ಪಂಜಾಬ್ ಕಿಂಗ್ಸ್ (PBKS) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳ ನಡುವೆ IPL 2025ರ ಕ್ವಾಲಿಫೈಯರ್ 2 ಕದನಕ್ಕೆ ಇದೀಗ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಜೊತೆ ಫೈನಲ್ ಆಡುವವರು ಯಾರು ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. PBKS ಮತ್ತು MI ಎರಡೂ ಬಲಿಷ್ಠ ತಂಡಗಳಾಗಿವೆ. ಆದ್ದರಿಂದ, ಪಂದ್ಯವು ರೋಚಕವಾಗಿರಲಿದೆ. ಒಂದು ವೇಳೆ ಟೈ ಆದರೆ ಅಥವಾ ಮಳೆಯಿಂದ ಪಂದ್ಯ ರದ್ದಾದರೆ ಆಗ ಈ ಎರಡು ತಂಡಗಳಲ್ಲಿ ಯಾರಿಗೆ ಫೈನಲ್ ಆಡುವ ಅವಕಾಶ? ಇಲ್ಲಿದೆ ಮಾಹಿತಿ.
ಹೈಲೈಟ್ಸ್:
ನರೇಂದ್ರ ಮೋದಿ ಕ್ರೀಡಾಂಗಣಧಲ್ಲಿ PBKS Vs MI ನಡುವೆ ಕ್ವಾಲಿಫೈಯರ್ 2 ಪಂದ್ಯ
ಅಹಮದಾಬಾದ್ ನಲ್ಲಿ ಶುಭ್ರ ವಾತಾವರಣವಿದ್ದು ಪಂದ್ಯದ ವೇಳೆ ಮಳೆಯ ಸಂಭವ ಕಡಿಮೆ
ಆದರೆ ಪಂದ್ಯ ಮಳೆಯಿಂದ ರದ್ದಾದರೆ ಆಘ ಪಂಜಾಬ್ ಕಿಂಗ್ಸ್ ಗೆ ಫೈನಲ್ ಆಡುವ ಅರ್ಹತೆ