Karnataka news paper

ಗುರುವಾರ ದಿನದ ಕನಿಷ್ಠ ಮಟ್ಟದಿಂದ ಚೇತರಿಕೆ ಕಂಡ ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಷೇರುಗಳಿವು!


ಹೊಸದಿಲ್ಲಿ: ಗುರುವಾರ ಬೆಳಗ್ಗೆಯೇ ನಿಫ್ಟಿ 111 ಏರಿಕೆಯೊಂದಿಗೆ ವಹಿವಾಟು ಆರಂಭಿಸಿತು. ಇದು ದಿನವಿಡೀ ಇದೇ ರೀತಿ ಮುಂದುವರಿಯಿತು. ಅಲ್ಲದೆ ಇಂದು 17,016 ರಿಂದ 17,117 ಅಂಕಗಳ ವ್ಯಾಪ್ತಿಯಲ್ಲೇ ವಹಿವಾಟು ನಡೆಸಿತು. ಅಂತಿಮವಾಗಿ ನಿಫ್ಟಿ 117 ಪಾಯಿಂಟ್ಸ್‌ ಅಥವಾ ಶೇ.0.69ರಷ್ಟು ಏರಿಕೆಯೊಂದಿಗೆ 17,072 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು. ಇಂತಹ ಉತ್ತಮ ಶ್ರೇಣಿಯ ವಹಿವಾಟಿನೊಂದಿಗೆ, ಇಂಡಿಯಾ VIX 4.5 ಕ್ಕಿಂತ ಹೆಚ್ಚು ಕುಸಿದಿದೆ.

ಒಟ್ಟಾರೆ ಇಂದಿನ ಷೇರುಪೇಟೆ ವಿಸ್ತೃತ ಗಳಿಕೆ ಕಂಡಿದೆ. ನಿಫ್ಟಿ ಮಿಡ್‌ಕ್ಯಾಪ್ ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್‌ ಸೂಚ್ಯಂಕಗಳು ಕ್ರಮವಾಗಿ ಶೇ.0.9 ಮತ್ತು ಶೇ.1.27ರಷ್ಟು ಏರಿಕೆಯಾದ ಕಾರಣ ಇದು ಮಾರುಕಟ್ಟೆಗೆ ಉತ್ತಮ ದಿನ ಎನಿಸಿತು.

ಪ್ರಮುಖವಾಗಿ ಪವರ್ ಗ್ರಿಡ್ ಕಾರ್ಪೊರೇಷನ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಷೇರುಗಳು ಗಳಿಕೆ ಕಾಣುವ ಮೂಲಕ ನಿಫ್ಟಿಯನ್ನು ಬೆಂಬಲಿಸಿದವು. ಡಿವಿಸ್ ಲ್ಯಾಬ್ಸ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ನಷ್ಟ ಅನುಭವಿಸಿ ಮಾರುಕಟ್ಟೆಯ ಕುಸಿತಕ್ಕೆ ಕಾರಣವಾದವು. ಆದರೂ, ಕೆಲವು ಷೇರುಗಳು ದಿನವಿಡೀ ದುರ್ಬಲವಾಗಿದ್ದರೂ, ಅವುಗಳ ಕನಿಷ್ಠ ಮಟ್ಟದಿಂದ ಚೇತರಿಸಿಕೊಳ್ಳುವ ಮೂಲಕ ಮಾರುಕಟ್ಟೆಯ ಬೆಂಬಲಕ್ಕೆ ನಿಂತವು. ಈ ಷೇರುಗಳು ಕನಿಷ್ಠ ಮಟ್ಟದಿಂದ ಚೇತರಿಕೆ ಕಂಡಿರುವುದು ಬಲಿಷ್ಠ ಖರೀದಿ ವಲಯಗಳನ್ನು ಸೂಚಿಸುತ್ತದೆ ಮತ್ತು ನಾಳೆ (ಶುಕ್ರವಾರ) ಟ್ರೆಂಡ್‌ ಆಗುವ ಎಲ್ಲ ಸಾಧ್ಯತೆಗಳಿವೆ.

ದಿನದ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡ ಷೇರುಗಳಿವು:
ಅದನಿಗ್ರೀನ್
ಗೆಶಿಪ್ (GESHIP)
HINDUNILVR
ಇಂಡಿಯಾಸೆಮ್‌ (INDIACEM)
ಲುಪಿನ್ (LUPIN)
ಟಾಟಾ ಎಮ್‌ಟಿಆರ್‌ಡಿವಿಆರ್ (TATAMTRDVR)

ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.

ಹಕ್ಕುತ್ಯಾಗ ( Disclaimer): ಮೇಲಿನ ವಿಷಯವನ್ನು ದಲಾಲ್‌ ಸ್ಟ್ರೀಟ್‌ ಇನ್ವೆಸ್ಟ್‌ಮೆಂಟ್‌ ಜರ್ನಲ್‌ (DSIJ)ಪರವಾಗಿ ಬರೆಯಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಿದ, ಅದಕ್ಕೆ ಸಂಬಂಧಿಸಿದ ಎಲ್ಲ ವಾರಂಟಿಗಳನ್ನು ಟಿಐಎಲ್‌ ನಿರಾಕರಿಸುತ್ತದೆ. ಒದಗಿಸಿರುವ ಯಾವುದೇ ಮಾಹಿತಿ ಮತ್ತು ವಿಷಯವು ಸರಿಯಾಗಿದೆ, ನವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.



Read more…