Karnataka news paper

ತಮಗಿಂತ 15 ವರ್ಷ ಚಿಕ್ಕವನ ಜೊತೆಗಿನ ಪ್ರೀತಿಗೆ ವಿದಾಯ ಹೇಳಿದ ನಟಿ ಸುಷ್ಮಿತಾ ಸೇನ್!


ಹೈಲೈಟ್ಸ್‌:

  • 46ರ ಪ್ರಾಯದಲ್ಲೂ ಫಿಟ್‌ನೆಸ್ ಕಾಪಾಡಿಕೊಂಡಿರುವ ಸುಷ್ಮಿತಾ
  • ರೋಹ್ಮನ್‌ ಜೊತೆಗೆ ಡೇಟಿಂಗ್ ಮಾಡುತ್ತಿದ್ದ ಮಾಜಿ ಭುವನ ಸುಂದರಿ
  • ರೋಹ್ಮನ್‌ ಜೊತೆಗಿನ ಪ್ರೀತಿಗೆ ವಿದಾಯ ಹೇಳಿದ ಸುಷ್ಮಿತಾ

ಮಾಜಿ ಭುವನ ಸುಂದರಿ, ಬಾಲಿವುಡ್ ನಟಿ ಸುಷ್ಮಿತಾ ಸೇನ್ ಅವರು ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ವಯಸ್ಸು 46 ದಾಟಿದರೂ ಅವರಿನ್ನೂ ಮದುವೆ ಆಗಿಲ್ಲ. ವಯಸ್ಸಿನಲ್ಲಿ 15 ವರ್ಷ ಚಿಕ್ಕವನಾಗಿರುವ ರೋಹ್ಮನ್ ಶಾಲ್ ಜೊತೆಗೆ ಅವರು ಈಚೆಗೆ ಕಾಣಿಸಿಕೊಂಡಿದ್ದರು. ಹಲವು ಸಮಯದಿಂದ ರೋಹ್ಮನ್ ಜೊತೆಗೆ ಸುಷ್ಮಿತಾ ಡೇಟಿಂಗ್ ನಡೆಸುತ್ತಿದ್ದರು. ಆದರೆ, ಇದೀಗ ಆ ಪ್ರೀತಿಗೂ ಕಂಟಕ ಬಂದಿದೆ. ರೋಹ್ಮನ್‌ ಜೊತೆಗಿನ ಪ್ರೇಮ ಸಂಬಂಧಕ್ಕೆ ಇತಿಶ್ರೀ ಹಾಡಿರುವುದಾಗಿ ಸುಷ್ಮಿತಾ ಹೇಳಿದ್ದಾರೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಹಾಕಿಕೊಂಡಿದ್ದಾರೆ. ‘ನಾವಿಬ್ಬರು ಸ್ನೇಹಿತರಾಗಿ ಪರಿಚಯ ಆದೆವು. ಈಗ ಪುನಃ ಸ್ನೇಹಿತರಾಗಿದ್ದೇವೆ. ಈ ಸಂಬಂಧವು ದೀರ್ಘವಾಗಿತ್ತು. ನಮ್ಮ ನಡುವಿನ ಪ್ರೀತಿ ಮಾತ್ರ ಹಾಗೇ ಉಳಿದಿದೆ’ ಎಂದು ಹೇಳಿದ್ದಾರೆ ಸುಷ್ಮಿತಾ. ಆ ಮೂಲಕ ತಮ್ಮಿಬ್ಬರ ಮಧ್ಯೆ ಇದ್ದ ಸಂಬಂಧಕ್ಕೆ ಕೊನೇ ಹಾಡಲಾಗಿದೆ ಎಂಬುದನ್ನು ತಿಳಿಸಿದ್ದಾರೆ ಸುಷ್ಮಿತಾ.

ಸೋಶಿಯಲ್ ಮೀಡಿಯಾದ ಮೂಲಕ ರೋಹ್ಮನ್‌ ಮತ್ತು ಸುಷ್ಮಿತಾ ಪರಿಚಯ ಆಗಿದ್ದರು. ಮೊದಲು ಸ್ನೇಹಿತರಾಗಿದ್ದ ಅವರಿಬ್ಬರು, ನಂತರ ಡೇಟಿಂಗ್ ಮಾಡುತ್ತಿದ್ದರು. ಕಳೆದ ವರ್ಷ ಈ ಜೋಡಿ ಒಂದು ಬಾರಿ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದಿತ್ತು. ಆಗ ನೆಟ್ಟಿಗರೊಬ್ಬರು, ‘ನೀವಿಬ್ಬರು ಯಾವಾಗ ಮದುವೆ ಆಗುತ್ತೀರಿ’ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಒಬ್ಬರ ಮುಖ ಒಬ್ಬರು ನೋಡಿಕೊಂಡು, ‘ಪಕ್ಕದ ಮನೆಯವರನ್ನು ಕೇಳಿ ಹೇಳ್ತೀನಿ’ ಎಂದು ಸುಷ್ಮಿತಾ ತಮಾಷೆ ಮಾಡಿದ್ದರು. ಮದುವೆ ಬಗ್ಗೆ ಮೊದಲಿನಿಂದಲೂ ಈ ಜೋಡಿ ಸೀರಿಯಸ್ ಆಗಿರಲಿಲ್ಲ ಎಂಬುದು ಇದರಿಂದ ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅಂದಹಾಗೆ, ಈ ಜೋಡಿ ಒಟ್ಟೊಟ್ಟಿಗೆ ವಿದೇಶ ಪ್ರವಾಸ ಮಾಡಿದೆ. ಇಬ್ಬರು ಒಟ್ಟಿಗೆ ಜಿಮ್ ವರ್ಕೌಟ್ ಮಾಡುತ್ತ, ಅದರ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು.

ಮತ್ತೆ ನಟನೆಗೆ ಮರಳಿದ ಸುಶ್ಮಿತಾ ಸೇನ್ ಹೇಳಿದ್ದೇನು?

ಇನ್ನು, 46 ದಾಟಿದರೂ ಮದುವೆಯಾಗದ ಸುಷ್ಮಿತಾ ಸೇನ್‌, ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದಾರೆ. ದತ್ತು ಮಕ್ಕಳ ಹಾರೈಕೆಯ ಜೊತೆಗೆ ರೋಹ್ಮನ್‌ ಅವರೊಂದಿಗೆ ಇದ್ದ ಸುಷ್ಮಿತಾ, ಈಗ ಪುನಃ ಒಂಟಿಯಾಗಿದ್ದಾರೆ. ಇನ್ನು, ಲಾಕ್‌ಡೌನ್ ಸಮಯದಲ್ಲಿ ಸುಷ್ಮಿತಾ ಸೇನ್ ಫಿಟ್‌ನೆಸ್ ಕಡೆಗೆ ಜಾಸ್ತಿ ಒತ್ತು ನೀಡಿದ್ದರು. ರೋಹ್ಮನ್ ಜೊತೆ ಯೋಗ ಹಾಗೂ ವರ್ಕೌಟ್ ಮಾಡುತ್ತಿದ್ದರು. ನಂತರ ಆ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕೆಲ ನೆಟ್ಟಿಗರು ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು, ‘ನಿಮ್ಮ ರೊಮ್ಯಾನ್ಸ್‌ ಅನ್ನು ನೀವು ಮನೆಯಲ್ಲಿ ಇಟ್ಟುಕೊಳ್ಳಿ, ಈ ರೀತಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಬೇಡಿ’ ಎಂದು ಗರಂ ಆಗಿದ್ದರು.

ಪ್ರಿಯಕರನ ಜೊತೆ ವರ್ಕೌಟ್ ಮಾಡುತ್ತ ರೊಮ್ಯಾನ್ಸ್ ಪಾಠ ಮಾಡಿದ ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್!



Read more