Karnataka news paper

ಮತಾಂತರ ನಿಷೇಧ ಮಸೂದೆ: ಮುಂದಿನ ಕ್ರಮ ಕುರಿತು ಚರ್ಚಿಸಲು ಶೀಘ್ರದಲ್ಲೇ ಬಿಷಪ್ ಗಳ ಸಭೆ


The New Indian Express

ಮೈಸೂರು: ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ತಯಾರಿ ನಡೆಸುತ್ತಿರುವಾಗ, ಇದು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿದೆ ಎಂದು ಭಾವಿಸಿರುವ ರಾಜ್ಯದ 14 ಬಿಷಪ್‌ಗಳ ಗುಂಪು ಶೀಘ್ರದಲ್ಲೇ ಸಭೆ ಸೇರಿ ಶಾಸನದ ವಿರುದ್ಧ ಕಾನೂನು ಹೋರಾಟ ನಡೆಸಲು ನಿರ್ಧರಿಸಿದೆ.

ಮತಾಂತರ ನಿಷೇಧ ಮಸೂದೆ: ಮುಂದಿನ ಕ್ರಮ ಕುರಿತು ಚರ್ಚಿಸಲು ಶೀಘ್ರದಲ್ಲೇ ಬಿಷಪ್ ಗಳ ಸಭೆವಿಧೇಯಕಕ್ಕೆ ಹೆದರುವುದಿಲ್ಲ, ಏಕೆಂದರೆ ಕ್ರಿಶ್ಚಿಯನ್ನರು ಎಂದಿಗೂ ಮತಾಂತರದಲ್ಲಿ ತೊಡಗಿಲ್ಲ. ಮೈಸೂರು ಧರ್ಮಪ್ರಾಂತ್ಯವು 150 ಕ್ಕೂ ಹೆಚ್ಚು ಸಂಸ್ಥೆಗಳನ್ನು ನಡೆಸುತ್ತಿದೆ, ಲಕ್ಷಾಂತರ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತದೆ. “ನಾವು ಕೋವಿಡ್ ಸಮಯದಲ್ಲಿ ಸಾಕಷ್ಟು ಸೇವೆಯನ್ನು ಮಾಡಿದ್ದೇವೆ, ಆದರೆ ನಾವು ಮತಾಂತರಗೊಳ್ಳಲು ಯಾರಿಗೂ ಆಮಿಷವೊಡ್ಡಿಲ್ಲ ಎಂದು ಮೈಸೂರು ಬಿಷಪ್ ರೆವರೆಂಡ್ ಫೆಡ್ರಿಕ್ ವಿಲಿಯಂ ಹೇಳಿದರು. 

ಕೆಲ ವ್ಯಕ್ತಿಗಳು ಆಧಾರ ರಹಿತ ಆರೋಪ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ಬಲವಂತವಾಗಿ ಮತಾಂತರಕ್ಕೆ ಒಳಗಾದವರನ್ನು ಶಿಕ್ಷಿಸಲು ಈಗಾಗಲೇ ಅವಕಾಶವಿರುವುದರಿಂದ ಅಂತಹ ಕಾನೂನಿನ ಅಗತ್ಯವಿಲ್ಲ. ರಾಜ್ಯದಲ್ಲಿ ಕಾಯ್ದೆ ಜಾರಿಗೆ ಬಂದರೆ ಮುಂದಿನ ಕ್ರಮದ ಕುರಿತು ಚರ್ಚಿಸಲು ಬಿಷಪ್‌ಗಳ ಗುಂಪು ಶೀಘ್ರದಲ್ಲೇ ಸಭೆ ಸೇರಲಿದೆ ಎಂದು ಅವರು ಹೇಳಿದರು. 

ಸಂವಿಧಾನವು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿದ ಅವರು, ಯಾವುದೇ ಸರ್ಕಾರ ಅದರ ವಿರುದ್ಧ ಹೋಗಬಾರದು ಎಂದರು.



Read more