ಒಳ್ಳೆಯ ಆಟಗಾರರನ್ನು ಬಿಡ್ ಮಾಡುವುದಿಲ್ಲ. ಟೀಮ್‌ನಲ್ಲಿ ಹೆಚ್ಚು ಕನ್ನಡಿಗರು ಇಲ್ಲ… ಹೀಗೆ ಕಳೆದ 17 ವರ್ಷಗಳಿಂದ ಪ್ರತಿ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅರ್ಥಾತ್ ಆರ್‌ಸಿಬಿ ಸೋಲು ಅನುಭವಿಸಿದಾಗಲೂ ಅಭಿಮಾನಿಗಳು ಅಸಮಾಧಾನ ಹೊರಹಾಕಿದರು. ಪ್ರತಿ ಬಾರಿ ತಂಡ ಸೋತಾಗಲೂ ದುಃಖ ವ್ಯಕ್ತಪಡಿಸಿದರು. ತಂಡದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಒಂದೇ ಒಂದು ಸೀಸನ್‌ನಲ್ಲೂ ಕನ್ನಡಿಗರು ಆರ್‌ಸಿಬಿ ತಂಡವನ್ನು ಬಿಟ್ಟುಕೊಡಲಿಲ್ಲ. ಬೇರೆ ತಂಡದತ್ತ ಮುಖ ಮಾಡಲಿಲ್ಲ. ಹೌದು, ಕನ್ನಡಿಗ ವಿಜಯ್ ಮಲ್ಯ ಕಟ್ಟಿದ ಆರ್‌ಸಿಬಿಯನ್ನು ಕನ್ನಡಿಗರು ಕಳೆದ 18 ವರ್ಷಗಳಿಂದ ಕೈಬಿಟ್ಟಿಲ್ಲ.
ಹೈಲೈಟ್ಸ್:
- ಆರ್‌ಸಿಬಿ ಸೋಲು ಅನುಭವಿಸಿದಾಗಲೂ ಬಿಟ್ಟು ಕೊಡದ ಫ್ಯಾನ್ಸ್
- ಸೋಲಿರಲಿ, ಗೆಲುವಿರಲಿ ಅಭಿಮಾನ ಮಾತ್ರ ಕಡಿಮೆ ಆಗಲ್
- ಜನರಲ್ಲಿದೆ ಆರ್‌ಸಿಬಿ ನಮ್ಮ ಕರ್ನಾಟಕದ ತಂಡ ಎಂಬ ಭಾವನೆ