Karnataka news paper

‘ಆಫ್ರಿಕಾ ವೇಗಿಗಳನ್ನು ಎದುರಿಸುತ್ತೇವೆ’ ಹರಿಣಗಳಿಗೆ ಪೂಜಾರ ವಾರ್ನಿಂಗ್‌!


ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟೆಸ್ಟ್‌ ಸರಣಿ.
  • ಆಫ್ರಿಕಾ ವೇಗಿಗಳನ್ನು ಟ್ಯಾಕ್ಲಿಂಗ್‌ ಮಾಡುತ್ತೇವೆಂದ ಚೇತೇಶ್ವರ್‌ ಪೂಜಾರ.
  • ಡಿಸೆಂಬರ್‌ 26 ರಿಂದ ಆರಂಭವಾಗಲಿರುವ ಮೊದಲನೇ ಟೆಸ್ಟ್‌ ಪಂದ್ಯ.

ಸೆಂಚೂರಿಯನ್: ದಕ್ಷಿಣ ಆಫ್ರಿಕಾದಲ್ಲಿನ ವೇಗಿಗಳ ಸ್ನೇಹಿ ಪಿಚ್‌ಗಳಲ್ಲಿ ಟ್ಯಾಕ್ಲಿಂಗ್‌ ಮಾಡಬಲ್ಲ ಸಾಮರ್ಥ್ಯ ಹಾಗೂ ಅನುಭವ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡದ ಬ್ಯಾಟಿಂಗ್‌ ವಿಭಾಗಕ್ಕಿದೆ ಎಂದು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನೆಲಗಳಲ್ಲಿ ಯಶಸ್ವಿಯಾಗಿರುವ ಭಾರತ ಟೆಸ್ಟ್‌ ತಂಡ ಇದೀಗ ಹರಿಣಗಳ ನಾಡಿನಲ್ಲಿಯೂ ವಿಸ್ತರಿಸಲು ಎದರು ನೋಡುತ್ತಿದೆ. ಅಂದಹಾಗೆ ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯ ಡಿಸೆಂಬರ್‌ 26ರಂದು ಭಾನುವಾರ ಸೆಂಚೂರಿಯನ್‌ನಲ್ಲಿ ಆರಂಭವಾಗಲಿದೆ. ಆ ಮೂಲಕ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಅಧಿಕೃತವಾಗಿ ಶುರುವಾಗಲಿದೆ.

“ನೀವು ಪ್ರವಾಸಿ ತಂಡದ ಭಾಗವಾಗಿದ್ದರೆ ಇಲ್ಲಿನ ವೇಗಿಗಳ ಸ್ನೇಹಿ ವಿಕೆಟ್‌ನಲ್ಲಿ ಬೌನ್ಸ್‌ ಹಾಗೂ ಚಲನೆ ಇದ್ದೇ ಇರಲಿದೆ ಎಂದು ಅರಿವಿರುತ್ತದೆ. ಅಂದಹಾಗೆ, ಇಲ್ಲಿನ ಪಿಚ್‌ಗಳಲ್ಲಿ ಬ್ಯಾಟ್‌ ಮಾಡುವುದು ಅತ್ಯಂತ ಸವಾಲುದಾಯಕವಾಗಿದೆ,” ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಚೇತೇಶ್ವರ್‌ ಪೂಜಾರ ತಿಳಿಸಿದ್ದಾರೆ.

‘6 ತಿಂಗಳು ತಯಾರಿ ನಡೆಸಿದ್ದೆ’ ಸ್ಮಿತ್‌ಗೆ ಕೌಂಟರ್‌ ನೀಡಿದ್ದೇಗೆಂದು ತಿಳಿಸಿದ ಅಶ್ವಿನ್‌!

“ನಮ್ಮ ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ಅತ್ಯುತ್ತಮ ಸಂಯೋಜನೆ ಇದೆ ಹಾಗೂ ದಕ್ಷಿಣ ಆಫ್ರಿಕಾದಂತಹ ವೇಗಿಗಳ ಸ್ನೇಹಿ ವಿಕೆಟ್‌ಗಳಲ್ಲಿ ಎದುರಾಳಿ ಮಾರಕ ದಾಳಿಯನ್ನು ಟ್ಯಾಕ್ಲಿಂಗ್‌ ಮಾಡಬಲ್ಲ ಸಾಮರ್ಥ್ಯ ಹಾಗೂ ಅನುಭವ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳಿಗೆ ಇದೆ. ಈ ವಿಷಯದಲ್ಲಿ ನನಗೆ ತುಂಬಾ ವಿಶ್ವಾಸವಿದೆ,” ಎಂದರು.

“ಪ್ರಸ್ತುತ ಭಾರತ ತಂಡದಲ್ಲಿರುವ ಬಹುತೇಕ ಮಂದಿ ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಹಾಗಾಗಿ ನಮ್ಮದು ಅನುಭವಿಗಳ ತಂಡವಾಗಿದ್ದು, ಇಷ್ಟು ದಿನಗಳಿಂದ ತಯಾರಿ ನಡೆಸುತ್ತಿರುವ ನಮ್ಮಿಂದ ಟೀಮ್ ಮ್ಯಾನೇಜ್‌ಮೆಂಟ್‌ ಏನು ನಿರೀಕ್ಷಿಸುತ್ತಿದೆ ಎಂಬುದು ಗೊತ್ತಿದೆ,” ಎಂದು ಹೇಳಿದರು.

ICC Rankings: ಕುಸಿದ ಕೊಹ್ಲಿ, ರೂಟ್‌ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಲಾಬುಶೇನ್‌!

“ಬಹುತೇಕ ತಂಡಗಳು ಸಾಮಾನ್ಯವಾಗಿ ತವರು ಮಣ್ಣಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತವೆ. ಅದೇ ಹಾದಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಕೂಡ ತಮ್ಮ ತವರು ನೆಲದಲ್ಲಿ ನಿಸ್ಸಂಶಯವಾಗಿ ಉತ್ತಮ ಪ್ರದರ್ಶನ ತೋರಲಿದೆ. ಆತೀಥೇಯ ತಂಡದಲ್ಲಿ ಅತ್ಯುತ್ತಮ ವೇಗಿಗಳಿದ್ದು, ಅವರನ್ನು ಎದುರಿಸುವುದು ಸಾಮಾನ್ಯವಾಗಿ ಸವಾಲುದಾಯಕವಾಗಿರುತ್ತದೆ,” ಎಂದು 33ರ ಪ್ರಾಯದ ರಾಜ್‌ಕೋಟ್‌ ಮೂಲದ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ.

ಈ ವರ್ಷಾರಂಭದಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ 2-1 ಅಂತರದಲ್ಲಿ ಎರಡನೇ ಬಾರಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ನಂತರ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ಅವಧಿಯಲ್ಲಿ ಐದನೇ ಟೆಸ್ಟ್‌ ಮುಂದೂಡಿದ ಹೊರತಾಗಿಯೂ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ 2-1 ಮುನ್ನಡೆ ಪಡದುಕೊಂಡಿದೆ.

ಹೀಲಿಯಂ ಸೇವಿಸಿ ವಿಚಿತ್ರ ದನಿಯಲ್ಲಿ ಮಾತನಾಡಿದ ಕೊಹ್ಲಿ, ವಿಡಿಯೋ ವೈರಲ್!

“ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನೆಲದಲ್ಲಿನ ಉತ್ತಮ ಸಾಧನೆ ತಂಡದ ವಿಶ್ವಾಸದಲ್ಲಿ ವಿಭಿನ್ನತೆಯನ್ನುಂಟು ಮಾಡಿದೆ. ಯಾವುದೇ ವಿದೇಶಿ ನೆಲದಲ್ಲಿ ಗೆಲ್ಲುತ್ತೇವೆಂಬ ನಂಬಿಕೆ ಎಲ್ಲರಲ್ಲಿಯೂ ಉಂಟಾಗಿದೆ. ನಮ್ಮ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಲೈನ್‌ ಅಪ್‌ನಿಂದಾಗಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್‌ ಸರಣಿ ಗೆಲ್ಲುತ್ತೇವೆಂದು,” ಎಂದು ಚೇತೇಶ್ವರ್‌ ಪೂಜಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



Read more