2025ರ ಐಪಿಎಲ್ ಮುಗಿದ ಬಳಿಕ ಇದೀಗ ಭಾರತ ತಂಡ ಪರಿವರ್ತನೆಯ ಹಾದಿಯಲ್ಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿರುವುದರಿಂದ ಇದೀಗ ಭಾರತ ತಂಡದಲ್ಲಿ ಅನೇಕ ಬದಲಾವಣೆಗಳಾಗಲಿವೆ. ಇನ್ನು ಮುಂದೆ ಟೆಸ್ಟ್ , ಏಕದಿನ ಮತ್ತು ಟಿ20 ಮಾದರಿಗಳಲ್ಲಿ ಪ್ರತ್ಯೇಕ ನಾಯಕರು ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಶುಭ್ಮನ್ ಗಿಲ್ ಟೆಸ್ಟ್ ತಂಡದ ನಾಯಕರಾಗಲಿದ್ದಾರೆ. ಸೂರ್ಯಕುಮಾರ್ ಟಿ೨೦ ತಂಡವನ್ನು ಮುನ್ನಡೆಸಲಿದ್ದಾರೆ. ಈ ಎಲ್ಲಾ ಬದಲಾವಣೆಗಳೊಂದಿಗೆ ಭಾರತ ತಂಡ 2026ರ ಐಪಿಎಲ್ ಗೂ ಮೊದಲು ಅಂದರೆ 2026ರ ಟಿ20 ವಿಶ್ವಕಪ್ ಗಳ ವರೆಗೆ ಆಢುವ ಎಲ್ಲಾ ಟೂರ್ನಿಗಳ ವಿವರ ಇಲ್ಲಿದೆ.
ಹೈಲೈಟ್ಸ್:
- 2025-2027 ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೇರಿದಂತೆ 2026ರ ಟಿ20 ವಿಶ್ವಕಪ್ ವರೆಗಿನ ವೇಳಾಪಟ್ಟಿ ಬಿಡುಗಡೆ
- ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ 2026 ಶುರುವಾಗುವವರೆಗೂ ಭಾರತ ತಂಡ ಪೂರ್ತಿ ಬ್ಯುಸಿ
- ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಬಳಿಕ ಟೀಂ ಇಂಡಿಯಾಗೆ ಮೂವರು ಪ್ರತ್ಯೇಕ ನಾಯಕರು