ಬ್ಯಾಂಕ್‌ಗಳು ಸಾಮಾನ್ಯವಾಗಿ ಪ್ರಿ ಅಪ್ರೂವ್ಡ್ ಲೋನ್‌ಗಳನ್ನು ಅಥವಾ ಪ್ರಿ ಅಪ್ರೂವ್ಡ್ ವೈಯಕ್ತಿಕ ಸಾಲಗಳನ್ನು ಉತ್ತಮ ಕ್ರೆಡಿಟ್ ಇತಿಹಾಸ ಹೊಂದಿರುವ ಮತ್ತು ಉತ್ತಮ ಮರುಪಾವತಿ ದಾಖಲೆ ಹೊಂದಿರುವ ಗ್ರಾಹಕರಿಗೆ ನೀಡುತ್ತವೆ.
ಒಂದೊಮ್ಮೆ ನೀವು ಎಸ್‌ಬಿಐನಿಂದ ಪ್ರಿ ಅಪ್ರೂವ್ಡ್ ವೈಯಕ್ತಿಕ ಸಾಲವನ್ನು ಬಯಸುತ್ತಿದ್ದರೆ, ನಿಮ್ಮ ಅರ್ಹತೆಯನ್ನು ಪರಿಶೀಲಿಸಲು ನೀವು ‘PAPL’ ಎಂದು 567676 ಗೆ ಮೆಸೇಜ್ ಕಳುಹಿಸಿ, ನಿಮ್ಮ ಅರ್ಹತೆಯನ್ನು ತಿಳಿದುಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಿ ಅಪ್ರೂವ್ಡ್ ವೈಯಕ್ತಿಕ ಸಾಲದ ವಿಶೇಷತೆಗಳೇನು?
- 2022ರ ಜನವರಿ 31 ರವರೆಗೆ ಈ ಸಾಲ ಪಡೆಯುವವರಿಗೆ ಎಲ್ಲಾ ‘ಪ್ರಕ್ರಿಯೆ ಶುಲ್ಕ’ ಮನ್ನಾ ಆಗಲಿದೆ. ಈ ವಿಶೇಷ ಕೊಡುಗೆಯ ಲಾಭವನ್ನು ಗ್ರಾಹಕರು ಬಳಸಿಕೊಳ್ಳಬಹುದು.
- ಕೇವಲ ನಾಲ್ಕು ಕ್ಲಿಕ್‌ಗಳಲ್ಲಿ, ಸಾಲಗಳ ಪ್ರಕ್ರಿಯೆ ನಡೆದು, ತಕ್ಷಣವೇ ಸಾಲ ವಿತರಿಸಲಾಗುತ್ತದೆ.
- ಯಾವುದೇ ಭೌತಿಕ ದಾಖಲೆಗಳ ಅಗತ್ಯವಿಲ್ಲ.
- ಯಾವುದೇ ಶಾಖೆಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ
- YONO ಆ್ಯಪ್ ದಿನದ 24 ಗಂಟೆಗಳು, ವಾರದ 7 ದಿನಗಳೂ ಲಭ್ಯವಿರುತ್ತದೆ.
- ಬಡ್ಡಿ ದರಗಳು ಶೇ. 9.6 ರಿಂದ ಆರಂಭವಾಗಲಿವೆ.
ಯೋನೋ ಆಪ್ ಮೂಲಕ ಪ್ರಿ ಅಪ್ರೂವ್ಡ್ ವೈಯಕ್ತಿಕ ಸಾಲವನ್ನು ಪಡೆಯುವುದು ಹೇಗೆ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೋನೋ ಆಪ್ ಮೂಲಕ ಪ್ರಿ ಅಪ್ರೂವ್ಡ್ ವೈಯಕ್ತಿಕ ಸಾಲವನ್ನು ಪಡೆಯುವುದು ಹೇಗೆ ಎಂಬ ವಿವರಗಳನ್ನು ಹಂತ ಹಂತವಾಗಿ ನೋಡೋಣ,
ಹಂತ 1: ಯೋನೋ ಆಪ್ ತೆರೆದು ಲಾಗ್ ಇನ್ ಆಗಿ
ಹಂತ 2: ಡ್ರಾಪ್ ಡೌನ್ ಮೆನುವಿನಿಂದ ‘ಅವೇಯ್ಲ್ ನೌ’ (Avail Now) ಆಯ್ಕೆಯನ್ನು ಆಯ್ದುಕೊಳ್ಳಿ.
ಹಂತ 3: ಸಾಲದ ಮೊತ್ತ ಮತ್ತು ಅವಧಿಯನ್ನು ನಿರ್ಧರಿಸಿ.
ಹಂತ 4: ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ಗೆ ಕಳುಹಿಸಿದ ಒಟಿಪಿಯನ್ನು ಎಂಟರ್ ಮಾಡಿ. ನಗದು ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ.