ಒಂದಲ್ಲ, ಎರಡಲ್ಲ, ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ, ಚುಟುಕು ಕ್ರಿಕೆಟ್‌ನಲ್ಲಿ ಹೊಸ ಇತಿಹಾಸವನ್ನು ಬರೆದಿದೆ. ಅದೇ ರೀತಿ ಕಳೆದ 18 ವರ್ಷಗಳಿಂದ ತಂಡಕ್ಕೆ ಲಾಯಲ್ ಆಗಿರುವ ವಿರಾಟ್ ಕೊಹ್ಲಿ, ಕೊನೆಗೂ ಅಭಿಮಾನಿಗಳ ಕನಸನ್ನು ನನಸು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಫೈನಲ್ ಪಂದ್ಯದ ಬಳಿಕ, ವಿರಾಟ್ ಕೊಹ್ಲಿ ಅವರು ಓಡಿಬಂದು ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರನ್ನು ತಬ್ಬಿಕೊಂಡಿದ್ದು, ಅನುಷ್ಕಾ ಶರ್ಮಾ ಅವರು ಪತಿಯ ಕಣ್ಣೀರು ಒರೆಸಿದ ಕ್ಷಣಗಳು ವೈರಲ್ ಆಗಿವೆ.
ಹೈಲೈಟ್ಸ್:
- ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂರ್ಜಸ್ ಬೆಂಗಳೂರು ತಂಡ
- ಪಂದ್ಯದ ಬಳಿಕ ಓಡಿಬಂದು ಅನುಷ್ಕಾ ಶರ್ಮಾ ಅವರನ್ನು ಅಪ್ಪಿಕೊಂಡ ವಿರಾಟ್ ಕೊಹ್ಲಿ
- ವಿರಾಟ್ ಕೊಹ್ಲಿ ಅವರ ಕಣ್ಣೀರು ಒರೆಸಿದ ಅನುಷ್ಕಾ ಶರ್ಮಾ, ವಿರುಷ್ಕಾ ಬಾಂಧವ್ಯಕ್ಕೆ ತಲೆದೂಗಿದ ಅಭಿಮಾನಿಗಳು