Karnataka news paper

ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಸಂದೇಶಗಳಿಗೆ ಸ್ಪೆಷಲ್‌ ಎಫೆಕ್ಟ್‌ ಸೆಟ್‌ ಮಾಡೋದು ಹೇಗೆ?


ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಬಳಕೆದಾರರು ತಮ್ಮ ಡೈರೆಕ್ಟ್‌ ಮೆಸೇಜ್‌ಗಳಿಗೆ ವಿಶೇಷ ಎಫೆಕ್ಟ್‌ ಆನ್ನು ಸೆಟ್‌ ಮಾಡಬಹುದು. ಕಸ್ಟಮ್ ಚಾಟ್ ಕಲರ್‌ ಅಥವಾ ಥೀಮ್‌ಗಳನ್ನು ಸೆಟ್‌ ಮಾಡಬಹುದು. ಇದಲ್ಲದೆ ವ್ಯಾನಿಶ್ ಮೋಡ್ ಮತ್ತು ಕಸ್ಟಮ್ ಎಮೋಜಿ ರೆಸ್ಪಾನ್ಸ್‌ ಅನ್ನು ಸಹ ನೀಡಲಾಗಿದೆ. ಇದಲ್ಲದೆ ಇತ್ತೀಚಿಗೆ ಇನ್‌ಸ್ಟಾಗ್ರಾಮ್‌ ಹೊಸ ಸ್ಟ್ರೇಂಜರ್ ಥಿಂಗ್ಸ್ ಥೀಮ್ ಅನ್ನು ಕೂಡ ಸೇರಿಸಿದೆ. ಇದನ್ನು ಬಳಸಿಕೊಂಡು ನೀವು ನಿಮ್ಮ ಚಾಟ್‌ಗಳ ಥೀಮ್‌ಗಳನ್ನು ಹೇಗೆ ಬದಲಾಯಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌ ಡಿಎಂಗಳಿಗೆ ಸ್ಪೆಷಲ್‌ ಎಫೆಕ್ಟ್‌ ಅನ್ನು ಸೇರಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಡಿಎಂಗಳಿಗೆ ಸ್ಪೆಷಲ್‌ ಎಫೆಕ್ಟ್‌ ಅನ್ನು ಸೇರಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಯಾರಿಗಾದರೂ ನ್ಯೂ ಮೆಸೇಜ್‌ ಸೆಂಡ್‌ಮಾಡುವಾಗ ವಿಶೇಷ ಎಫೆಕ್ಟ್‌ ಸೇರಿಸಬೇಕು ಅಂತಾ ಅನಿಸೋದು ಸಹಜ. ಆದರೆ ವಿಶೇಷ ಎಫೆಕ್ಟ್‌ ಅನ್ನು ಸೆಟ್‌ ಮಾಡೋದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.
ಹಂತ:1 ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಸಂದೇಶ ಕಳುಹಿಸಬೇಕಾದ ಚಾಟ್ ತೆರೆಯಿರಿ ಮತ್ತು ಸಂದೇಶವನ್ನು ಟೈಪ್‌ ಮಾಡಿ
ಹಂತ:2 ನಿಮ್ಮ ಟೆಕ್ಸ್ಟ್‌ ಮೆಸೇಜ್‌ ಎಡಭಾಗದಲ್ಲಿ ಸರ್ಚ್‌ ಐಕಾನ್ ಕಾಣಲಿದೆ ಅದರ ಮೇಲೆ ಟ್ಯಾಪ್‌ ಮಾಡಿ.
ಹಂತ:3 ನೀವು ಒಮ್ಮೆ ಸರ್ಚ್‌ ಐಕಾನ್‌ ಟ್ಯಾಪ್‌ ಮಾಡಿದರೆ ನಿಮಗೆ ನಾಲ್ಕು ಸ್ಪೇಷಲ್‌ ಎಫೆಕ್ಟ್‌ ಡಿಸ್‌ಪ್ಲೇ ಆಗಲಿದೆ.
ಹಂತ:4 ಇದರಲ್ಲಿ ನಿಮ್ಮ ಆಯ್ಕೆಯ ಎಫೆಕ್ಟ್‌ ಅನ್ನು ನಿಮ್ಮ ವೈಯಕ್ತಿಕ ಸಂದೇಶಗಳಿಗೆ ಸೇರಿಸಲು ನೀವು ಬಳಸಬಹುದು.

ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್ ಥೀಮ್‌ಗಳನ್ನು ಬದಲಾಯಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್ ಥೀಮ್‌ಗಳನ್ನು ಬದಲಾಯಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಪ್ರಸ್ತುತ ಹಲವಾರು ಚಾಟ್ ಥೀಮ್‌ಗಳನ್ನು ನೀಡುತ್ತಿದೆ. ನೀವು ಕೂಡ ನಿಮ್ಮ ಹಳೆಯ ಚಾಟ್ ಕಲರ್‌ ಅಥವಾ ಥೀಮ್‌ಗಳನ್ನು ಬದಲಾಯಿಸಬೇಕು ಅಂತಾ ಎನಿಸಿದರೆ ಹೊಸ ಸ್ಟ್ರೇಂಜರ್ ಥಿಂಗ್ಸ್ ಥೀಮ್ ಅನ್ನು ಸೆಟ್‌ ಮಾಡಬಹುದು. ಹೊಸ ಥೀಮ್‌ಗಳನ್ನು ಸೆಟ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Instagram ಅಪ್ಲಿಕೇಶನ್ ತೆರೆಯಿರಿ ಮತ್ತು DM ವಿಭಾಗಕ್ಕೆ ಹೋಗಿ.
ಹಂತ:2 ನಂತರ ನೀವು ಡಿಎಂ ಕಳುಹಿಸುವ ಚಾಟ್ ತೆರೆಯಿರಿ ಮತ್ತು ಮೇಲ್ಭಾಗದಲ್ಲಿ ಕಾಣಿಸುವ ವ್ಯಕ್ತಿಯ ಹೆಸರಿನ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದಾದ ನಂತರ ನಿಮಗೆ “ಥೀಮ್” ಆಯ್ಕೆ ಕಾಣಲಿದೆ, ಅದರ ಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ ಆಯ್ಕೆಯ ಥೀಮ್ ಅನ್ನು ಆಯ್ಕೆ ಮಾಡಿ.
ಹಂತ:4 ನಂತರ ಡಿಸ್‌ಪ್ಲೇ ಮೇಲ್ಭಾಗದಲ್ಲಿ, ನೀವು ಸ್ಟ್ರೇಂಜರ್ ಥಿಂಗ್ಸ್ ಥೀಮ್ ಅನ್ನು ಸಹ ಕಾಣಬಹುದು.
ಹಂತ:5 ಅದರ ಮೇಲೆ ಟ್ಯಾಪ್ ಮಾಡಿದರೆ ಸ್ಟ್ರೇಂಜರ್ ಥಿಂಗ್ಸ್ ಥೀಮ್ ಅನ್ನು ಸೆಟ್‌ ಮಾಡಬಹುದು.

ಹೀಗೆ ಮಾಡಿದ ನಂತರ ನಿಮ್ಮ ಡಿಎಂ ಬ್ಯಾಕ್‌ಗ್ರೌಂಡ್‌ನಲ್ಲಿ ಸ್ಟ್ರೇಂಜರ್ ಥಿಂಗ್ಸ್ ಚಿತ್ರದೊಂದಿಗೆ ಕೆಂಪು ಮತ್ತು ಬಿಳಿ ಥೀಮ್ ಅನ್ನು ಕಾಣಬಹುದಾಗಿದೆ.

ಇನ್‌ಸ್ಟಾಗ್ರಾಮ್‌

ಇದಲ್ಲದೆ ಇನ್‌ಸ್ಟಾಗ್ರಾಮ್‌ ಶೀಘ್ರದಲ್ಲೇ ಇಂಟರೆಸ್ಟ್-ಬೇಸ್ಡ್ ಸರ್ಚ್ ಎನ್ನುವ ಫೀಚರ್ಸ್‌ ಪರಿಚಯಿಸಲಿದೆ. ಈ ಹೊಸ ಫೀಚರ್ಸ್‌ ಬಳಕೆದಾರರ ಆಸಕ್ತಿಗೆ ತಕ್ಕಂತೆ ಕಂಟೆಂಟ್‌ ಅನ್ನು ಸರ್ಚ್‌ ಮಾಡಲು ಅವಕಾಶ ನೀಡಲಿದೆ. ಪ್ರಸ್ತುತ, ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಯಾವುದೇ ಒಂದು ಕಂಟೆಂಟ್‌ ಅನ್ನು ಸರ್ಚ್‌ ಮಾಡಿದ್ರೆ , ಅದಕ್ಕೆ ಸಂಬಂಧಿಸಿದ ಪೇಜ್‌ಗಳನ್ನು ಮಾತ್ರ ತೋರಿಸಲಿದೆ. ಆದರೆ ಇಂಟರೆಸ್ಟ್-ಬೇಸ್ಡ್ ಸರ್ಚ್ ಇಂಟರೆಸ್ಟ್-ಬೇಸ್ಡ್ ಸರ್ಚ್ ಮೊದಲು ಪೋಸ್ಟ್‌ಗಳು, ಖಾತೆಗಳು, ಪುಟಗಳು ಅಥವಾ ವಿಷಯದ ಮೇಲೆ ಲಭ್ಯವಿರುವ ಇತರ ಮಾಹಿತಿಯನ್ನು ತೋರಿಸುತ್ತದೆ. ಇನ್ನು ಈ ಇಂಟರೆಸ್ಟ್-ಬೇಸ್ಡ್ ಸರ್ಚ್ ಸದ್ಯಕ್ಕೆ ಕೆಲವು ಪ್ರದೇಶಗಳಲ್ಲಿ ಮಾತ್ರ ಲಭ್ಯವಾಗಲಿದೆ. ಜೊತೆಗೆ ಕೆಲವೇ ಕೆಲವು ಭಾಷೆಗಳನ್ನು ಮಾತ್ರ ಬೆಂಬಲಿಸುವ ಸಾಧ್ಯತೆ ಇದೆ.

ನಿಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ನಿಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಹಂತ:1 ಮೊದಲನೆಯದಾಗಿ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ instagram.com ಗೆ ಲಾಗ್ ಇನ್ ಮಾಡಿ.
ಹಂತ:2 ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ತೆರೆದ ತಕ್ಷಣ ಮೇಲಿನ ಬಲಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಿ.
ಹಂತ:3 ನಂತರ ನಿಮ್ಮ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ, ಇದರಲ್ಲಿ ಎಡಿಟ್ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ.
ಹಂತ:4 ಈಗ ಕೆಳಗೆ ಸ್ಕ್ರಾಲ್ ಮಾಡಿ, ನಂತರ ಕೆಳಗಿನ ಬಲಭಾಗದಲ್ಲಿರುವ Temporarily disable my account ಕ್ಲಿಕ್ ಮಾಡಿ.
ಹಂತ:5 ಇದರಲ್ಲಿ ನೀವು ನಿಮ್ಮ ಖಾತೆಯನ್ನು ಏಕೆ ನಿಷ್ಕ್ರಿಯಗೊಳಿಸುತ್ತಿದ್ದೀರಿ ಅನ್ನೊದನ್ನ ಡ್ರಾಪ್-ಡೌನ್ ಮೆನುವಿನ ಆಯ್ಕೆಯನ್ನು ಆರಿಸಿ?
ಹಂತ:6 ನಂತರ ನಿಮ್ಮ ಪಾಸ್‌ವರ್ಡ್ ಅನ್ನು ರಿ-ಎಂಟ್ರಿ ಮಾಡಿ. ನೀವು ಮೆನುವಿನಿಂದ ಕಾರಣವನ್ನು ಆಯ್ಕೆಮಾಡಿ ಮತ್ತು ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿದ ನಂತರವೇ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯು ಗೋಚರಿಸುತ್ತದೆ.
ಹಂತ:7 ಇದೆಲ್ಲವೂ ಮುಗಿದ ನಂತರ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿ ಕ್ಲಿಕ್ ಮಾಡಿ.

ನಿಮ್ಮ Instagram ಅಕೌಂಟ್‌ ಅನ್ನು ಡಿಲೀಟ್‌ ಮಾಡುವುದು ಹೇಗೆ?

ನಿಮ್ಮ Instagram ಅಕೌಂಟ್‌ ಅನ್ನು ಡಿಲೀಟ್‌ ಮಾಡುವುದು ಹೇಗೆ?

ಹಂತ:1 ಮೊಬೈಲ್ ಬ್ರೌಸರ್ ಅಥವಾ ಲ್ಯಾಪ್‌ಟಾಪ್‌ ಮೂಲಕ ನಿಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ ಡಿಲೀಟ್‌ ಪೇಜ್‌ಗೆ ಹೋಗಿ.
ಹಂತ:2 ನಿಮ್ಮ ಅಕೌಂಟ್‌ ಅನ್ನು ಏಕೆ ಡಿಲೀಟ್‌ ಮಾಡುತ್ತಿದ್ದೀರಿ ಅನ್ನೊದನ್ನ ಮುಂದಿನ ಡ್ರಾಪ್‌ಡೌನ್ ಮೆನುವಿನಿಂದ ಆಯ್ಕೆಯನ್ನು ಆರಿಸಿ?
ಹಂತ:3 ನಂತರ ನಿಮ್ಮ ಪಾಸ್‌ವರ್ಡ್ ಅನ್ನು ಮರು-ನಮೂದಿಸಿ.
ಹಂತ:4 ಇದಾದ ನಂತರ ನಿಮ್ಮ ಅಕೌಂಟ್‌ ಡಿಲೀಟ್‌ ಕ್ಲಿಕ್ ಮಾಡಿ ನಿಮ್ಮ ಇನ್‌ಸ್ಟಗ್ರಾಮ್‌ ಅಕೌಂಟ್‌ ಅನ್ನು ಡಿಲೀಟ್‌ ಮಾಡಲು ರಿಕ್ವೆಸ್ಟ್‌ ಕಳುಹಿಸಿದ 30 ದಿನಗಳ ನಂತರ ನಿಮ್ಮ ಅಕೌಂಟ್‌ ಡಿಲೀಟ್‌ ಆಗಲಿದೆ. ನಂತರ ನಿಮ್ಮ ಮಾಹಿತಿಯನ್ನು ಹಿಂಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಡಿಲೀಟ್‌ ಪ್ರಕ್ರಿಯೆ ಆರಂಭವಾದ ದಿನದಿಂದ 90 ದಿನಗಳವರೆಗೆ ತೆಗೆದುಕೊಳ್ಳಬಹುದು.





Read more…