Karnataka news paper

ಸತತ ಐದೂವರೆ ಗಂಟೆಗಳ ಹೋರಾಟ!: ಸೋಲಿನ ದವಡೆಯಿಂದ ತಪ್ಪಿಸಿಕೊಂಡ ಕಾರ್ಲೋಸ್ ಅಲ್ಕರಾಝ್ ಗೆ ಫ್ರೆಂಚ್ ಕಿರೀಟ!


French Open Tennis FInal Match 2025 -ಇದು ಜಗತ್ತಿನ ಇಬ್ಬರು ಅತ್ಯುತ್ತಮ ಟೆನಿಸ್ ಪಟುಗಳ ಜಟಾಪಟಿ! ಕಾರ್ಲೋಸ್ ಅಲ್ಕರಾಝ್ ಮತ್ತು ಜನ್ನಿಕ್ ಸಿನ್ನರ್ ನಡುವೆ ಭಾನುವಾರ ನಡೆದ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯವನ್ನು ಸುಮಾರು 5 ಗಂಟೆ 29 ನಿಮಿಷಗಳ ಕಾಲ ಪ್ರಪಂಚದ ಟೆನಿಸ್ ಪ್ರೇಮಿಗಳು ಅಚ್ಚರಿಯಿಂದ ವೀಕ್ಷಿಸಿದರು. ಎದೆಬಿಡದ ಹೋರಾಟದಲ್ಲಿ ಅಂತಿಮವಾಗಿ ಗೆಲುವಿನ ನಗೆ ಬೀರಿದ್ದು ಕಾರ್ಲೋಸ್ ಅಲ್ಕರಾಜ್! ಈ ಮೂಲಕ ಫ್ರೆಂಚ್ ಕಿರೀಟವನ್ನು ಸತತವಾಗಿ ಮುಡಿಗೇರಿಸಿಕೊಂಡ ಕೇವಲ 3ನೇ ಆಟಗಾರನೆಂಬ ಗೌರವಕ್ಕೂ ಪಾತ್ರರಾದರು.

ಹೈಲೈಟ್ಸ್‌:

  • ರೋಮಾಂಚಕ ಫೈನಲ್ ನಲ್ಲಿ ಜನ್ನಿಕ್ ಸಿನ್ನರ್ ಅವರನ್ನು ಸೋಲಿಸಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಕಾರ್ಲೋಸ್ ಅಲ್ಕರಾಝ್
  • ಫ್ರೆಂಟ್ ಓಪನ್ ಪ್ರಶಸ್ತಿ ಯನ್ನು ಸತತ 2ನೇ ಬಾರಿಗೆ ಗೆದ್ದ 3ನೇ ಟೆನಿಸಿಗ
  • ಇದು ಫ್ರೆಂಚ್ ಓಪನ್ ಟೂರ್ನಿಯ ಸುದೀರ್ಘ ಫೈನಲ್ ಎಂಬ ಖ್ಯಾತಿಗೆ ಪಾತ್ರ



Source link