Karnataka news paper

ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಬಹಿಷ್ಕರಿಸಿದ ಅಮೆರಿಕ, ಆಸ್ಟ್ರೇಲಿಯಾಗೆ ಚೀನಾ ಹೇಳಿದ್ದೇನು…?


Source : Online Desk

ಬೀಜಿಂಗ್: ಚೀನಾದಲ್ಲಿ ನಡೆಯಲಿರುವ ಫೆಬ್ರವರಿಯ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟವನ್ನು ಅಮೆರಿಕ, ಆಸ್ಟ್ರೇಲಿಯಾ ರಾಷ್ಟ್ರಗಳು ರಾಜತಾಂತ್ರಿಕವಾಗಿ ಬಹಿಷ್ಕರಿಸಿದ್ದು, ಇನ್ನೂ ಹಲವು ರಾಷ್ಟ್ರಗಳು ಇದೇ ಹಾದಿಯಲ್ಲಿದೆ. 

ರಾಜತಾಂತ್ರಿಕ ಬಹಿಷ್ಕಾರ ಎದುರಿಸಿರುವ ಚೀನಾ ಕೆಂಡಾಮಂಡಲವಾಗಿದ್ದು ಅಮೆರಿಕ ಬಹಿಷ್ಕಾರ ಮಾಡಿದರೆ ಬೀಜಿಂಗ್ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಎಚ್ಚರಿಸಿದೆ.

“ಒಂದು ವೇಳೆ ಅಮೆರಿಕ ಹೀಗೆ ಮಾಡಿದರೆ ಅದು ರಾಜಕೀಯವಾಗಿ ಪ್ರಚೋದನಕಾರಿ ಕ್ರಮವಾಗುತ್ತದೆ ಎಂದು ಅಮೆರಿಕದಲ್ಲಿರುವ ಚೀನಾ ರಾಯಭಾರಿ ಕಚೇರಿಯ ವಕ್ತಾರ ಲಿಯು ಪೆಂಗ್ಯು ಹೇಳಿದ್ದಾರೆ. ಅಮೆರಿಕದ ಕ್ರಮವು ಒಲಿಂಪಿಕ್ ನ ಕ್ರೀಡಾ ಮನೋಭಾವನೆಯನ್ನು ವಿರೂಪಗೊಳಿಸಿದಂತೆ” ಎಂದು ಚೀನಾ ಹೇಳಿದೆ. 

ಇದನ್ನೂ ಓದಿ: ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ಅಮೆರಿಕ ಬೆನ್ನಲ್ಲೇ ಆಸ್ಟ್ರೇಲಿಯಾದಿಂದಲೂ ರಾಜತಾಂತ್ರಿಕ ಬಹಿಷ್ಕಾರ!

ಅಮೆರಿಕ, ಆಸ್ಟ್ರೇಲಿಯಾ ನಂತರ ಬೀಜಿಂಗ್‌ನಲ್ಲಿ 2022 ರ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದ ರಾಜತಾಂತ್ರಿಕ ಬಹಿಷ್ಕಾರ ಮಾಡುವ ಹಾದಿಯಲ್ಲಿ ಕೆನಡಾ ಸಹ ಇದ್ದು, ಈ ವಿಷಯದ ಬಗ್ಗೆ ಮಿತ್ರರಾಷ್ಟ್ರಗಳೊಂದಿಗೆ ಸಮಾಲೋಚನೆ ಮುಂದುವರೆಸಿದೆ. ಗ್ಲೋಬಲ್ ಅಫೇರ್ಸ್ ಕೆನಡಾದ ವಕ್ತಾರ ಕ್ರಿಸ್ಟಲ್ ಚಾರ್ಟೆಂಡ್, ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಗೊಂದಲದ ವರದಿಗಳಿಂದ ಕೆನಡಾ ಕೂಡ ತೀವ್ರವಾಗಿ ವಿಚಲಿತವಾಗಿದೆ ಎಂದು ಹೇಳಿದರು.

ಇನ್ನು ಇಟಲಿ ರಾಷ್ಟ್ರ, ಬೀಜಿಂಗ್ 2022 ರ ಚಳಿಗಾಲದ ಒಲಿಂಪಿಕ್ಸ್‌ನ ಯುಎಸ್ ರಾಜತಾಂತ್ರಿಕ ಬಹಿಷ್ಕಾರದ ಹಾದಿಯನ್ನು ಹಿಡಿಯುವ ಯೋಚಿಸಿಲ್ಲ ಅಂತಾ ಹೇಳಿದೆ. ಭಾರತ ಸರ್ಕಾರ ಬೀಜಿಂಗ್ ಒಲಿಂಪಿಕ್ ರಾಜತಾಂತ್ರಿಕವಾಗಿ ಬಹಿಷ್ಕರಿಸುವ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಘೋಷಣೆ ಮಾಡಿಲ್ಲ.



Read more

Leave a Reply

Your email address will not be published. Required fields are marked *