Karnataka news paper

‘ಬಲವಂತದ ಮತಾಂತರ ನಡೆದಿಲ್ಲ’: ವರದಿ ಸಲ್ಲಿಸಿದ ನಂತರ ತಹಶೀಲ್ದಾರ್ ವರ್ಗಾವಣೆ!


The New Indian Express

ಶಿವಮೊಗ್ಗ: ಬಲವಂತದ ಮತಾತರ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಹೊಸದುರ್ಗ ತಹಶೀಲ್ದಾರ್ ತಿಪ್ಪೇಸ್ವಾಮಿ, ತಾಲೂಕಿನ ಕೆಲವು ಗ್ರಾಮಗಳಲ್ಲಿ ಬಲವಂತದ ಮತಾಂತರ ನಡೆದಿಲ್ಲ ಎಂದು ವರದಿ ಸಲ್ಲಿಸಿದರು.

ವರದಿಯಿಂದ ಗೂಳಿಹಟ್ಟಿ ಶೇಖರ್ ಗೆ ಮುಜುಗರ ಆದ ಹಿನ್ನೆಲೆಯಲ್ಲಿ ಹೊಸದುರ್ಗ ತಹಶೀಲ್ದಾರ್ ತಿಪ್ಪೇಸ್ವಾಮಿ ವರ್ಗಾವಣೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ನೂತನ ತಹಶೀಲ್ದಾರ್ ಆಗಿ ಮಲ್ಲಿಕಾರ್ಜುನ್ ನಿಯೋಜನೆ ಮಾಡಲಾಗಿದೆ. ಸರ್ಕಾರ ತಿಪ್ಪೇಸ್ವಾಮಿಗೆ ಸ್ಥಳ ನೀಡದೆ ವರ್ಗಾವಣೆ ಮಾಡಿದೆ.

ಸೆಪ್ಟಂಬರ್ ತಿಂಗಳಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ತಮ್ಮ ಕ್ಷೇತ್ರದಲ್ಲಿ ಬಲವಂತದ ಮತಾಂತರ ನಡೆಸಲಾಗುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದ್ದರು,  ನನ್ನ ತಾಯಿ ಕೂಡ ಮತಾಂತರಗೊಂಡಿದ್ದಾರೆ ಎಂದು ಶೇಖರ್ ಹೇಳಿದ್ದರು.  ಅದಾದ ಕೆಲ ದಿನಗಳ ನಂತರ ನನ್ನ ತಾಯಿಯೂ ಸೇರಿದಂತೆ 9 ಮಂದಿ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಇ. ತುಕಾರಾಂಗೆ ಅವಮಾನ ಆರೋಪ: ಯಾವುದೇ ಸ್ಥಾನ ತೋರಿಸದೆ ತಹಸೀಲ್ದಾರ್ ವರ್ಗಾವಣೆ

ಶಾಸಕರ ಹೇಳಿಕೆ ನಂತರ ತಹಶೀಲ್ದಾರ್ ನೀಡಿದ ವರದಿಯಲ್ಲಿ, ಕುಟುಂಬಗಳು ಸ್ವಯಂಪ್ರೇರಣೆಯಿಂದ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು. ಹೊಸದುರ್ಗ ತಾಲೂಕಿನ ಶ್ರೀರಾಂಪುರ ಹೋಬಳಿ ಹಾಗೂ ದೇವಾಪುರ ಹೋಬಳಿ ಸಮೀಪದ ಇನ್ನೊಂದು ಗ್ರಾಮದಲ್ಲಿ ತಹಶೀಲ್ದಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಕೆಲವು ವಾರಗಳ ಹಿಂದೆ 46 ಕುಟುಂಬಗಳ ಸಮೀಕ್ಷೆ ನಡೆಸಿದ್ದರು.

ಹಲವಾರು ಮಾಧ್ಯಮಗಳು ಬಲವಂತದ ಮತಾಂತರದ ಬಗ್ಗೆ ವರದಿ ಮಾಡಿದ ನಂತರ ನಾನು ಸಮೀಕ್ಷೆ ನಡೆಸಿದೆ.  ಜೊತೆಗೆ ಕ್ರಮ ಕೈಗೊಳುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದೆ.  ಜನ ಏನು ಹೇಳಿದ್ದರೂ ಎಂಬುದನ್ನು ನಾನು ನನ್ನ ವರದಿಯಲ್ಲಿ ಉಲ್ಲೇಖಿಸಿದ್ದೇನೆ, ಆದರೆ ವರದಿ ನೀಡಿದ ನಂತರ ನನ್ನ ವರ್ಗಾವಣೆ ಮಾಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಮತಾಂತರದ ಬಗ್ಗೆ ವರದಿ ನೀಡಿದ್ದಕ್ಕೆ ವರ್ಗಾವಣೆ ಮಾಡಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.



Read more