ಬಹುಭಾಷಾ ನಟಿ ಇಲಿಯಾನ ಡಿಕ್ರೂಸ್ ಮಾಲ್ಡೀವ್ಸ್ ಪ್ರವಾಸದ ಫೋಟೊ, ವಿಡಿಯೊಗಳನ್ನು ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ. ಕಳೆದ ವಾರವೇ ಮಾಲ್ಡೀವ್ಸ್ ದ್ವೀಪದಿಂದ ಹಿಂತಿರುಗಿದ್ದರೂ ಅಲ್ಲಿನ ಮೋಹಕ ಬೀಚ್ ನೆನಪಿನಿಂದ ಇಲಿಯಾನ ಹೊರಗೆ ಬಂದಿಲ್ಲ.
ಡಿಕ್ರೂಸ್ ಅವರಿಗೆ ಮಾಲ್ಡೀವ್ಸ್ ನಲ್ಲಿ ಕಳೆದ ದಿನಗಳನ್ನು ಮರೆಯಲಾಗುತ್ತಿಲ್ಲ ಎಂಬುದಕ್ಕೆ ಅವರು ಹಂಚಿಕೊಳ್ಳುತ್ತಿರುವ ಫೋಟೊ, ವಿಡಿಯೊಗಳೇ ಸಾಕ್ಷಿ. ಬಿಳಿ ಬಣ್ಣದ ಬಿಕಿನಿಯಲ್ಲಿ ಸಮುದ್ರದ ಮಧ್ಯೆ ಬಿಸಿಲಿಗೆ ಮೈಯೊಡ್ಡಿ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಮತ್ತು ವಿಡಿಯೊ ಅಭಿಮಾನಿಗಳನ್ನು ಮೈಮರೆಯುವಂತೆ ಮಾಡಿದೆ.
ಜಿಮ್ನಲ್ಲಿ ಜೆನಿಲಿಯಾ ಜೊತೆ ಹುಡುಗಾಟ ಮಾಡಲಾಗದು, ಯಾಕೆ ಗೊತ್ತೆ? ವಿಡಿಯೊ ನೋಡಿ
ಮಾಲ್ಡೀವ್ಸ್‌ನ ರೆಸಾರ್ಟ್‌ಗೆ ಆಗಮಿಸಿದ್ದು, ಶ್ವೇತ ವರ್ಣದ ಬಿಕಿನಿಯಲ್ಲಿ ದಿನ ಕಳೆದಿದ್ದು ಎಲ್ಲದರ ಸಣ್ಣಸಣ್ಣ ತುಣುಕುಗಳ ಗುಚ್ಛದ ವಿಡಿಯೊವನ್ನು ಇಲಿಯಾನ ಹಂಚಿಕೊಂಡಿದ್ದಾರೆ. ಬೆನ್ನಲ್ಲೇ ಕುಡ ವಿಲ್ಲಿಂಗಿಲಿ ರೆಸಾರ್ಟ್‌ನಲ್ಲಿ ನೇರಳೆ ಬಣ್ಣದ ಬಿಕಿನಿಯಲ್ಲಿ ಪೋಸ್ ನೀಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಮಗಳ ಹಣೆಗೆ ಮುತ್ತಿಟ್ಟ ಶಾಹೀದ್ ಕಪೂರ್ ಪತ್ನಿ: ನೆಟ್ಟಿಗರ ಮನಗೆದ್ದ ಮೀರಾ ಫೋಟೊ
ಶುಭ್ರವಾಗಿ, ಪ್ರಶಾಂತವಾಗಿ ಕಾಣಿಸುತ್ತಿರುವ ಮಾಲ್ಡೀವ್ಸ್‌ನ ಪ್ರಸಿದ್ಧ ‘ವಿಟಮಿನ್ ಸೀ’ ಬೀಚ್ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಇಲಿಯಾನಾ, ‘ಇಲ್ಲಿ ಯಾರಾದರೂ ಇದ್ದೀರಾ?’ ಎಂದು ಕೇಳಿದ್ದಾರೆ.
ಇಲಿಯಾನರ ಮಾಲ್ಡೀವ್ಸ್ ಪ್ರವಾಸದ ಮತ್ತಷ್ಟು ಫೋಟೊ, ವಿಡಿಯೊಗಳಿಗೆ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ.
ತಾಯಿಗೆ ವೈದ್ಯರ ತಪ್ಪು ಸಲಹೆಯಿಂದ ತನ್ನ ಜನನ: ಕೋರ್ಟ್ ಮೆಟ್ಟಿಲೇರಿದ ಯುವತಿಗೆ ಜಯ