
ಲಂಡನ್: ಇಂಗ್ಲೆಂಡ್ ಸರ್ಕಾರ ನೀಡುವ ಸಾಲವನ್ನು ಪಡೆಯಲು ಸುಳ್ಳು ಮಾಹಿತಿ ನೀಡಿದಕ್ಕಾಗಿ ಭಾರತೀಯ ಮೂಲದ ಮಾಜಿ ರಾಜಕಾರಣಿ ಮತ್ತು ಅವರ ಪತ್ನಿಯನ್ನು ದೋಷಿ ಎಂದು ಘೋಷಿಸಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಜನವರಿ 14ರಂದು ಪ್ರಕಟಿಸಲಾಗುತ್ತದೆ.
ಹರ್ಮನ್ ಬಂಗೇರ್(40) ಮತ್ತು ಅವರ ಪತ್ನಿ ನೀನಾ ಕುಮಾರಿ(38) ಅವರು ದೋಷಿಗಳು. ದಂಪತಿ ಪಿಜ್ಜಾ ಪ್ಲಸ್‌ನ ಮಾಲೀಕತ್ವವನ್ನು ಹಂಚಿಕೊಂಡು, ವ್ಯಾಪಾರಕ್ಕಾಗಿ ಬ್ಯಾಂಕಿನಿಂದ ಹತ್ತು ಕೋಟಿ ರೂಪಾಯಿ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದರು. ಇದು 2019ರ ಅಕ್ಟೋಬರ್‌ನಿಂದಲೇ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೊಂಡಿದ್ದರು.
ಆದರೆ, ದಾಖಲೆಗಳ ಪರಿಶೀಲನೆ ನಡೆಸಿದಾಗ ಅವರು ನೀಡಿರುವ ವಿಳಾಸದ ಕಂಪನಿಗೆ 2020ರ ಮೇ 16ರವರೆಗೆ ವಿದ್ಯುತ್ ಸರಬರಾಜು ಆಗಿರುವುದಕ್ಕೆ ಯಾವುದೇ ಆಧಾರ ಇರಲಿಲ್ಲ. ವ್ಯವಹಾರ ನಡೆಯದೆ ಇದ್ದರೂ, ತಪ್ಪು ಮಾಹಿತಿ ನೀಡಿ ವಂಚಿಸಲು ಮುಂದಾಗಿದಕ್ಕೆ ನ್ಯಾಯಾಲಯ ತಪ್ಪಿತಸ್ಥರು ಎಂದು ಘೋಷಿಸಿದೆ.