ಹೈಲೈಟ್ಸ್:
- ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಶಮಂತ್ ಬ್ರೊ ಗೌಡ ಭಾಗವಹಿಸಿದ್ರು
- ಶಮಂತ್ ಬ್ರೊ ಗೌಡ ಜೊತೆಗಿರುವ ಹುಡುಗಿ ಯಾರು?
- ಶಮಂತ್ ಬ್ರೊ ಗೌಡ ಜೊತೆಗೆ ನಿಖಿಲ್ ಕುಮಾರಸ್ವಾಮಿಯೂ ಇದ್ದಾರೆ
ಶಮಂತ್ ಜೊತೆಗಿದ್ದ ಹುಡುಗಿ ಯಾರು ಎಂದು ಪ್ರಶ್ನೆ ಮೂಡುತ್ತಿದೆ. ಕೆಲವರು ಪ್ರಿಯಾಂಕಾ ತಿಮ್ಮೇಶ್ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೆ ನಟ ನಿಖಿಲ್ ಕುಮಾರಸ್ವಾಮಿ ಕೂಡ ಆ ಫೋಟೋದಲ್ಲಿ ಇರೋದು ಇನ್ನೊಂದು ವಿಶೇಷ. ‘ರೈಡರ್’ ಸಿನಿಮಾ ಪ್ರಚಾರದ ಪ್ರಯುಕ್ತ ನಿಖಿಲ್ ಕುಮಾರಸ್ವಾಮಿ ಅವರು ‘ದೊರೆಸಾನಿ’ ಧಾರಾವಾಹಿ ಸೆಟ್‌ಗೆ ಬಂದಿದ್ದರು ಎನ್ನಲಾಗಿದೆ.
ಸ್ಪಷ್ಟನೆ ನೀಡಿದ ಶಮಂತ್ ಬ್ರೊಗೌಡ ( shamanth bro gowda )
‘ನನಗೆ ಮದುವೆ ಆಗೋಯ್ತಾ? ಎಂಗೇಜ್‌ಮೆಂಟ್ ಆಗೋಯ್ತಾ ಅಂತ ಎಲ್ಲರೂ ಕೇಳ್ತಿದ್ದಾರೆ. ನಾನಿನ್ನೂ ಚಿಕ್ಕ ಹುಡುಗ. ನನಗೆ ಯಾವುದೇ ಎಂಗೇಜ್‌ಮೆಂಟ್, ಮದುವೆ ಆಗಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ದೊರೆಸಾನಿ ಎಂಬ ಧಾರಾವಾಹಿ ಬರುತ್ತಿದೆ. ಆ ಧಾರಾವಾಹಿಯ ಫೋಟೋಗಳಿವು. ಸಂಜೆ 6.30ಕ್ಕೆ ಈ ಸೀರಿಯಲ್ ಬರುತ್ತಿದೆ. ಎಲ್ಲರೂ ಮಿಸ್ ಮಾಡದೆ ಧಾರಾವಾಹಿ ನೋಡಿ, ನಿಮ್ಮ ಪ್ರೀತಿ ಸಹಕಾರ ಹೀಗೆ ಇರಲಿ’ ಎಂದು ಶಮಂತ್ ಗೌಡ ಅವರು ವಿಡಿಯೋ ಮೂಲಕ ಗಾಸಿಪ್‌ಗೆ ತೆರೆ ಎಳೆದಿದ್ದಾರೆ.
BBK8: ‘ಲಕ್ಕಿ ಸ್ಟಾರ್’ ಶಮಂತ್‌ಗೆ ಕೈಕೊಟ್ಟ ಅದೃಷ್ಟ; ‘ಬಿಗ್ ಬಾಸ್’ನಿಂದ ಬ್ರೊ ಗೌಡ ಔಟ್!
ಅದೃಷ್ಟದಿಂದ 113 ಮನೆಯಲ್ಲಿ ಶಮಂತ್ ಇದ್ರಾ?
ಬಿಗ್ ಬಾಸ್‌ನಲ್ಲಿ ಆಟಕ್ಕಿಂತ ಜಾಸ್ತಿ ಹಾಡುಗಳ ಮೂಲಕ ಖ್ಯಾತಿ ಪಡೆದವರು ಶಮಂತ್ ಬ್ರೊ ಗೌಡ. 113 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಶಮಂತ್ ಇದ್ದರು. ಶಮಂತ್‌ಗೆ ಬಿಗ್ ಬಾಸ್‌ನಲ್ಲಿ ಮೊದಲ ದಿನದಿಂದಲೂ ಅದೃಷ್ಟ ಕೈಹಿಡಿದಿತ್ತು. ಮೊದಲ ಹಾಗೂ ಎರಡನೇ ವಾರ ಅವರಿಗೆ ಕ್ಯಾಪ್ಟನ್ ಪಟ್ಟ ಸಿಕ್ಕಿದ್ದರಿಂದ, ನಾಮಿನೇಟ್ ಆಗಿರಲಿಲ್ಲ. ಆಟ ಚೆನ್ನಾಗಿ ಆಡುತ್ತಿಲ್ಲ, ಸ್ವಾರ್ಥಿ ಅಂತೆಲ್ಲ ಸಹಸ್ಪರ್ಧಿಗಳು ನಾಮಿನೇಟ್ ಮಾಡಿ ಅವರನ್ನು ಪದೇ ಪದೇ ನಾಮಿನೇಟ್ ಮಾಡುತ್ತಿದ್ದರು. 42ನೇ ದಿನ ಅವರು ಎಲಿಮಿನೇಟ್ ಆಗಿ ಇನ್ನೇನು ಮನೆಯಿಂದ ಹೊರಹೋಗುತ್ತಾರೆ ಎನ್ನುವಾಗ ಇನ್ನೋರ್ವ ಸ್ಪರ್ಧಿ ವೈಜಯಂತಿ ಅಡಿಗ ಅವರು ಮನೆಯಿಂದ ಸ್ವಇಚ್ಛೆಯಿಂದ ಹೊರಗೆ ಹೋದರು. ಹೀಗಾಗಿ ಶಮಂತ್ ಮತ್ತೆ ಮನೆಯಲ್ಲಿ ಉಳಿದುಕೊಳ್ಳುವಂತಾಯ್ತು.
ಒಂದೇ ದಿನದಲ್ಲಿ ಶಮಂತ್ ಬ್ರೊ ಗೌಡಗೆ ಲವ್? ಇದು ಪ್ರಚಾರಕ್ಕಾಗಿ ಹುನ್ನಾರವೋ?
‘ಬಾ ಗುರು’ ಖ್ಯಾತಿಯ ಶಮಂತ್
‘ಬಾ ಗುರು’ ಎಂದು ಶಮಂತ್ ಗೌಡ ಅವರು ಹಾಡು ಬರೆದಿದ್ದರು. ಈ ಹಾಡು ವೈರಲ್ ಆಗಿತ್ತು. ಬಿಗ್ ಬಾಸ್ ಮನೆಯಲ್ಲಿ ಶಮಂತ್ ಬರೆದ ಹಾಡುಗಳನ್ನು ಕಿಚ್ಚ ಸುದೀಪ್ ( kiccha sudeep ) ಅವರು ಕೂಡ ಮೆಚ್ಚಿದ್ದರು. ಸಿನಿಮಾದಲ್ಲಿ ನಟಿಸಿದ್ದರೂ ಕೂಡ ಅವರ ಪಾತ್ರಕ್ಕೆ ಕತ್ತರಿ ಹಾಕಲಾಗಿತ್ತು. ಹೀಗಾಗಿ ನಾನೇ ಅವಕಾಶ ಸೃಷ್ಟಿ ಮಾಡಿಕೊಳ್ತೀನಿ ಅಂತ ಶಮಂತ್ ವೆಬ್ ಸಿರೀಸ್ ಮಾಡಿದ್ದರು. ಅದರಲ್ಲಿ ಶಮಂತ್ ನಿಭಾಯಿಸಿದ್ದ ಬ್ರೊ ಗೌಡ ಪಾತ್ರವು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿತ್ತು. ‘ಗಜಾನನ & ಗ್ಯಾಂಗ್’ (gajanana and gang movie) ಚಿತ್ರದಲ್ಲಿ ಶಮಂತ್ ನಟಿಸಿದ್ದಾರೆ. ನಟ ಶ್ರೀಮಹದೇವ್, ಅದಿತಿ ಪ್ರಭುದೇವ ನಟನೆಯ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಅಷ್ಟೇ ಅಲ್ಲದೆ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾ, ಮ್ಯೂಸಿಕ್ ವಿಡಿಯೋ ಮಾಡುವ ಆಸೆ ಇದೆಯಂತೆ.
