Karnataka news paper

Prithvi Shaw – ಐಪಿಎಲ್ ನಲ್ಲಿ ಅನ್ ಸೋಲ್ಡ್ ಆಗಿದ್ದ ಸ್ಫೋಟಕ ಬ್ಯಾಟರ್ ಮುಂಬೈ ಟಿ20 ಲೀಗ್ ನಲ್ಲಿ ಶೈನಿಂಗ್!


T20 Mumbai League 2025 – ಐಪಿಎಲ್ 2025ರ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದ ಪೃಥ್ವಿ ಶಾ ಇದೀಗ ಭರ್ಜರಿ ಅರ್ಧ ಶತಕದೊಂದಿಗೆ ಮಿಂಚಿದ್ದಾರೆ. ಮುಂಬೈ ರಣಜಿ ತಂಡದಿಂದ ಹೊರಗಿಡಲ್ಪಟ್ಟ ಬಳಿಕ ಅವರು ಐಪಿಎಲ್ ಹರಾಜಿನಲ್ಲೂ ಮಾರಾಟವಾಗಿರಲಿಲ್ಲ. ಈ ಕಾರಣಕ್ಕೆ ಅವರು ಟಿ20 ಮುಂಬೈ ಲೀಗ್‌ನಲ್ಲಿ ಆಡುತ್ತಿದ್ದಾರೆ. ನಾರ್ತ್ ಮುಂಬೈ ಪ್ಯಾಂಥರಸ್ ಪರ ಆಡುತ್ತಿರುವ ಅವರು ಸೂರ್ಯಕುಮಾರ್ ಯಾದವ್ ನೇತೃತ್ವದ ಟ್ರಯಂಫ್ಸ್ ನೈಟ್ಸ್ ವಿರುದ್ಧ 34 ಎಸೆತಗಳಲ್ಲಿ 74 ರನ್ ಗಳಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಹೈಲೈಟ್ಸ್‌:

  • ಪೃಥ್ವಿ ಶಾ ಅವರು ಟಿ20 ಮುಂಬೈ ಲೀಗ್‌ನಲ್ಲಿ 34 ಎಸೆತಗಳಲ್ಲಿ 74 ರನ್ ಗಳಿಸಿ ಗಮನ ಸೆಳೆದಿದ್ದಾರೆ
  • ನಾರ್ತ್ ಮುಂಬೈ ಪ್ಯಾಂಥರ್ಸ್ ತಂಡವು 207 ರನ್‌ಗಳ ಮೊತ್ತವನ್ನು ದಾಖಲಿಸಿ 38 ರನ್‌ಗಳಿಂದ ಗೆಲ್ಲಿತು
  • ಪೃಥ್ವಿ ಶಾ 2024/25ರ ಋತುವಿನಲ್ಲಿ ಎರಡು ಬಾರಿ ಮುಂಬೈ ಕ್ರಿಕೆಟ್ ತಂಡದಿಂದ ಕೈಬಿಡಲ್ಪಟ್ಟಿದ್ದಾರೆ



Source link