್ಬು, ರಮೇಶ್‌ ಪಂಡಿತ್ ಮುಂತಾದವರ ತಾರಗಣವಿದೆ.

ಲೋಕಿತವಸ್ಯ ಸಂಗೀತ, ರವಿವರ್ಮ(ಗಂಗು) ಛಾಯಾಗ್ರಹಣ, ಮೋಹನ್.ಬಿ. ರಂಗಕಹಳೆ ಸಂಕಲನ, ಹೃದಯಶಿವ ಮತ್ತು ಸಿರಾಜ್‌ಮಿಜಾರ್ ಸಾಹಿತ್ಯ, ನರಸಿಂಹ ಸಾಹಸ, ಸುನಿಲ್ ನೃತ್ಯವಿದೆ. ಚಿತ್ರದ ಟ್ರೇಲರ್ ಸದ್ಯದಲ್ಲೆ ಬಿಡುಗಡೆಯಾಗಲಿದೆ.



Read More…Source link