Karnataka news paper

ರಾಜ್ಯದಲ್ಲಿ ಓಮಿಕ್ರಾನ್ ಹೆಚ್ಚಳ: ಒಂದೇ ದಿನ ದಕ್ಷಿಣ ಕನ್ನಡದಲ್ಲಿ ಐವರಿಗೆ ಕೋವಿಡ್ ರೂಪಾಂತರಿ, ಬೆಂಗಳೂರಿನಲ್ಲಿ 1 ಕೇಸ್ ಪತ್ತೆ!


The New Indian Express

ಬೆಂಗಳೂರು: ದಿನ ಕಳೆದಂತೆ ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರಿ ತನ್ನ ಕದಂಬಬಾಹು ಚಾಚುತ್ತಿದ್ದು ಮಂಗಳೂರಿನ ಶಿಕ್ಷಣ ಸಂಸ್ಧೆಯೊಂದರಲ್ಲಿ ಇಂದು ಒಂದೇ ದಿನ ಐವರಿಗೆ ಓಮಿಕ್ರಾನ್ ವಕ್ಕರಿಸಿದ್ದು ಬೆಂಗಳೂರಿನಲ್ಲಿ 1 ಪ್ರಕರಣ ಪತ್ತೆಯಾಗಿದೆ.

ದಕ್ಷಿಣ ಕನ್ನಡದಲ್ಲಿ ಐವರಿಗೆ ಓಮಿಕ್ರಾನ್ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ. 

ಶಿಕ್ಷಣ ಸಂಸ್ಥೆಯ ಮೊದಲ ಕ್ಲಸ್ಟರ್ ಒಂದರಲ್ಲಿ ನಾಲ್ವರು ವಿದ್ಯಾರ್ಥಿಗಳು ಓಮಿಕ್ರಾನ್ ಬಂದಿದ್ದರೆ, ಕ್ಲಸ್ಟರ್ ಎರಡರಲ್ಲಿ ಓರ್ವ ವಿದ್ಯಾರ್ಥಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. 

ಇನ್ನು ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ 18 ವರ್ಷದ ಯುವತಿಗೆ ಓಮಿಕ್ರಾನ್ ವಕ್ಕರಿಸಿದೆ. ಇದರೊಂದಿಗೆ ಇಂದು ಆರು ಪ್ರಕರಣ ಪತ್ತೆಯಾಗಿದೆ.

ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಎಂಟು ಮಂದಿಗೆ ಓಮಿಕ್ರಾನ್ ಬಂದಿದ್ದು ಇದೀಗ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 





Read more