ಮುಂಬೈ: ಬಾಲಿವುಡ್ ನಟಿ ಲಾರಾ ದತ್ತಾ ಅವರು ಫೋಟೊಜೆನಿಕ್ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಮದುವೆಯಾದ ಹತ್ತು ವರ್ಷಗಳಲ್ಲಿ ಲಾರಾ ಅವರ ಚಂದದ ಫೋಟೊವೊಂದನ್ನು ಕ್ಲಿಕ್ಕಿಸಲು ಅವರ ಪತಿ ಮಹೇಶ್ ಭೂಪತಿ ಅವರಿಗೆ ಸಾಧ್ಯವಾಗಿರಲೇ ಇಲ್ಲವಂತೆ.
ಇದನ್ನು ಸ್ವತಃ ಲಾರಾ ದತ್ತ ಅವರೇ ಬಹಿರಂಗಪಡಿಸಿದ್ದಾರೆ. ಅವರು ಇತ್ತೀಚೆಗೆ ಮಾಲ್ಡಿವ್ಸ್ ಪ್ರವಾಸದಲ್ಲಿ ಕ್ಲಿಕ್ಕಿಸಿದ ಕೆಲವು ಸುಂದರ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಫೋಟೊ ಜತೆ ತಮಾಷೆಯ ಬರಹವೊಂದನ್ನು ಲಾರಾ ಪೋಸ್ಟ್ ಮಾಡಿದ್ದಾರೆ.
‘ಮದುವೆಯಾಗಿ ಒಂದು ದಶಕದ ನಂತರ ನನ್ನ ಪತಿ ಅಂತಿಮವಾಗಿ ನನ್ನ ಉತ್ತಮ ಫೋಟೊ ಕ್ಲಿಕ್ಕಿಸಲು ಕಲಿತಿದ್ದಾರೆ. ಇದನ್ನು ಪೋಸ್ಟ್ ಮಾಡದೇ ಇರಲು ನನ್ನಿಂದ ಸಾಧ್ಯವಾಗಲಿಲ್ಲ. ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಆದರೆ, ಮಹೇಶ್ ಭೂಪತಿ ಅವರೇ, ನಿಮ್ಮ ಒಳಗಿನ ಪ್ರತಿಭೆಗಳನ್ನು ನೀವು ಅನ್ವೇಷಿಸುತ್ತಿದ್ದೀರಿ’ ಎಂದು ತಿಳಿಸಿದ್ದಾರೆ.