Karnataka news paper

RCB: ನನ್ನ ಆತ್ಮ ಬೆಂಗಳೂರಿನಲ್ಲಿದೆ, ಈ ತಂಡಕ್ಕಾಗಿ ಯೌವನವನ್ನೇ ನೀಡಿದ್ದೇನೆ; ಭಾವುಕ ವಿರಾಟ್‌ ಕೊಹ್ಲಿ


“ನನ್ನ ಹೃದಯ ಬೆಂಗಳೂರಿನಲ್ಲಿದೆ, ನನ್ನ ಆತ್ಮ ಬೆಂಗಳೂರಿನಲ್ಲಿದೆ, ನಾನು ಆರ್‌ಸಿಬಿಗಾಗಿ, ಆರ್‌ಸಿಬಿ ನನಗಾಗಿ” ಇದು 18 ವರ್ಷಗಳ ಬಳಿಕ ಐಪಿಎಲ್‌ ಟ್ರೋಫಿಗೆ ಮುತ್ತಿಟ್ಟಿರುವ ಆರ್‌ಸಿಬಿ ಅಭಿಮಾನಿಗಳ ಪಾಲಿನ ಮನೆಮಗ ವಿರಾಟ್‌ ಕೊಹ್ಲಿ ಅವರ ಭಾವುಕ ನುಡಿಗಳು. ಹೌದು, ಐಪಿಎಲ್‌ 2025 ಫೈನಲ್‌ ಪಂದ್ಯದ ಬಳಿಕ ಭಾವುಕರಾಗಿ ಮಾತನಾಡಿರುವ ವಿರಾಟ್‌ ಕೊಹ್ಲಿ, “ಆರ್‌ಸಿಬಿ ತಂಡಕ್ಕಾಗಿ ನನ್ನ ಯೌವನವನ್ನೇ ಧಾರೆ ಎರೆದಿದ್ದೇನೆ” ಎಂದು ಹೇಳಿದ್ದಾರೆ. ವಿರಾಟ್‌ ಕೊಹ್ಲಿ ಅವರ ಚುಟುಕು ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಹೈಲೈಟ್ಸ್‌:

  • ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್‌ ಟ್ರೋಫಿ ಗೆದ್ದುಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ
  • ಫೈನಲ್‌ ಗೆಲುವಿನ ಬಳಿಕ ಆರ್‌ಸಿಬಿ ಅಭಿಮಾನಿಗಳಿಗೆ ಭಾವುಕ ಸಂದೇಶ ಕಳುಹಿಸಿದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ
  • ನನ್ನ ಆತ್ಮ ಮತ್ತು ಹೃದಯ ಬೆಂಗಳೂರಿನಲ್ಲಿದೆ ಎಂದ ಭಾವುಕರಾಗಿ ನುಡಿದ ವಿರಾಟ್‌ ಕೊಹ್ಲಿ, ಆರ್‌ಸಿಬಿ ಫ್ಯಾನ್ಸ್‌ ಫಿದಾ



Source link