ANI
ಅನಂತ್ ನಾಗ್ (ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಅರ್ವಾನಿ ಪ್ರದೇಶದ ಮುಮನ್ ಹಾಲ್ ಎಂಬಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಓರ್ವ ಅಪರಿಚಿತ ಉಗ್ರ ಮೃತಪಟ್ಟಿದ್ದಾನೆ.
ಜಿಲ್ಲೆಯ ಅರ್ವಾನಿ ಪ್ರದೇಶದ ಮುಮನ್‍ಹಾಲ್ ಗ್ರಾಮದಲ್ಲಿ ಉಗ್ರಗಾಮಿಗಳು ಅಡಗಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆ ಕಾರ್ಡ್ ಮತ್ತು ಸರ್ಚ್ ಆಪರೇಶನ್ ಶುರುಮಾಡಿತು ಎಂದು ಪೊಲೀಸರು ಮಾಹಿತಿ ನೀಡಿದರು.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಅನಂತ್ ನಾಗ್ ನಲ್ಲಿ ಎನ್ ಕೌಂಟರ್: ಓರ್ವ ಉಗ್ರ ಹತ್ಯೆ
ಭದ್ರತಾ ಸಿಬ್ಬಂದಿ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಕಾರ್ಯಾಚರಣೆಯು ಎನ್ ಕೌಂಟರ್ ಸ್ವರೂಪ ಪಡೆಯಿತು. ಆಗ ಭದ್ರತಾ ಪಡೆಯು ಪ್ರತಿದಾಳಿ ನಡೆಸಿತು. ಈ ವೇಳೆ ಒಬ್ಬ ವ್ಯಕ್ತಿಯು ಮೃತಪಟ್ಟಿದ್ದು, ಕಾರ್ಯಾಚರಣೆಯು ಮುಂದುವರೆದಿದೆ. ಮೃತ ಉಗ್ರನ ಗುರುತು ಮತ್ತು ಸಂಬಂಧಿಕರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ ಎಂದು ಹೇಳಿದರು.