ಸರಕಾರಿ ವಕೀಲರು, ಲೈವ್ ಸ್ಟ್ರೀಮಿಂಗ್ ಮತ್ತು ಕಲಾಪದ ಪ್ರಕ್ರಿಯೆ ರೆಕಾರ್ಡಿಂಗ್ ನಿಯಮಗಳಿಗೆ ಯಾವುದೇ ತಿದ್ದುಪಡಿ ಮಾಡದೆ ಸರಕಾರ ಒಪ್ಪಿಕೊಂಡಿದೆ. ಬುಧವಾರವಷ್ಟೇ ರಾಜ್ಯಪಾಲರು ನಿಯಮಗಳಿಗೆ ಅಂಕಿತ ಹಾಕಿದ್ದಾರೆ. ಈಗ ನಿಯಮಗಳನ್ನು ಗೆಜೆಟ್‌ನಲ್ಲಿ ಪ್ರಕಟಿಸಬೇಕಿದೆ. ಅದಕ್ಕೆ ಸಮಯ ನೀಡಬೇಕು ಎಂದು ಕೋರಿದರು. ನ್ಯಾಯಾಲಯದ ಕಲಾಪವನ್ನು ಲೈವ್ ಸ್ಟ್ರೀಮಿಂಗ್ ಮಾಡುವುದಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ನಿಯಮಗಳಿಗೆ ಕರ್ನಾಟಕ ಹೈಕೋರ್ಟ್‌ನ ಪೂರ್ಣಪೀಠವು ಸೆ.17ರಂದು ಒಪ್ಪಿಗೆ ನೀಡಿತ್ತು. ಪೂರ್ವ ತಯಾರಿಯ ಭಾಗವಾಗಿ ಮುಖ್ಯ ನ್ಯಾಯಮೂರ್ತಿ ಪೀಠದಿಂದ ಆಯ್ದ ಪ್ರಕರಣಗಳನ್ನು ಲೈವ್ ಸ್ಟ್ರೀಮ್ ಸಹ ಮಾಡಲಾಗಿತ್ತು.
ಬೆಳಗಾವಿ ಜಗತ್ತಿನ ಹೊರಗಿದೆಯೆ?
ಸದ್ಯ ಎಲ್ಲ ಅಧಿಕಾರಿಗಳು ಬೆಳಗಾವಿಯಲ್ಲಿ ಇದ್ದಾರೆ. ರಾಜ್ಯಪಾಲರು ಅಂಕಿತ ಹಾಕಿರುವ ಮಾಹಿತಿ ಸಿಕ್ಕಿದೆ. ಉಳಿದ ಮಾಹಿತಿ ದೊರಕುತ್ತಿಲ್ಲ. ಸ್ವಲ್ಪ ಸಮಯ ನೀಡಿದರೆ ಗೆಜೆಟ್ ಪ್ರಕಟಣೆ ಸೇರಿದಂತೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಸರಕಾರಿ ವಕೀಲರು ಹೇಳಿದರು. ಆಗ ಸಿಜೆ ‘ಬೆಳಗಾವಿಯೇನು ಜಗತ್ತಿನ ಹೊರಗಿದೆಯೇ’ ಎಂದು ಖಾರವಾಗಿ ಪ್ರಶ್ನಿಸಿದರು. ಸುಮ್ಮನೆ ಕಾರಣ ಹೇಳಬೇಡಿ, ನಿಮ್ಮ ಬಳಿ ಸಮರ್ಪಕ ಮಾಹಿತಿಯೇ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಹೈಕೋರ್ಟ್ ನ್ಯಾಯಪೀಠಗಳ ಕಲಾಪದ ನೇರ ಪ್ರಸಾರದ ನಿಯಮಗಳಿಗೆ ರಾಜ್ಯ ಸರ್ಕಾರದ ಸಮ್ಮತಿ
ಬೆಂಗಳೂರು: ಹೈಕೋರ್ಟ್ ನ್ಯಾಯಪೀಠಗಳ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡುವುದಕ್ಕೆ ಸಂಬಂಧಿಸಿದ ಲೈವ್ ಸ್ಟ್ರೀಮಿಂಗ್ ಮತ್ತು ಕಲಾಪದ ಪ್ರಕ್ರಿಯೆ ರೆಕಾರ್ಡಿಂಗ್ ನಿಯಮಗಳಿಗೆ ರಾಜ್ಯ ಸರಕಾರ ಸಮ್ಮತಿಸಿದೆ.