Karnataka news paper

ದೆಹಲಿಯಲ್ಲಿ 1983 ವಿಶ್ವಕಪ್ ಆಧಾರಿತ ರಣ್ ವೀರ್ ಸಿಂಗ್ ಅಭಿನಯದ ’83’ ಸಿನಿಮಾ ತೆರಿಗೆ ಮುಕ್ತ


Online Desk

ಮುಂಬೈ: ನಿರ್ದೇಶಕ ಕಬೀರ್ ಖಾನ್, ನಟ ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ’83’ ಅನ್ನು ದೆಹಲಿಯಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳಲ್ಲಿ ಪತಿ ಹೆಸರು ತೆಗೆದು ಹಾಕಿದ್ದ ಪ್ರಿಯಾಂಕಾ ಚೋಪ್ರಾ: ಸಣ್ಣ ವಿಚಾರ ದೊಡ್ಡದಾಗಿದ್ದೇಕೆ ಎಂದು ಸ್ಪಷ್ಟನೆ!

ರಿಲಯನ್ಸ್ ಎಂಟರ್ಟೇನ್ಮೆಂಟ್ ಗ್ರೂಪ್ ಸಿಇಒ ಶಿಬಾಶಿಶ್ ಸರ್ಕಾರ್ ಟ್ವಿಟರ್‍ನಲ್ಲಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿರ್ಧಾರಕ್ಕೆ ಧನ್ಯವಾದ ತಿಳಿಸಿದ್ದಾರೆ. 

ಇದನ್ನೂ ಓದಿ: ಕತ್ರಿನಾ ಕೈಫ್ ಗೆ 3 ಕೋಟಿ ಬೆಲೆಬಾಳುವ ಕಾರು ಗಿಫ್ಟ್ ಕೊಟ್ಟ ಮಾಜಿ ಬಾಯ್ ಫ್ರೆಂಡ್ ಸಲ್ಮಾನ್ ಖಾನ್!

1983 ರಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತವು ಕಪಿಲ್ ದೇವ್ ನೇತೃತ್ವದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಅದೇ ಘಟನೆಯನ್ನಾಧರಿಸಿ ’83’ ಸಿನಿಮಾ ತಯಾರಿಸಲಾಗಿದೆ. 

ಇದನ್ನೂ ಓದಿ: ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ತಮ್ಮ ಇಬ್ಬರು ಪುತ್ರಿಯರಿಗೆ ನೀಡಿದ ಅಮೂಲ್ಯ ಸಲಹೆ

ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ’83’ ಸಿನಿಮಾ, ಡಿಸೆಂಬರ್ 24 ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಸಚಿನ್ ಪುತ್ರಿ ಸಾರಾ ತೆಂಡೊಲ್ಕರ್ ಮಾಡೆಲಿಂಗ್ ಲೋಕಕ್ಕೆ ಪ್ರವೇಶ; ವಿಡಿಯೋ



Read more…