Karnataka news paper

ಎಲ್‌ಐಸಿ ಪಾಲಿಸಿಯಲ್ಲಿ ನಾಮಿನಿ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ


ಹೈಲೈಟ್ಸ್‌:

  • ನೀವು ಎಲ್‌ಐಸಿ ಪಾಲಿಸಿ ಹೊಂದಿದ್ದೀರಾ
  • ನಿಮ್ಮ ಪಾಲಿಸಿಗೆ ನಾಮಿನಿ ಬದಲಾವಣೆ ಮಾಡಲು ಬಯಸಿದ್ದೀರಾ
  • ಎಲ್‌ಐಸಿ ನಾಮಿನಿ ಬದಲಾವಣೆ ಹೇಗೆಂಬ ಮಾಹಿತಿ ಇಲ್ಲಿದೆ

ಹೊಸದಿಲ್ಲಿ: ಇಂದಿಗೂ ಜೀವ ವಿಮೆ ಎಂದರೆ ‘ಎಲ್‌ಐಸಿ‘ ಎಂದೇ ಹೇಳಲಾಗುತ್ತದೆ. ದೇಶದ ಬಹುತೇಕ ಜನರು ತಮ್ಮ ಜೀವ ವಿಮೆ ತೆಗೆದುಕೊಳ್ಳಲು ‘ಜೀವ ವಿಮಾ ನಿಗಮ (LIC)ವನ್ನೇ ಅವಲಂಬಿಸಿದ್ದಾರೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಎಲ್ಐಸಿ ಪಾಲಿಸಿ ಕೊಳ್ಳುವುದು ಉತ್ತಮ ಆಯ್ಕೆ ಕೂಡ.

ಆದರೆ, ನೀವು ಪಾಲಿಸಿ ತೆಗೆದುಕೊಂಡಾಗ, ಪಾಲಿಸಿಯಲ್ಲಿ ಕುಟುಂಬದ ಸದಸ್ಯರನ್ನು ನಾಮಿನಿಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಎಲ್‌ಐಸಿಯ ಪೋರ್ಟಲ್‌ನಲ್ಲಿ ಎಲ್ಲಾ ಸೌಲಭ್ಯಗಳು ಆನ್‌ಲೈನ್‌ನಲ್ಲಿ ಪ್ರಾರಂಭವಾಗಿದ್ದರೂ, ನಾಮಿನಿಯನ್ನು ಬದಲಾಯಿಸುವ ಪ್ರಕ್ರಿಯೆ ಮಾತ್ರ ಇನ್ನೂ ಆಫ್‌ಲೈನ್ ಮೋಡ್‌ನಲ್ಲಿ ಮಾಡಲಾಗುತ್ತದೆ.

ಪಾಲಿಸಿಯಲ್ಲಿ ನಾಮಿನಿ ಅಗತ್ಯ ಏಕೆ?
ಎಲ್ಐಸಿ ಪಾಲಿಸಿಯನ್ನು (LIC policy) ಖರೀದಿಸುವಾಗ ನಾಮಿನಿಯನ್ನು ನಿಗದಿಪಡಿಸಲಾಗಿಲ್ಲ ಎಂದು ಭಾವಿಸಿ. ಪಾಲಿಸಿಯಲ್ಲಿನ ನಿಯಮಗಳ ಪ್ರಕಾರ, ಪಾಲಿಸಿ ತೆಗೆದುಕೊಳ್ಳುವಾಗ ಕುಟುಂಬದ ಸದಸ್ಯರು ಅಥವಾ ಸಂಬಂಧಿಕರನ್ನು ನಾಮನಿರ್ದೇಶನ ಅಂದರೆ ನಾಮಿನಿ ಮಾಡಬೇಕು. ಪಾಲಿಸಿಯಲ್ಲಿ ಯಾರ ಹೆಸರನ್ನು ನೋಂದಾಯಿಸಲಾಗಿದೆಯೋ ಅದೇ ವ್ಯಕ್ತಿಗೆ ಪಾಲಿಸಿಯ ಹಣ ಅಥವಾ ಇತರೆ ಸೌಲಭ್ಯಗಳು ದೊರೆಯುತ್ತವೆ.

ಎಲ್‌ಐಸಿ ಷೇರು ಖರೀದಿಸಲು ಡಿಮ್ಯಾಟ್‌ ಖಾತೆ ತೆರೆಯುವುದು ಹೇಗೆ? ಇಲ್ಲಿದೆ ಪೂರ್ಣ ವಿವರ!

ಯಾರನ್ನೆಲ್ಲ ನಾಮಿನಿ ಮಾಡಬಹುದು?
ಎಲ್ಐಸಿ ಪಾಲಿಸಿಯಲ್ಲಿ ನೀವು ಒಬ್ಬರನ್ನು ಅಥವಾ ಒಬ್ಬರಿಗಿಂತ ಹೆಚ್ಚು ಮಂದಿಯನ್ನು ನಾಮಿನಿ ಮಾಡಬಹುದು. ನೀವು ಜಂಟಿ ಪಾಲಿಸಿಯನ್ನು ತೆಗೆದುಕೊಂಡಿದ್ದರೆ, ನಾಮಿನಿ ಕೂಡ ಜಂಟಿಯಾಗಿರುತ್ತಾರೆ. ಅಪರಿಚಿತ ವ್ಯಕ್ತಿಯನ್ನು ಪಾಲಿಸಿಯಲ್ಲಿ ನಾಮಿನಿ ಮಾಡಲಾಗುವುದಿಲ್ಲ. ಅದೇ ಸಮಯದಲ್ಲಿ, ನಿಮ್ಮ ಮಗು ಅಪ್ರಾಪ್ತ ವಯಸ್ಸಿನವರಾಗಿದ್ದರೂ ಸಹ, ಅವರನ್ನು ನಾಮಿನಿಯನ್ನಾಗಿ ಮಾಡಬಹುದು.

ಪಾಲಿಸಿಯಲ್ಲಿ ನಾಮಿನಿ ಬದಲಾಯಿಸುವುದು ಹೇಗೆ?
ಪಾಲಿಸಿಯ ಮುಕ್ತಾಯದ ಮೊದಲು, ಯಾವುದೇ ವ್ಯಕ್ತಿಯು ನಾಮಿನಿಯನ್ನು (Nominee) ಎಷ್ಟು ಬಾರಿ ಬೇಕಾದರೂ ಬದಲಾಯಿಸಬಹುದು. ನಿಮ್ಮ ಪಾಲಿಸಿ ಕಾರ್ಯನಿರ್ವಹಿಸುವ ಅದೇ ಶಾಖೆಯಲ್ಲಿ ನಾಮಿನಿಯ ಹೆಸರನ್ನು ಬದಲಾಯಿಸಲಾಗುತ್ತದೆ. ಪಾಲಿಸಿಯನ್ನು ತೆರೆಯಲಾದ ಸ್ಥಳದಿಂದ ನಿಮ್ಮ ನಾಮಿನಿಯನ್ನು ನೀವು ಬದಲಾಯಿಸಬಹುದು. ನಾಮಿನಿಯನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗುವುದಿಲ್ಲ, ನೀವು ಅದನ್ನು ಆಫ್‌ಲೈನ್‌ನಲ್ಲಿ ಮಾತ್ರ ಮಾಡಬಹುದು.

4ನೇ ತ್ರೈಮಾಸಿಕದಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಲು ಎಲ್‌ಐಸಿ ಸಜ್ಜು, ಸೃಷ್ಟಿಯಾಗಲಿದೆ ಇತಿಹಾಸ

ನಾಮಿನಿಯ ಹೆಸರನ್ನು ಬದಲಾಯಿಸುವ ಪ್ರಕ್ರಿಯೆ
ಎಲ್‌ಐಸಿ (LIC)ಯ ಶಾಖೆಗೆ ಹೋಗಿ ಅಲ್ಲಿ ನಿಮ್ಮ ನಾಮಿನಿಯನ್ನು ಬದಲಾಯಿಸುವುದು. ಪಾಲಿಸಿಯಲ್ಲಿ ನಾಮಿನಿಯನ್ನು ಬದಲಾಯಿಸಲು ಕೆಲವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅದಕ್ಕೂ ಮೊದಲು LIC ವೆಬ್‌ಸೈಟ್‌ನಿಂದ ನಾಮಿನಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ನಾಮಿನಿಯೊಂದಿಗಿನ ಸಂಬಂಧದ ಪುರಾವೆಯನ್ನು ಒದಗಿಸಿ ಮತ್ತು ಫಾರ್ಮ್‌ನಲ್ಲಿ ಎಲ್ಲಾ ವಿವರಗಳನ್ನು ನಮೂದಿಸಿ ಸಲ್ಲಿಸಬೇಕು. ಈ ಮೂಲಕ ನಾಮಿನಿಯನ್ನು ಬದಲಾಯಿಸಬಹುದು.



Read more