ಕೊನೆಗೂ ಹದಿನೆಂಟು ವರ್ಷಗಳ ಕನಸು ಈಡೇರಿದೆ. ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆಯೂ ಫಲಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿನ ಮಳೆಗರೆಯಿತು. ವಿರಾಟ್ ಕೊಹ್ಲಿಅವರ 18 ವರ್ಷಗಳ ಪ್ರಶಸ್ತಿ ಬರವೂ ನೀಗಿತು. ಅಭಿಮಾನಿಗಳ ಆಸೆಯಂತೆ ‘ಈ ಸಲ ಕಪ್ ನಮ್ಮ’ದಾಯಿತು. ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಉದ್ವಿಗ್ನತೆಯಿಂದಾಗಿ ಐಪಿಎಲ್ 18ನೇ ಅವೃತ್ತಿಯನ್ನು ಒಂದು ವಾರಗಳ ಕಾಲ ಮುಂದೂಡಲಾಗಿತ್ತು. ಇದು ಆರ್‌ಸಿಬಿಗೆ ವರದಾನವಾಗಿ ಪರಿಣಮಿಸಿತು ಎಂದು ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಹೇಳಿದ್ದಾರೆ.
ಹೈಲೈಟ್ಸ್:
- ಆರ್‌ಸಿಬಿ ಕಪ್ ಕನಸು 18ರಲ್ಲಿ ನನಸು
- ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್ ರೋಚಕ ಗೆಲುವು
- ಸಾಂಘಿಕ ಹೋರಾಟಕ್ಕೆ ಒಲಿದ ಜಯ