ಪತಿ-ಪತ್ನಿ ಪರಸ್ಪರ ದಾಖಲಿಸಿರುವ ಎಂಟು ಪ್ರಕರಣಗಳನ್ನು ಒಂಬತ್ತು ತಿಂಗಳೊಳಗೆ ಇತ್ಯರ್ಥಪಡಿಸಬೇಕು. ಆ ಕುರಿತ ವರದಿಯನ್ನು ರಿಜಿಸ್ಟ್ರಾರ್ ಜನರಲ್‌ಗೆ ತಲುಪಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ. ‘ಮಕ್ಕಳ ಸುಪರ್ದಿ ವಿಚಾರ ಧರ್ಮ ಮತ್ತು ನಂಬಿಕೆ ಮೀರಿದ್ದು, ಪ್ರಕರಣದಲ್ಲಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಪತ್ನಿ ಸ್ವತಂತ್ರ ಜೀವನ ನಡೆಸುತ್ತಿದ್ದಾಳೆ. ಪತಿ ಎರಡನೇ ಮದುವೆಯಾಗಿದ್ದು, ಒಂದು ಹೆಣ್ಣು ಮಗು ಜನಿಸಿದೆ. ಹಾಗಾಗಿ ಮೊದಲ ಪತ್ನಿಯ ಮಗು, ತಾಯಿಯ ಪಾಲನೆಯಲ್ಲಿರುವುದೇ ಹೆಚ್ಚು ಸುರಕ್ಷಿತ. ಅದು ಆಕೆಯ ಹಕ್ಕು’ ಎಂದು ನ್ಯಾಯಪೀಠ ತಿಳಿಸಿದೆ.
ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಮುಷ್ತಾಕ್, ದಾವಣಗೆರೆಯ ಅಯೇಷಾ ಬಾನು ಜೊತೆ 2009ರ ಏ.30ರಂದು ವಿವಾಹವಾಗಿದ್ದರು. ದಂಪತಿಗೆ 2012ರ ಆ.1ರಂದು ಗಂಡು ಮಗು ಜನಿಸಿತ್ತು. ನಂತರ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಜೀವನಾಂಶ, ಮಾನನಷ್ಟ ಮೊಕದ್ದಮೆ, ವರದಕ್ಷಿಣೆ ಕಿರುಕುಳ ಸೇರಿ ಪತಿ- ಪತ್ನಿ ನಡುವೆ ಎಂಟು ಪ್ರಕರಣಗಳಿವೆ.