ಜೂನ್ 8 ರಂದು ಷೇರು ತನ್ನ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದ ನಂತರ, ಬೆಲೆಯಲ್ಲಿ ತೀವ್ರ ತಿದ್ದುಪಡಿಯನ್ನು ಕಂಡಿದ್ದಲ್ಲದೆ, ಅಂದಿನಿಂದ ಶೇ. 37ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಆದರೂ, ಕಳೆದ ಎರಡು ವಹಿವಾಟು ಅವಧಿಗಳಲ್ಲಿ ಭಾರಿ ಖರೀದಿಗೆ ಸಾಕ್ಷಿಯಾಗಿದ್ದು, ಷೇರು ಬೆಲೆ ಶೇ. 28 ಕ್ಕಿಂತ ಹೆಚ್ಚಾಗಿದೆ. ಷೇರು ಶುಕ್ರವಾರ ಶೇ. 8ಕ್ಕಿಂತ ಹೆಚ್ಚು ಏರಿಕೆ ಕಂಡಿದ್ದು, ಆವೇಗದಲ್ಲಿ ಮುಂದುವರಿಯುತ್ತಿದೆ. ಹೆಚ್ಚಿನ ಸಂಖ್ಯೆಯ ಷೇರುಗಳ (ವಾಲ್ಯೂಮ್) ವಹಿವಾಟೂ ನಡೆಯುತ್ತಿದ್ದು, ಈ ಏರಿಕೆಯನ್ನು ಬೆಂಬಲಿಸಿದೆ. ಇದು ಮಾರುಕಟ್ಟೆಯಲ್ಲಿ ಭಾಗವಹಿಸುವವರು ಷೇರು ಖರೀದಿಯ ಆಸಕ್ತಿ ಹೊಂದಿರುವುದನ್ನೂ ತೋರಿಸುತ್ತಿದೆ. ಕೊನೆಯ ವಹಿವಾಟಿನಲ್ಲಿ ಎಂಎಸಿಡಿ ಗೂಳಿ ಜಿಗಿತದ ಸೂಚನೆಯನ್ನು ಬಿಟ್ಟುಕೊಟ್ಟಿದ್ದು, ಟ್ರೆಂಡಿಂಗ್‌ನಲ್ಲಿ ಬದಲಾವಣೆಯಾಗುವ ಸುಳಿವು ನೀಡಿದೆ. ದೈನಂದಿನ ಆರ್‌ಎಸ್‌ಐ 37 ರಿಂದ 70ಕ್ಕೆ ಏರಿಯಾಗಿದ್ದು, ಷೇರಿನ ಪ್ರಬಲ ಶಕ್ತಿಯನ್ನು ಸೂಚಿಸುತ್ತಿದೆ. ಟ್ರೆಂಡ್ ಸೂಚಕ ಎಡಿಎಕ್ಸ್ ಏರಿಕೆ ಕಾಣುತ್ತಿದ್ದು 20ಕ್ಕಿಂತ ಮೇಲೇರಿದೆ. ಇದು ಪ್ರಬಲ ಟ್ರೆಂಡಿಂಗ್‌ನ ಶಕ್ತಿಯನ್ನು ಸೂಚಿಸುತ್ತಿದೆ.
ಬಲವಾದ ಪ್ರೈಸ್ ಆಕ್ಷನ್ (ಬೆಲೆ ಕ್ರಮ) ಮತ್ತು ಹೆಚ್ಚುತ್ತಿರುವ ವ್ಯಾಲ್ಯೂಮ್‌ಗಳನ್ನು ಪರಿಗಣಿಸಿದಾಗ ಷೇರು ಬಲವಾದ ಏರಿಕೆಗೆ ಸಿದ್ಧವಾಗಿದೆ ಎಂಬುದು ತಿಳಿದು ಬರುತ್ತಿದೆ. ಮತ್ತು ಮುಂಬರುವ ದಿನಗಳಲ್ಲಿ ಹೆಚ್ಚಿನ ಮೌಲ್ಯದಲ್ಲಿ ವ್ಯಾಪಾರ ಮಾಡುವ ನಿರೀಕ್ಷೆಯಿದೆ.
ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.
ಹಕ್ಕುತ್ಯಾಗ ( Disclaimer): ಮೇಲಿನ ವಿಷಯವನ್ನು ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್ (DSIJ)ಪರವಾಗಿ ಬರೆಯಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಿದ, ಅದಕ್ಕೆ ಸಂಬಂಧಿಸಿದ ಎಲ್ಲ ವಾರಂಟಿಗಳನ್ನು ಟಿಐಎಲ್ ನಿರಾಕರಿಸುತ್ತದೆ. ಒದಗಿಸಿರುವ ಯಾವುದೇ ಮಾಹಿತಿ ಮತ್ತು ವಿಷಯವು ಸರಿಯಾಗಿದೆ, ನವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.