Karnataka news paper

ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಟೆಸ್ಟ್, 4 ನೇ ದಿನ: ಭೋಜನ ವಿರಾಮದ ನಂತರದ ಸ್ಕೋರ್ ವಿವರ ಹೀಗಿದೆ…


Source : Online Desk

ಮುಂಬೈ: ಮುಂಬೈ ನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್-ಭಾರತ ನಡುವಿನ 2 ನೇ ಟೆಸ್ಟ್ ನ 4 ನೇ ದಿನಂದು 2 ನೇ ಇನ್ನಿಂಗ್ಸ್ ನ ಭೋಜನ ವಿರಾಮದ ವೇಳೆ  ಭಾರತ ತಂಡ 5 ವಿಕೆಟ್ ನಷ್ಟಕ್ಕೆ 223 ರನ್ ಗಳನ್ನು ಗಳಿಸಿದೆ. 

ಇತ್ತೀಚಿನ ವರದಿಯ ಪ್ರಕಾರ ಭಾರತ ತಂಡ ನ್ಯೂಜಿಲ್ಯಾಂಡ್ ಗಿಂತ  488 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ. 

ಆರಂಭಿಕ ಆಟಗಾರರಾದ ಮಯಾಂಕ್ ಅಗರ್ವಾಲ್ 108 ಎಸೆತಗಳಲ್ಲಿ 62 ರನ್ ಹಾಗೂ ಚೇತೇಶ್ವರ್ ಪೂಜಾರಾ 97 ಎಸೆತಗಳಲ್ಲಿ 47 ರನ್ ಗಳಿಸಿದರು. 107 ರನ್ ಗಳ ಜೊತೆಯಾಟ ಆಡಿದ ಇಬ್ಬರೂ ಆಟಗಾರರು ಮೂರನೇ ದಿನದ ಭೋಜನ ವಿರಾಮದ ವೇಳೆಗೆ ಪಂದ್ಯ ಭಾರತದ ನಿಯಂತ್ರಣದಲ್ಲಿರುವಂತೆ ಮಾಡಿದರು. ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ.  



Read more…