ಬಾಲಿವುಡ್ ತಾರೆಗಳಾದ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕತ್ರೀನಾ–ವಿಕ್ಕಿ ಅವರ ಖಾಸಗಿ ಮದುವೆ ಸಮಾರಂಭದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿವೆ.
ಅರಶಿನ ಶಾಸ್ತ್ರದ ಫೋಟೊಗಳನ್ನು ಕತ್ರೀನಾ ಮತ್ತು ವಿಕ್ಕಿ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಇಂದು (ಶನಿವಾರ) ಹಂಚಿಕೊಂಡಿದ್ದಾರೆ.
ಕತ್ರೀನಾ ಹಂಚಿಕೊಂಡಿರುವ ಫೋಟೊಗಳಿಗೆ ಭಾರತೀಯ ಚಿತ್ರರಂಗದ ಖ್ಯಾತ ನಟಿಯರಾದ ಆಲಿಯಾ ಭಟ್, ಅನುಷ್ಕಾ ಶರ್ಮಾ, ರಶ್ಮಿಕಾ ಮಂದಣ್ಣ, ವಾಣಿ ಕಪೂರ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.