Karnataka news paper

ಬೇಬಿ ಶವರ್‌ ಫೋಟೊ ಹಂಚಿಕೊಂಡ ನಟಿ ಅಮೂಲ್ಯ: ಅಭಿಮಾನಿಗಳಿಂದ ಶುಭ ಹಾರೈಕೆ


ಬೆಂಗಳೂರು: ನಟಿ ಅಮೂಲ್ಯ ಜಗದೀಶ್‌ ಅವರು ಬೇಬಿ ಶವರ್‌ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು, ನಟ-ನಟಿಯರು ಮತ್ತು ಕನ್ನಡ ಚಿತ್ರರಂಗದ ಮಂದಿ ಅಭಿನಂದನೆಗಳನ್ನು ಹೇಳಿದ್ದಾರೆ.

‘ನಾವೀಗ ಇಬ್ಬರೇ ಅಲ್ಲ’ ಎಂದು ಬೇಬಿ ಶವರ್‌ ಫೋಟೊಗೆ ಅಡಿಬರಹ ನೀಡಿರುವ ಅಮೂಲ್ಯ ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಪತಿ ಜಗದೀಶ್‌ ಜೊತೆಗೆ ಬೇಬಿ ಶವರ್‌ ಫೋಟೊ‌ ಶೂಟ್‌ ಮಾಡಿಸಿಕೊಂಡಿರುವ ಅಮೂಲ್ಯ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸೆಲೆಬ್ರಿಟಿಗಳಾದ ಕಾರುಣ್ಯಾ, ವೈಷ್ಣವಿ, ಪಾರುಲ್‌ ಯಾದವ್‌, ಆಶಿಕಾ ರಂಗನಾಥ್‌, ದೀಪಿಕಾ ದಾಸ್‌, ಹರ್ಷಿಕಾ ಪುಣಚ್ಚಾ, ಭುವನ್‌ ಪೊನ್ನಣ್ಣ, ಚೈತ್ರಾ ವಾಸುದೇವನ್‌ ಮುಂತಾದವರು ಅಮೂಲ್ಯ ಅವರಿಗೆ ಶುಭ ಹಾರೈಸಿದ್ದಾರೆ.

ಇತ್ತೀಚೆಗೆ ನಟಿ ಅಮೂಲ್ಯ ಅವರು ಮೃಗಾಲಯದಲ್ಲಿರುವ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯಲು ನಟ ದರ್ಶನ್‌ ಅವರು ಕರೆಗೆ ಕೈಜೋಡಿಸಿ, ಮೈಸೂರಿನ ಮೃಗಾಲಯದಲ್ಲಿನ ಜಾಗ್ವಾರ್‌ ಒಂದನ್ನು ದತ್ತು ಪಡೆದಿದ್ದಾರೆ. ಮುಂದಿನ ಒಂದು ವರ್ಷದವರೆಗೆ ಆ ಪ್ರಾಣಿಯ ನಿರ್ವಹಣಾ ವೆಚ್ಚವನ್ನು ನಟಿ ಅಮೂಲ್ಯ ಭರಿಸಿದ್ದಾರೆ.





Read More…Source link