Karnataka news paper

ಹೇಗಿದ್ಳು ಹೇಗಾದ್ಳು ಗೊತ್ತಾ?: 1 ಕೋಟಿ ರೂ. ಬಹುಮಾನದ ಜಾಗತಿಕ ಮಟ್ಟದ ಫಿಟ್ನೆಸ್ ಚಾಲೆಂಜ್ ಗೆದ್ದ ಜೈಪುರದ ಮಹಿಳೆ


Online Desk

ನವದೆಹಲಿ: ಆನ್ ಲೈನ್ ಹೆಲ್ತ್ ಫಿಟ್ನೆಸ್ ಬ್ರ್ಯಾಂಡ್ ಆದ Fittr ಆಯೋಜಿಸಿದ್ದ ಜಾಗತಿಕ ಮಟ್ಟದ ಫಿಟ್ನೆಸ್ ಸ್ಪರ್ಧೆ ‘ಟ್ರಾನ್ಸ್ ಫಾರ್ಮೇಷನ್ ಚಾಲೆಂಜ್’ ಯಲ್ಲಿ ಜೈಪುರದ ಮಹಿಳೆ ಧ್ಯಾನ್ ಸುಮನ್ ಅವರು ಗ್ರ್ಯಾಂಡ್ ಪ್ರೈಜ್ ಗೆದ್ದಿದ್ದಾರೆ.. ಆ ಮೂಲಕ ಅವರು ಸ್ಪರ್ಧೆಯ ಬಹುಮಾನವಾದ 1 ಕೋಟಿ ರೂ. ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರತಿಷ್ಟಿತ ಶಿಕಾಗೊ ವಿವಿಯಿಂದ 3 ಕೋಟಿ ರೂ. ವಿದ್ಯಾರ್ಥಿವೇತನ: ಭಾರತೀಯ ರೈತನ ಮಗಳ ಮಹತ್ಸಾಧನೆ

ಬಾಲಿವುಡ್ ನಟ ಸುನಿಲ್ ಶೆಟ್ಟಿ ವಿಜೇತೆಯನ್ನು ಅಭಿನಂದಿಸಿದ್ದಾರೆ. ವಿಶ್ವಾದ್ಯಂತ ಒಟ್ಟು 1 ಲಕ್ಷಕ್ಕೂ ಹೆಚ್ಚು ಮಂದಿ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಡಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ.

ಇದನ್ನೂ ಓದಿ: BWF ವಿಶ್ವ ಚಾಂಪಿಯನ್‌ಶಿಪ್ ಫೈನಲ್: ಭಾರತದ ಕಿಡಂಬಿ ಶ್ರೀಕಾಂತ್ ಗೆ ಸೋಲು, ಬೆಳ್ಳಿಗೆ ತೃಪ್ತಿ!

ಟ್ರಾನ್ಸ್ ಫಾರ್ಮೇಷನ್ ಚಾಲೆಂಜ್ ಎನ್ನುವ ಜಾಗತಿಕ ಮಟ್ಟದ ಫಿಟ್ನೆಸ್ ಸ್ಪರ್ಧೆಯನ್ನು ಸಂಸ್ಥೆ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಈ ಬಾರಿಯದ್ದು 14ನೇ ಆವೃತ್ತಿಯಾಗಿದೆ.

ಇದನ್ನೂ ಓದಿ: ಐತಿಹಾಸಿಕ ಗಣಿತ ಸಮಸ್ಯೆಯನ್ನು ಬಿಡಿಸಿದ ಭಾರತ ಮೂಲದ ಮೇಧಾವಿಗೆ ಉನ್ನತ ಪ್ರಶಸ್ತಿ: ನಿಖಿಲ್ ಶ್ರೀವಾಸ್ತವ ಸಾಧನೆ

ಪ್ರಶಸ್ತಿ ಗೆದ್ದಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿರುವ 38ರ ಹರೆಯದ ಧ್ಯಾನ್ ಸುಮನ್ ಅವರು ಜನರಲ್ಲಿ ದೈಹಿಕ ಮತ್ತು ಮಾನಸಿಕ ಫಿಟ್ನೆಸ್ ಬಗ್ಗೆ ಕಾಳಜಿ ಮೂಡಿಸುತ್ತಿರುವ Fittr ಸಂಸ್ಥೆಯನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಆಸ್ಕರ್ಸ್ ಪ್ರಶಸ್ತಿ ಸುತ್ತಿನಿಂದ ತಮಿಳು ಸಿನಿಮಾ ‘ಕೂಳಂಗಳ್’ ಹೊರಕ್ಕೆ: ರೈಟಿಂಗ್ ವಿತ್ ಫೈರ್ ಮೇಲೆ ಭಾರತದ ಭರವಸೆ



Read more