Karnataka news paper

ನಾನು ತಪ್ಪು ಮಾಡಿಲ್ಲ: ನನ್ನ ಮಗುವಿಗೆ ತಂದೆ ಇದ್ದಾರೆ– ಸಂಸದೆ ನುಸ್ರತ್ ಜಹಾನ್‌


ಕೋಲ್ಕತ್ತ: ಬಂಗಾಳಿ ನಟಿ ಮತ್ತು ಸಂಸದೆ ನುಸ್ರತ್ ಜಹಾನ್ ಅವರು ಮಗುವಿಗೆ ಜನ್ಮ ನೀಡಿದ ವಿಚಾರದ ಕುರಿತು ಮಾತನಾಡಿದ್ದಾರೆ. 

‘ಇಷ್ಕ್‌ ವಿತ್‌ ನುಸ್ರತ್‌’ ಎಂಬ ಯೂಟ್ಯೂಬ್‌ ಚಾಟ್‌ ಶೋನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ನನ್ನ ಮಗ ಯಶಾನ್‌ಗೆ ತಂದೆ ಇದ್ದಾರೆ’ ಎಂದು ಹೇಳಿದ್ದಾರೆ.

‘ತಾಯಿಯಾಗುವ ನನ್ನ ನಿರ್ಧಾರವು ವಿವೇಕದಿಂದ ಕೂಡಿದೆ. ಈ ಬಗ್ಗೆ ನನಗೆ ಹೆಮ್ಮೆಯೂ ಇದೆ’ ಎಂದು ನುಸ್ರತ್‌ ತಿಳಿಸಿದ್ದಾರೆ.

ಸೆ. 26 ರಂದು ನುಸ್ರತ್ ಜಹಾನ್ ಕೋಲ್ಕತ್ತದ ಭಾಗೀರಥಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. 

ನುಸ್ರತ್ ಮಗುವಿನ ಜನನದ ಮಾಹಿತಿಯಲ್ಲಿ ಮಗುವಿನ ಹೆಸರು ಯಶಾನ್ ಹಾಗೂ ತಂದೆ ಹೆಸರು ದೇಬಾಸಿಸ್ ದಾಸ್‌ ಗುಪ್ತಾ (ಯಶ್‌ ದಾಸ್‌ ಗುಪ್ತಾ) ಎಂದು ಉಲ್ಲೇಖಿಸಿರುವುದು ತಿಳಿದು ಬಂದಿತ್ತು. ನುಸ್ರತ್ ಅವರು ನಟ ಯಶ್ ದಾಸ್‌ ಗುಪ್ತಾ ಜೊತೆ ಲಿವ್ ಇನ್– ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ. 

2019ರಲ್ಲಿ ಟರ್ಕಿಯಲ್ಲಿ ಉದ್ಯಮಿ ನಿಖಿಲ್ ಜೈನ್ ಅವರೊಂದಿಗೆ ನುಸ್ರತ್‌ ಜಹಾನ್‌ ವಿವಾಹವಾಗಿದ್ದರು.

ಕಾನೂನು ಪ್ರಕಾರ ವಿವಾಹ ನೋಂದಾಯಿಸಿಕೊಳ್ಳುವಂತೆ ತಾವು ಮಾಡಿದ ವಿನಂತಿಗಳನ್ನು ನುಸ್ರತ್ ಜಹಾನ್ ನಿರಾಕರಿಸಿದ್ದರು ಎಂದು ನಿಖಿಲ್ ಜೈನ್ 2020ರ ಜೂನ್‌ನಲ್ಲಿ ಆರೋಪಿಸಿದ್ದರು.

ನಿಖಲ್ ಜೈನ್ ಅವರೊಂದಿಗೆ ನಡೆದಿದ್ದ ವಿವಾಹವು ಭಾರತೀಯ ಕಾನೂನುಗಳ ಪ್ರಕಾರ ಮಾನ್ಯವಾಗಿಲ್ಲ ಎಂದು ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹೇಳಿಕೊಂಡಿದ್ದರು.



Read More…Source link