Karnataka news paper

ಬೆಂಗಳೂರು: ನಗರದ ಸ್ಪಷ್ಟ ಕೊರೊನಾ ಚಿತ್ರಣ ನೀಡಲಿರುವ ಬಿಬಿಎಂಪಿ ಹೊಸ ಆಪ್


The New Indian Express

ಬೆಂಗಳೂರು: ಕೊರೊನಾ ಪರಿಸ್ಥಿತಿ ಮೇಲೆ ತೀವ್ರ ನಿಗಾ ಇರಿಸಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊಸ ಆಪ್ ವೊಂದನ್ನು ರೂಪಿಸಿದ್ದು, ಸರ್ಕಾರದ ಒಪ್ಪಿಗೆಗೆ ಕಾಯುತ್ತಿದೆ. 

ಇದನ್ನೂ ಓದಿ: ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆಯೊಂದಿಗೆ ‘ಎಜುಕೇಷನ್ ಹಬ್’ ಆಗಿ ಶಿವಮೊಗ್ಗ ಅಭಿವೃದ್ಧಿ!

ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಈ ಆಪ್ ಸಿದ್ಧವಾಗಿದೆ. ಎರಡನೇ ಕೊರೊನಾ ಅಲೆ ಸಂದರ್ಭದಲ್ಲಿ ಈ ಆಪ್ ರೂಪುರೇಷೆ ಸಿದ್ಧಗೊಂಡಿತ್ತು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಮೈಸೂರಿನಲ್ಲಿ ಮೊಟ್ಟ ಮೊದಲ ಓಮಿಕ್ರಾನ್ ಪ್ರಕರಣ:  9 ವರ್ಷದ ಬಾಲಕಿಗೆ ಸೋಂಕು

ಈ ನೂತನ ಆಪ್ ಕೊರೊನಾ ಪರೀಕ್ಷೆಯಾದ ಸ್ವಾಬ್ ಟೆಸ್ಟ್ ನಿಂದ ಮೊದಲಾಗಿ ಸ್ಯಾಂಪಲ್ ಅನ್ನು ಲ್ಯಾಬ್ ಗೆ ಕಳಿಸಿ ವರದಿ ಹೊರಬರುವರೆಗಿನ ಸಂಪೂರ್ಣ ಮಾಹಿತಿಯನ್ನು ಬಳಕೆದಾರರಿಗೆ ನೀಡಲಿದೆ. ಅಲ್ಲದೆ ಬಳಕೆದಾರರ ಸಂಪರ್ಕಕ್ಕೆ ಬಂದವರ ಕೊರೊನಾ ಪರೀಕ್ಷಾ ಮಾಹಿತಿ, ಒಮಿಕ್ರಾನ್ ಕುರಿತ ಮಾಹಿತಿ ಮತ್ತಿತರ ದತ್ತಾಂಶವನ್ನೂ ಆಪ್ ಸಂಗ್ರಹಿಸಿ ಒದಗಿಸಲಿದೆ.

ಇದನ್ನೂ ಓದಿ:  ಟ್ರಿಪ್ ಟಿಕೆಟ್ ಗಳನ್ನು ನೀಡಲಿದೆ ಬೆಂಗಳೂರು ಮೆಟ್ರೋ; ಇದರ ವಿಶೇಷತೆಗಳೇನು ಗೊತ್ತೇ?

ಶುರುವಿನಲ್ಲಿ ಬೆಂಗಳೂರಿನ ಕೆಲವೇ ಪ್ರದೇಶಗಳಲ್ಲಿ ಈ ಅಪ್ ಅನ್ನು ಪರೀಕ್ಷಾರ್ಥ ಬಿಡುಗಡೆಗೊಳಿಸಿ ನಂತರ ನಗರದ ಇತರೆಡೆ ಜಾರಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನಂದಿ ಹಿಲ್ಸ್ ನಲ್ಲಿ ಧೂಳೆಬ್ಬಿಸಲಿರುವ ಕಾರ್- ಬೈಕ್ ರೇಸ್: ಅರಣ್ಯಾಧಿಕಾರಿಗಳು, ಪರಿಸರವಾದಿಗಳಿಂದ ವಿರೋಧ



Read more