ಕಳೆದ ಕೆಲವು ತಿಂಗಳುಗಳಿಂದ ನಿತ್ಯ ನಿರಂತರವಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಬಂದಿತ್ತು. ಪ್ರತಿದಿನ ಬೆಲೆ ಏರಿಕೆಯಿಂದ ರೋಸಿ ಹೋಗಿದ್ದ ವಾಹನ ಸವಾರರು ಸೋಷಿಯಲ್ ಮೀಡಿಯಾಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಬಳಿಕ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಸಮಯದಲ್ಲಿ ತೈಲ ಬೆಲೆ ಇಳಿಕೆ ಮಾಡಿತ್ತು. ಹಾಗೆ ನೋಡಿದ್ರೆ ಏರಿಕೆಯಾದ ಬೆಲೆಯನ್ನೇ ಸ್ವಲ್ಪ ಮಟ್ಟಿಗೆ ಇಳಿಕೆ ಮಾಡಿದಂತಾಗಿದೆ.
ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಪ್ರಮುಖ ಮಹಾ ನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.
ರಾಷ್ಟ್ರ ರಾಜಧಾನಿ ಹೊಸದಿಲ್ಲಿ
ಪೆಟ್ರೋಲ್: ₹95.41, ಡೀಸೆಲ್: ₹86.67
ಪಶ್ಚಿಮ ಬಂಗಾಳದ ಕೋಲ್ಕೊತ್ತಾ
ಪೆಟ್ರೋಲ್ : ₹104.67, ಡೀಸೆಲ್ : ₹89.79
ಮಹಾರಾಷ್ಟ್ರ ರಾಜಧಾನಿ ಮುಂಬಯಿ
ಪೆಟ್ರೋಲ್ : ₹109.98, ಡೀಸೆಲ್ : ₹94.14
ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್ : ₹101.52, ಡೀಸೆಲ್ : ₹91.54
ಸಿಲಿಕಾನ್ ಸಿಟಿ ಬೆಂಗಳೂರು
ಪೆಟ್ರೋಲ್: ₹100.58, ಡೀಸೆಲ್: ₹85.01
ಕಡಲನಗರಿ ಮಂಗಳೂರು
ಪೆಟ್ರೋಲ್: ₹100.05, ಡೀಸೆಲ್: ₹84.50
ಅರಮನೆ ನಗರಿ ಮೈಸೂರು
ಪೆಟ್ರೋಲ್: ₹100.08, ಡೀಸೆಲ್: ₹84.56
ದೇಶದಲ್ಲಿ ನಿರಂತರವಾಗಿ ಹೆಚ್ಚಳ ಕಾಣುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸದ್ಯ ಕೆಲವು ನಗರಗಳಲ್ಲಿ ತಟಸ್ಥವಾಗಿದ್ದರೆ, ಕೆಲವು ನಗರಗಳಲ್ಲಿ ಏರಿಳಿಕೆಯಾಗಿದೆ. ಪೂರೈಕೆ ಹಾಗೂ ಬೇಡಿಕೆಗೆ ಸಂಬಂಧಿಸಿದ ಸಮಸ್ಯೆಗಳ ವಿಚಾರದಲ್ಲಿ ವಿವಿಧ ತೈಲ ರಫ್ತು ದೇಶಗಳೊಂದಿಗೆ ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರಗಳು ರಾಜ್ಯಗಳ ಸುಂಕ ಹಾಗೂ ತೆರಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಪ್ರದೇಶದಿಂದ ಪ್ರದೇಶಕ್ಕೆ ತೈಲ ದರದಲ್ಲಿ ಬದಲಾವಣೆ ಇರುತ್ತದೆ.