Karnataka news paper

ಒಂದೂವರೆ ವರ್ಷದೊಳಗೆ ಹೊಸಪೇಟೆ ಮಹಾನಗರಪಾಲಿಕೆ: ಆನಂದ್ ಸಿಂಗ್


ಹೊಸಪೇಟೆವಿಜಯನಗರ (ಹೊಸಪೇಟೆ): ಒಂದೂವರೆ ವರ್ಷದೊಳಗೆ ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಪ್ರವಾಸೋದ್ಯಮ ಆನಂದ್ ಸಿಂಗ್ ಹೇಳಿದರು.

ಹೊಸಪೇಟೆ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಮತದಾರರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರಸಭೆಯ 35 ವಾರ್ಡ್‌ಗಳಲ್ಲಿ ಬಿಜೆಪಿ ಅರ್ಹರಿಗೆ ಟಿಕೆಟ್ ನೀಡಿದೆ. ನಗರಸಭೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಕಳೆದ ಎರಡೂವರೆ ವರ್ಷಗಳಿಂದ ಸದಸ್ಯರು ಇಲ್ಲದ್ದರಿಂದ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ಹಾಗಾಗಿ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.

ಟಿಬಿ ಡ್ಯಾಂಗೆ ಮೂರು ಪಟ್ಟು ನೀರು ಹೆಚ್ಚಳ..! 2ನೇ ಬೆಳೆಗೆ ನೀರು ಸಿಗುವ ನಿರೀಕ್ಷೆಯಲ್ಲಿ ರೈತರು..

ನಗರಸಭೆಯ 35 ವಾರ್ಡ್ ಗಳ ವ್ಯಾಪ್ತಿಯಲ್ಲೇ ಮಹಾನಗರ ಪಾಲಿಕೆ ಮಾಡಲಾಗುವುದು. ಕಮಲಾಪುರ ಪಟ್ಟಣ ಹಾಗೂ ಕಲ್ಲಹಳ್ಳಿ ಗ್ರಾಮದ ಮುಖಂಡರು ಮಹಾನಗರ ಪಾಲಿಕೆಗೆ ಸೇರಿಸುವುದು ಬೇಡ ಎಂದು ಕೋರಿದ್ದಾರೆ. ಈಗ ಹೊಸಪೇಟೆಯ 35 ವಾರ್ಡ್ಗಳನ್ನೊಳಗೊಂಡು ಮಹಾನಗರ ಪಾಲಿಕೆ ರಚಿಸಲು ಕಾನೂನು ಸಲಹೆ ಪಡೆದುಕೊಂಡು ನಿರ್ಧರಿಸಲಾಗುವುದು. ನಗರದ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.

ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯತಿ ಪುರಸಭೆಯಾಗಿ ಮೇಲ್ದರ್ಜೆಗೇರಲಿದೆ. ಕಮಲಾಪುರದ ಅಭಿವೃದ್ಧಿಗಾಗಿ 130 ಕೋಟಿ ರೂ. ಅನುದಾನ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಯಾಬಿನೆಟ್‌ಗೆ ತರಲು ಸೂಚಿಸಿದ್ದಾರೆ ಎಂದರು.

ಸರಕಾರಿ ಜಾಗದಲ್ಲಿ ವಾಸವಾಗಿರುವ 23 ಸಾವಿರ ಕುಟುಂಬಗಳಿಗೆ ಪಟ್ಟಾ ವಿತರಣೆ ಮಾಡಲಾಗುವುದು. ಈಗಾಗಲೇ ಸರ್ವೆ ನಡೆಸಲಾಗಿದ್ದು, 7 ಸಾವಿರ ಕುಟುಂಬಗಳಿಗೆ ಪಟ್ಟಾ ಸಿದ್ಧಗೊಂಡಿವೆ ಎಂದರು.

ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಆಗಲು ರಾಹುಲ್ ಗಾಂಧಿ ಅವರು ಹಿಂದೇಟು ಹಾಕುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಮೂರು ದಿನ ದಿಲ್ಲಿಯಲ್ಲಿದ್ದರೆ, ಮೂರು ದಿನ ಇಟಲಿಯಲ್ಲಿರ‍್ತಾರೆ. ಆದ್ರೂ ಅವರಿಗೆ ಪಕ್ಷದ ಪಟ್ಟಾ ಕಟ್ಟಲು ಕಾಂಗ್ರೆಸ್ ಹವಣಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಮುಳುಗುವ ಹಡಗು ಆಗಿದೆ. ಆ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಬೆಲೆ ನೀಡಲಾಗುತ್ತಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹಿಟ್ಲರ್‌ನಂತೇ ಆಡಳಿತ ನಡೆಸಿದ್ದಾರೆ. ಅವರ ಬಳಿಕ ಅವರ ಮಗ ರಾಜೀವ್ ಗಾಂಧಿ ಪ್ರಧಾನಿಯಾದರು. ಬಳಿಕ ಮನಮೋಹನ್ ಸಿಂಗ್ ಅವರು ಗಾಂಧಿ ಕುಟುಂಬದ ಕೈಗೊಂಬೆಯಂತೇ ಆಡಳಿತ ನಡೆಸಿದರು ಎಂದರು.

ವಿಜಯನಗರ: ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದ ಪೊಲೀಸರು ಸಸ್ಪೆಂಡ್

ದೇಶದಲ್ಲಿ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸ್ಥಿತಿ ಅಧೋಗತಿಯಾಗಿದೆ. ಕಾಂಗ್ರೆಸ್‌ನಲ್ಲಿ ನೆಹರು- ಗಾಂಧಿ ಕುಟುಂಬದವರೇ ಆಡಳಿತ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಮೀತಿ ಮಿರಿದೆ ಎಂದರು.

ಚಳಿಗೆ ಬೆಚ್ಚಿದ ಜನ

ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತದಾರರ ಸಮಾವೇಶ ಹಮ್ಮಿಕೊಂಡಿತ್ತು. ಜೂ. ಪುನೀತ್ ರಾಜಕುಮಾರ ಮತ್ತು ಜೂ. ರಾಜಕುಮಾರ ಅವರ ಹಾಡುಗಳನ್ನು ಆಲಿಸಿದ ಜನ, ಸಾಂಸ್ಕೃತಿಕ ಕಾರ್ಯಕ್ರಮ ಮುಗಿಯುವ ಮುನ್ನವೇ ಚಳಿ ಹೊಡೆತಕ್ಕೆ ಕುರ್ಚಿಗಳನ್ನು ಖಾಲಿ ಮಾಡಿದ್ದರು.



Read more