Karnataka news paper

ರೋಹಿತ್ ಶರ್ಮಾ ತಂದೆಗೆ ಒಂಡೇಯಲ್ಲಿ 264 ರನ್ ಗಳಿಸಿದ್ದು ಅಷ್ಟಕ್ಕಷ್ಟೇ! ಟೆಸ್ಟ್ ನಲ್ಲಿ 30 ರನ್ ಗಳಿಸಿದರೂ ತಾಸುಗಟ್ಟಲೆ ಹರಟೆ!


ಪ್ರತಿಯೊಬ್ಬ ಮಹಾನ್ ಕ್ರಿಕೆಟಿಗನ ಯಶಸ್ಸಿನ ಹಿಂದೆ ಅವರ ಹೆತ್ತವರ ತ್ಯಾಗದ ಕತೆಗಳಿರುತ್ತವೆ. ಇಂದು ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾ ಕೋಟ್ಯಾಧಿಪತಿಯಾಗಿರಬಹುದು. ಆದರೆ ಅವರೂ ಒಂದು ಕಾಲದಲ್ಲಿ ಲೋವರ್ ಮಿಡಲ್ ಕ್ಲಾಸ್ ಹುಡುಗ. ಕ್ರಿಕೆಟ್ ಪ್ರೇಮಿಯಾಗಿದ್ದ ಅವರ ತಂದೆ ಗುರುನಾಥ ಶರ್ಮಾ ಅವರ ಕೊಡುಗೆಯನ್ನು ಮರೆಯುವಂತಿಲ್ಲ. ಅಪ್ಪಟ ಟೆಸ್ಟ್ ಕ್ರಿಕೆಟ್ ಪ್ರೇಮಿಯಾಗಿದ್ದ ಅವರು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಾಗ ಅವರಿಗೆ ಬಹಳ ನಿರಾಸೆಯಾಗಿತ್ತು. ಯಾಕೆ ಎಂಬುದನ್ನು ಇದೀಗ ರೋಹಿತ್ ಶರ್ಮಾ ವಿವರಿಸಿದ್ದಾರೆ.

ಹೈಲೈಟ್ಸ್‌:

  • ರೋಹಿತ್ ಶರ್ಮಾಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದಾಗ ನಿರಾಸೆಗೊಂಡಿದ್ದ ಅವರ ತಂದೆ ಗುರುನಾಥ ಶರ್ಮಾ
  • ಟೆಸ್ಟ್ ಕ್ರಿಕೆಟ್ ಅನ್ನು ಅತಿಯಾಗಿ ಇಷ್ಟಪಡುತ್ತಿದ್ದ ಅವರಿಗೆ ಅದರ ಬಗ್ಗೆ ಅದ್ಭುತ ವಿಶ್ಲೇಷಣೆ ಮಾಡುವ ಸಾಮರ್ಥ್ಯ ವಿತ್ತು
  • ರೋಹಿತ್ 264 ರನ್ ಗಳಿಸಿದಾಗ ಅಷ್ಟೇನೂ ಖುಷಿಪಡದ ಅವರು, ಟೆಸ್ಟ್ ನಲ್ಲಿ 30 ರನ್ ಗಳಿಸಿದರೂ ಖುಷಿಪಡುತ್ತಿದ್ದರು



Source link