ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಗುಜರಾತ್ ಟೈಟಾನ್ಸ್ ತಂಡದ ಸಾಯಿ ಸುದರ್ಶನ್ ಬಹುಮಾನ ವಿತರಣಾ ಸಮಾರಂಭದಲ್ಲಿ ಮಿಂಚಿದರು, ಪ್ರಸಿದ್ಧ್ ಕೃಷ್ಣ ಅವರ ಪರ್ಪಲ್ ಕ್ಯಾಪ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಅವರ ಪರವಾಗಿ ಸ್ವೀಕರಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಫೇರ್ಪ್ಲೇ ಪ್ರಶಸ್ತಿ ಪಡೆದರೆ, ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಅತ್ಯುತ್ತಮ ಮೈದಾನ ಪ್ರಶಸ್ತಿ ಪಡೆಯಿತು. ಇಲ್ಲಿದೆ ಈ ಸೀಸನ್ ನಲ್ಲಿ ವಿತರಿಸಲ್ಪಟ್ಟ ಬಹುಮಾನ ಮತ್ತು ಅವುಗಳ ನಗದು ಮೊತ್ತದ ಸಂಪೂರ್ಣ ವಿವರ.
ಹೈಲೈಟ್ಸ್:
- ಪಂಜಾಬ್ ಕಿಂಗ್ಸ್ ಸೋಲಿಸಿದ ಆರ್ ಸಿಬಿಗೆ ಐಪಿಎಲ್ ಟ್ರೋಫಿಯೊಂದಿಗೆ 20 ಕೋಟಿ ರೂಪಾಯಿ ನಗದು ಬಹುಮಾನ
- ಗುಜರಾತ್ ಟೈಟಾನ್ಸ್ ತಂಡದ ವೇಗದ ಬೌಲರ್ ಆಗಿರುವ ಕರ್ನಾಕದ ಪ್ರಸಿದ್ಧ್ ಕೃಷ್ಣ ಪರ್ಪಲ್ ಕ್ಯಾಪ್
- 3 ವೈಯಕ್ತಿಕ ಪ್ರಶಸ್ತಿ ಪಡೆಯುವ ಮೂಲಕ ಗಮನ ಸೆಳೆದ ಗುಜರಾತ್ ಟೈಟಾನ್ಸ್ ನ ಸಾಯಿ ಸುದರ್ಶನ್