Karnataka news paper

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ‘ಪುಷ್ಪ’: ಆರೇ ದಿನದಲ್ಲಿ 200 ಕೋಟಿ ರೂ. ಗಳಿಕೆ!


Online Desk

ಹೈದರಾಬಾದ್: ಟಾಲಿವುಡ್ ಸೂಪರ್‍ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಇತ್ತೀಚಿನ ಚಿತ್ರ ‘ಪುಷ್ಪ’ ದಿ ರೈಸ್ ಕಳೆದ ಆರೇ ದಿನಗಳಲ್ಲಿ ಬಾಕ್ಸ್ ಆಫೀಸನ್ನು ಧೂಳೆಬ್ಬಿಸಿ ಮುನ್ನುಗುತ್ತಿದೆ.

ಪುಷ್ಪ ಚಿತ್ರ ಕೇವಲ ಆರು ದಿನಗಳಲ್ಲೇ 200 ಕೋಟಿ ರೂ. ಗಳಿಸುವ ಮೂಲಕ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಹಣ ಸಂಪಾದಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ವಾರ ಬಿಡುಗಡೆಯಾದಾಗಿನಿಂದ ಈ ಚಿತ್ರವು ಸದ್ದು ಮಾಡುತ್ತಲೇ ಇದೆ.

ದೇಶಾದ್ಯಂತ ಟ್ರೆಂಡ್‍ನಾದ್ಯಂತ ಬಾಕ್ಸ್ ಆಫೀಸ್‍ನಲ್ಲಿ ಬುಲಿಶ್ ಅನ್ನು ಕಾಯ್ದುಕೊಂಡಿದೆ. ಥಿಯೇಟರ್‍ ಗಳಲ್ಲಿ ಈ ವಾರ ಬಿಡುಗಡೆಯಾಗುತ್ತಿರುವ ಹಲವಾರು ಚಿತ್ರಗಳ ಕಾರಣದಿಂದಾಗಿ ಚಿತ್ರದ ಗಳಿಕೆಯು ನಿಧಾನವಾಗಬಹುದು.

ಇದನ್ನು ಓದಿ: ಪುಷ್ಪ ಚಿತ್ರದಲ್ಲಿನ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಸಿಬಿಸಿ ದೃಶ್ಯಗಳಿಗೆ ಚಿತ್ರತಂಡ ಕತ್ತರಿ

ಆದಾಗ್ಯೂ, ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ 173 ಕೋಟಿ ರೂ.ಗಳನ್ನು ಗಳಿಸುವ ಮೂಲಕ ಪುಷ್ಪ ಈಗಾಗಲೇ ಕೊರೋನಾ ಸಮಯದಲ್ಲೂ ಹೊಸ ದಾಖಲೆಯನ್ನು ನಿರ್ಮಿಸಿದೆ. ಆಂಧ್ರ ಪ್ರದೇಶದಲ್ಲಿ ಕಟ್ಟುನಿಟ್ಟಾದ ಟಿಕೆಟ್ ದರದ ನಿಯಮಗಳು ಇಲ್ಲದಿದ್ದರೆ ಚಿತ್ರದ ಗಳಿಕೆಯು ಇನ್ನಷ್ಟು ಹೆಚ್ಚುವ ಸಾಧ್ಯತೆ ಇತ್ತು. ಆಂಧ್ರಪ್ರದೇಶದ ಕೆಲವು ಥಿಯೇಟರ್‍ ಗಳಲ್ಲಿ ಟಿಕೆಟ್‍ಗಳು 10 ರೂಪಾಯಿಗಿಂತ ಕಡಿಮೆ ಮೌಲ್ಯದಲ್ಲಿ ಮಾರಾಟವಾಗುತ್ತಿವೆ. ಇದು ಇನ್ನಷ್ಟು ಗಳಿಕೆಗೆ ಹೊಡೆತ ತಂದಿದೆ ಎಂದು ಉದ್ಯಮದ ತಜ್ಞರು ವಿವರಿಸುತ್ತಾರೆ.

ಚಿತ್ರದ ನಿರ್ಮಾಪಕರು, ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಅವರು ದಕ್ಷಿಣದ ರಾಜ್ಯಗಳಾದ್ಯಂತ ಪ್ರವಾಸ ಕೈಗೊಳ್ಳುವ ಮೂಲಕ ಚಿತ್ರದ ಯಶಸ್ಸಿಗೆ ಸಹಕರಿಸಬೇಕೆಂದು ಅಭಿಮಾನಿಗಳಲ್ಲಿ ವಿನಂತಿಸುತ್ತಿದ್ದಾರೆ.

ಆದರೆ ಈ ವಾರ ನಾನಿ ಅಭಿನಯದ ಶ್ಯಾಮ್ ಸಿಂಘ ರಾಯ್, ರಣಬೀರ್ ಸಿಂಗ್ ಅಭಿನಯದ 83 ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಗಳಿಕೆ ಕಡಿಮೆಯಾಗುವ ಸಾಧ್ಯತೆ ಇದೆ.



Read more…