Karnataka news paper

ಎಂಇಎಸ್ ಪುಂಡಾಟಿಕೆಗೆ ಮಹಾರಾಷ್ಟ್ರ ಸರ್ಕಾರ ಕುಮ್ಮಕ್ಕು ಕೊಡುತ್ತಿದೆ : ಅನ್ನದಾನಿ ಕಿಡಿ


ಹೈಲೈಟ್ಸ್‌:

  • ವಿಧಾನಸಭೆಯಲ್ಲಿ ಮತ್ತೆ ಎಂಇಎಸ್ ಪುಂಡಾಟಿಕೆಗೆ ಕಿಡಿ
  • ಎಂಇಎಸ್ ಪುಂಡಾಟಿಕೆಗೆ ಸರ್ಕಾರ ಇದಕ್ಕೆ ಕುಮ್ಮಕ್ಕು ಕೊಡುತ್ತಿದೆ
  • ಎಂಇಎಸ್, ಶಿವಸೇನೆ ವಿರುದ್ಧ ಶಾಸಕ ಅನ್ನದಾನಿ ಕಿಡಿ

ಬೆಳಗಾವಿ: ಶಿವಸೇನೆ ಹಾಗೂ ಎಂಇಎಸ್ ಪುಂಡಾಟಿಕೆ ವಿಚಾರವಾಗಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಶಾಸಕ ಡಾ. ಅನ್ನದಾನಿ ಆಗ್ರಹಿಸಿದರು. ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅನ್ನದಾನಿ, ಗೋಕಾಕ್ ಗಡಿಯಲ್ಲಿ ಸಿಎಂ ಪ್ರತಿಕೃತಿ ಸುಡಲಾಗಿದೆ. ಮಹಾರಾಷ್ಟ್ರ ಸರ್ಕಾರ ಇದಕ್ಕೆ ಕುಮ್ಮಕ್ಕು ಕೊಡುತ್ತಿದೆ ಎಂಬ ಅನುಮಾನ ಇದೆ. ಕನ್ನಡ ಸಂಘಟನೆಗಳ ಬಂದ್ ಕರೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.

ಕನ್ನಡಿಗರ ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಕನ್ನಡ ಬಾವುಟ ರಕ್ಷಣೆ ಮಾಡುವ ಅಗತ್ಯ ಇದೆ. ಸರ್ಕಾರ ಉಗ್ರ ಕ್ರಮ ಜರಗಿಸಿದರೆ ಇಂತಹ ಪರಿಸ್ಥಿತಿ ಮರುಕಳಿಸುತ್ತಿರಲಿಲ್ಲ. ಕರ್ನಾಟಕ ಕಾಯಿರಿ ಎಂದು ಮತ‌ ಕೊಟ್ಟರೆ ಮಹಾರಾಷ್ಟ್ರ ಬಾವುಟ ಹಿಡಿದುಕೊಂಡು ಹೋಗುತ್ತೇನೆ ಎಂದು ಸದಸ್ಯರೊಬ್ಬರು ಎನ್ನುತ್ತಾರೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತ್ತಾಗಿದೆ ಎಂದರು.

ಇದಕ್ಕೆ ಸಚಿವ ಗೋವಿಂದ ಕಾರಜೋಳ ಉತ್ತರ‌ ನೀಡಿ, ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ.‌ ಕೆಲವರನ್ನು‌ ಬಂಧನ ಮಾಡಲಾಗಿದೆ.‌ ನೆಲ ಜಲ ರಕ್ಷಣೆಗಾಗಿ ಸರ್ಕಾರ ಹಿಂದೇಟು ಹಾಕಲ್ಲ ಎಂದರು.

ಪ್ರತಿಮೆಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಮಟ್ಟ ಹಾಕದೆ ಬಿಡುವುದಿಲ್ಲ: ಆರಗ ಜ್ಞಾನೇಂದ್ರ

ನಡಹಳ್ಳಿ ಅಸಮಾಧಾನ!
ಉತ್ತರ ಕರ್ನಾಟಕ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಶಾಸಕ ಎ.ಎಸ್ ನಡಹಳ್ಳಿ ಅಸಮಾಧಾನಗೊಂಡ ಘಟನೆ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಸ್ಪೀಕರ್ ‌ಕಾಗೇರಿ ಎರಡು ಬಾರಿ ನಡಹಳ್ಳಿ ಹೆಸರು ಕರೆದರು ಪ್ರಶ್ನೆ ಕೇಳದೆ ಸುಮ್ಮನಾದರು. ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿದ್ದು, ಸದನ ಆರಂಭವಾಗುತ್ತಿದ್ದಂತೆ ಈ ವಿಚಾರ ಪ್ರಸ್ತಾಪ ಮಾಡಿದ್ದರು.

ಪ್ರಶ್ನೋತ್ತರ ಬಳಿಕ ಅವಕಾಶ ನೀಡುವ ಭರವಸೆಯನ್ನು ಸ್ಪೀಕರ್ ಕೊಟ್ಟಿದ್ದರು. ಹೀಗಿದ್ದರೂ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳದೆ ನಡಹಳ್ಳಿ ಸುಮ್ಮನಾದರು. ಎರಡು ಬಾರಿ ಹೆಸರು ಕೂಗಿದರೂ ಮೌನವಾಗಿ ಕುಳಿತರು.



Read more